Siddeshwara swamiji Health ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಗಂಭೀರ!
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಮಠದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಠದ ಆವರಣದಲ್ಲಿ ಹೆಚ್ಚಿನ ಪೊಲೀಸರು ಭದ್ರತೆ ನಿಯೋಜಿಸಲಾಗಿದೆ. ನಾಳೆ ಸಿಎಂ ಬೊಮ್ಮಾಯಿ ವಿಜಯಪುರಕ್ಕೆ ತೆರಳುತ್ತಿದ್ದಾರೆ.
ವಿಜಯಪುರ(ಜ.02): ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಮತ್ತಷ್ಟು ಏರುಪೇರಾಗಿದೆ. ಇಂದು ಬೆಳಗ್ಗೆ ಗಂಜಿ ಕುಡಿದ ಬಳಿಕ ಯಾವುದೇ ಆಹಾರ ಸೇವಿಸಿಲ್ಲ. ಇತ್ತ ಉಸಿರಾಟದ ಸಮಸ್ಯೆಯೂ ತೀವ್ರಗೊಂಡಿದೆ. ಜೊತೆಗೆ ಬಿಬಿ ಏರುಪೇರಾಗಿದೆ. ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆ ದಾಖಲಾಗಲು ನಿರಾಕರಿಸಿರುವ ಕಾರಣ ಮಠದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಕ್ಷೀಣಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಹಲವು ನಾಯಕರು ಈಗಾಗಲೇ ಮಠದಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಜಯಪುರಕ್ಕೆ ತೆರಳುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಮಠದ ಸುತ್ತಮುತ್ತ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಇಷ್ಟೇ ಅಲ್ಲ ರಾಜ್ಯಾದ್ಯಂತ ಪೊಲೀಸ್ ಭದ್ರತೆಗೆ ಅಲರ್ಟ್ ನೀಡಲಾಗಿದೆ.
ಶ್ರೀಗಳ ಆರೋಗ್ಯ ಕ್ಷೀಣಿಸಿದ ಮಾಹಿತಿ ತಿಳಿದು ಭಕ್ತಾದಿಗಳು ಮಠದತ್ತ ಧಾವಿಸುತ್ತಿದ್ದಾರೆ. ಲಕ್ಷಾಂತರ ಭಕ್ತರು ಶ್ರೀಗಳ ಚೇತರಿಕೆಗಾಗಿ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಶ್ರೀಗಳಿಗೆ ಉಸಿರಾಟ ಸಮಸ್ಯೆ ಆಗಿದೆ. ಆಕ್ಸಿಜನ್ ಮುಂದುವರಿದಿದೆ. ಬಿಪಿಯಲ್ಲಿ ವ್ಯತ್ಯಾಸ ಆಗಿದೆ. ಚಿಕಿತ್ಸೆಗೆ ಬೇಕಾದ ಔಷಧೀಯ ವಸ್ತುಗಳು ಎಲ್ಲ ಸನ್ನದ್ಧವಾಗಿವೆ. ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಬೆಳಗ್ಗೆ ಗಂಜಿ ಕುಡಿದಿದ್ದು ಅಷ್ಟೆ. ನಂತರ ಯಾವ ಆಹಾರವನ್ನೂ ಅವರು ಸೇವಿಸಿಲ್ಲ. ಅಲ್ಲದೆ, ಅವರು ಆಸ್ಪತ್ರೆಗೆ ಬರುವ ನಿರಾಕರಣೆ ಮಾಡುತ್ತಿದ್ದಾರೆ. ಹೀಗಾಗಿ ಶ್ರೀಗಳ ಅಣತಿಯಂತೆ ನಾವು ನಡೆಯುತ್ತಿದ್ದೇವೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಎಸ್.ಬಿ.ಪಾಟೀಲ ಹೇಳಿದ್ದಾರೆ.
Vijayapura: ದೇಶದ ಎರಡನೇ ವಿವೇಕಾನಂದ ಖ್ಯಾತಿಯ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು?
ನಾಡಿನ ಹಲವಾರು ಮಠಾಧೀಶರು, ರಾಜಕೀಯ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಶ್ರೀಗಳ ಆರೋಗ್ಯವನ್ನು ವಿಚಾರಿಸಿದರು. ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ ಸೇರಿದಂತೆ ಅನೇಕರು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಎಂ.ಬಿ.ಪಾಟೀಲರ ಜೊತೆ ಶ್ರೀಗಳು ಕೈ ಸನ್ನೆ ಮಾಡಿ, ಮೆಲು ಧ್ವನಿಯಲ್ಲಿ ಮಾತನಾಡಿದ್ದಾರೆ.
Vijayapura: ಸಿದ್ದೇಶ್ವರ ಶ್ರೀಗಳ ಆರೋಗ್ಯ ಮತ್ತಷ್ಟು ಕ್ಷೀಣ: ಭಕ್ತರಿಂದ ಬೇಗ ಹುಷಾರಾಗಿ ಶ್ರೀಗಳೇ ಅಭಿಯಾನ ಆರಂಭ
ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಬೊಮ್ಮಾಯಿ ವಿಜಯಪುರಕ್ಕೆ ತೆರಳಲಿದ್ದಾರೆ. ಶ್ರೀಗಳ ಶೀಘ್ರ ಗುಣಮುಖರಾಗಲು ಸಿಎಂ ಸೇರಿದಂತೆ ಸರ್ಕಾರದ ಸಚಿವರು ಪ್ರಾರ್ಥಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ ಸಿಎಂ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಎಚ್.ಕೆ. ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಭೇಟಿ ನೀಡಿ ಶ್ರೀ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಅವರು ಶ್ರೀಗಳ ಆರೋಗ್ಯ ವಿಚಾರಿಸಿ, ಹೊರಬಂದ ಬಳಿಕ ಕಣ್ಣೀರು ಸುರಿಸಿದರು. ಸಿದ್ದೇಶ್ವರ ಶ್ರೀಗಳು ಜೀವಂತ ದೇವರು. ಪರಮಾತ್ಮ ಶ್ರೀಗಳಿಗೆ ಇನ್ನಷ್ಟುಆಯುರಾರೋಗ್ಯ ನೀಡಲಿ. ನಮ್ಮೆಲ್ಲರ ಒಂದೊಂದು ದಿನ ಆಯುಷ್ಯ ಕಡಿಮೆ ಮಾಡಿ ಶ್ರೀಗಳಿಗೆ ಕೊಡಲಿ ಎಂದು ಕಣ್ಣೀರಿಟ್ಟರು.