ಜೆಟ್‌ಲ್ಯಾಗ್ ಪಾರ್ಟಿ ಪ್ರಕರಣ; ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಸೇರಿ 8 ಜನರ ವಿಚಾರಣೆ!
'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದರು. ಇಂದು ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆಗೆ ಹಾಜರಾದ ನಟ ದರ್ಶನ್ ಅಂಡ್ ಟೀಂ.
ಬೆಂಗಳೂರು (ಜ.12) : 'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದರು. ಇಂದು ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆಗೆ ಹಾಜರಾದ ನಟ ದರ್ಶನ್ ಅಂಡ್ ಟೀಂ.
ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಮತ್ತು ಅಬಕಾರಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ದಾಖಲಿಸಿಕೊಂಡಿದ್ದ ಪೊಲೀಸರು. ದರ್ಶನ್. ಚಿಕ್ಕಣ್ಣ, ಧನಂಜಯ , ನಿನಾಸಂ ಸತೀಶ್. ರಾಕ್ ಲೈನ್ ವೆಂಕಟೇಶ್, ತರೂಣ್ ಸುದೀರ್ ಸೇರಿ ಎಂಟು ಜನಕ್ಕೆ ನೋಟಿಸ್ ನೀಡಲಾಗಿತ್ತು. ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆಯೇ ಇಂದು ಸುಬ್ರಹ್ಮಣ್ಯನಗರ ಠಾಣೆಗೆ ಹಾಜರಾದ ಕಾಟೇರಾ ಟೀಂ.
ಸ್ಟಾರ್ ನಟನ ಸಿನೆಮಾ ಸಕ್ಸಸ್ ಎಣ್ಣೆ ಪಾರ್ಟಿ ಪ್ರಕರಣ, ಸ್ಯಾಂಡಲ್‌ವುಡ್ ಹಲವು ತಾರೆಯರಿಗೆ ವಿಚಾರಣೆ ಟೆನ್ಶನ್
ಮೂವರು ಇನ್ಸ್‌ಪೆಕ್ಟರ್‌ಗಳಿಂದ ವಿಚಾರಣೆ:
ಮೂವರು ಇನ್ಸ್‌ಪೆಕ್ಟರ್‌ಗಳ ತಂಡದಿಂದ ಎಂಟು ಮಂದಿಯ ವಿಚಾರಣೆ ನಡೆಸಲಿರುವ ಪೊಲೀಸರು. ಸುಬ್ರಮಣ್ಯ ನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್, ಶ್ರೀರಾಮಪುರ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್‌ಪೆಕ್ಟರ್ ಜಗದೀಶ್ ಅವರಿಂದ ವಿಚಾರಣೆ. ಈಗಾಗಲೇ ಸುಬ್ರಮಣ್ಯ ನಗರ ಠಾಣೆಗೆ ಆಗಮಿಸಿರೋ ಮೂವರು ಇನ್ಸ್‌ಪೆಕ್ಟರ್ ಗಳು.
ಸಿನೆಮಾ ಗೆದ್ದ ಖುಷಿಗೆ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್ ನಟ-ನಟಿಯರ ಪಾರ್ಟಿ, ರೆಸ್ಟೋಬಾರ್ ವಿರುದ್ಧ ಎಫ್ಐಆರ್
ಅಭಿಮಾನಿಗಳ ನೂಕು ನುಗ್ಗಲು ಬಿಗಿ ಭದ್ರತೆ:
ದರ್ಶನ್ ಸುಬ್ರಹ್ಮಣ್ಯನಗರ ಠಾಣೆಗೆ ಬರುವ ಸುದ್ದಿ ತಿಳಿಯುತ್ತಿದ್ದಂತೆ ದಾರಿಯುದ್ದಕ್ಕೂ ನಿಂತಿರುವ ಅಭಿಮಾನಿಗಳು. ಎಲ್ಲೆಡೆಯಿಂದ ಬಂದಿರೋ ಅಭಿಮಾನಿಗಳ ದಂಡು. ರಸ್ತೆ ಬದಿಗೆ ಹಗ್ಗ ಹಾಕಿ, ಬಂದೋಬಸ್ತ್ ಮಾಡಿರುವ ಪೊಲೀಸರು. ಅಭಿಮಾನಿಗಳ ನೂಕುನುಗ್ಗಲಿಂದ ರಸ್ತೆಗಳೆಲ್ಲ ಜಾಮ್ ಆಗಿ ಪರದಾಡಿದ ವಾಹನ ಸವಾರರು.
ತನಿಖಾಧಿಕಾರಿ ಸುಬ್ರಮಣ್ಯ ನಗರ ಇನ್ಸ್‌ಪೆಕ್ಟರ್ ಸುರೇಶ್ ಖುದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಲುವಾಗಿ ಪ್ರಶ್ನಾವಳಿ ಸಿದ್ದಪಡಿಸಿರೊ ಪೊಲೀಸರು. ದರ್ಶನ್ ಸೇರಿ ಎಂಟು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿರೋ ಪೊಲೀಸರು.