Asianet Suvarna News Asianet Suvarna News

ಸಿನೆಮಾ ಗೆದ್ದ ಖುಷಿಗೆ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ ನಟ-ನಟಿಯರ ಪಾರ್ಟಿ, ರೆಸ್ಟೋಬಾರ್ ವಿರುದ್ಧ ಎಫ್ಐಆರ್

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸಿನೆಮಾವೊಂದು ಯಶಸ್ಸು ಕಂಡ ಹಿನ್ನೆಲೆ ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ಸಕ್ಸಸ್‌ ಪಾರ್ಟಿ ಮಾಡಿದ್ದರು. ಆದರೆ ನಿಯಮ ಉಲ್ಲಂಘಿಸಿ ನಟ ನಟಿಯರ ಹೈ ಎಂಎಡ್ ಪಾರ್ಟಿ ಮಾಡಿದ್ದು ಇದೀಗ ಜಟ್ಲಾಗ್ ರೆಸ್ಟೋಬಾರ್  ವಿರುದ್ಧ ಎಫ್ಐಆರ್ ದಾಖಲಾಗಿದೆ.

illegal Celebrity party FIR against Bengaluru Jetlag Bar gow
Author
First Published Jan 6, 2024, 11:33 AM IST

ಬೆಂಗಳೂರು (ಜ.6):  ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸಿನೆಮಾವೊಂದು ಯಶಸ್ಸು ಕಂಡ ಹಿನ್ನೆಲೆ ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ಸಕ್ಸಸ್‌ ಪಾರ್ಟಿ ಮಾಡಿದ್ದರು. ಆದರೆ ನಿಯಮ ಉಲ್ಲಂಘಿಸಿ ನಟ ನಟಿಯರ ಹೈ ಎಂಎಡ್ ಪಾರ್ಟಿ ಮಾಡಿದ್ದು ಇದೀಗ ಜಟ್ಲಾಗ್ ರೆಸ್ಟೋಬಾರ್  ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕ್ಲೋಸಿಂಗ್ ಟೈಮ್ ಮುಗಿದರೂ ಅಲ್ಲೇ ಪಾರ್ಟಿಗೆ ಅವಕಾಶ ನೀಡಿದ ಹಿನ್ನೆಲೆ ಜಟ್ಲಾಗ್  ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್‌ ಪ್ರಶಾಂತ್ ವಿರುದ್ದ  ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

5 ಬಾರಿ ಮದುವೆಯಾದ ನಟಿಗೆ ಒಲಿಯದ ಗಂಡಂದಿರ ಪ್ರೀತಿ, ನಯಾಪೈಸೆ ಇಲ್ಲದೆ ಮರಣ, ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ!

ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ. ಆದರೆ ಜಟ್ಲಾಗ್  ರೆಸ್ಟೋಬಾರ್ ಈ ನಿಮಯಮ ಉಲ್ಲಂಘಿಸಿ ಬೆಳಗಿನ ಜಾವ 3.30ರವರೆಗೂ ಪಾರ್ಟಿ ಮಾಡಲು ಸೆಲೆಬ್ರಿಟಿಗಳಿಗೆ ಅವಕಾಶ ಕೊಟ್ಟಿತ್ತು. 

ರೆಸ್ಟೋಬಾರ್ ಬೆಳಗ್ಗಿನ ಜಾವ 3 ಗಂಟೆಯಾದ್ರೂ ತೆಗೆದೇ ಇರುವ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್ಲಾಗ್ ರೆಸ್ಟೋಬಾರ್ ಮೇಲೆ ದಾಳಿ‌ ನಡೆಸಿದ್ದ ಪೊಲೀಸರು  ಕೂಡಲೇ ಬಾರ್ ಕ್ಲೋಸ್ ಮಾಡಿಸಿ 3.30ರ ಸುಮಾರಿಗೆ ಜಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನ ಮನೆಗೆ ಕಳುಹಿಸಿದ್ದಾರೆ.

100ಕ್ಕೂ ಹೆಚ್ಚು ಹಿಟ್‌ ಚಿತ್ರ ಕೊಟ್ಟ ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್‌ ಹತ್ಯೆಗೆ ಸಹನಟನಿಂದಲೇ ಗುಂಡಿನ ದಾಳಿ!

ಅಬಕಾರಿ ಹಾಗೂ ಪೊಲೀಸ್ ಕಾಯ್ದೆ ಷರತ್ತು ಮೀರಿರೋ ಹಿನ್ನೆಲೆ ಜಟ್ಲಾಗ್ ರಸ್ಟೋಬಾರ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ಕ್ಯಾಶಿಯರ್ ಪ್ರಶಾಂತ್ ವಿರುದ್ದ ಎಫ್ಐಆರ್ ದಾಖಲಿಸಿದ್ದು, ಸದ್ಯ ಸುಬ್ರಹ್ಮಣ್ಯ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸ್ಟಾರ್‌ ನಟನೊಬ್ಬನ ಅಭಿನಯದ ಸಿನೆಮಾ ಬಿಡುಗಡೆಯಾಗಿ ಸಕ್ಸಸ್‌ ಕಂಡಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಈ ಸಕ್ಸಸ್‌ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.

ಜೆಟ್ ಲ್ಯಾಗ್ ನಲ್ಲಿ ಪಾರ್ಟಿ ವಿಚಾರವಾಗಿ ಮಾತನಾಡಿರುವ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ಮೂರನೇ ತಾರೀಖು ನೈಟ್ ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯ ಜೆಟ್ ಲಾಗ್ ನಲ್ಲಿ ಕೆಲವರು ಬಂದು ಪಾರ್ಟಿ ಮಾಡಿದ್ದಾರೆ. ಒಂದು ಗಂಟೆ ನಂತರವೂ ಮಾಲೀಕರು ಮಧ್ಯ ಸರ್ವ್ ಮಾಡಿದ್ದಾರೆ. ಮರುದಿನ ಪಿಎಸ್ ಐ ದೂರು ನೀಡಿದ್ದಾರೆ. ಕೆಪಿ ಆ್ಯಕ್ಟ್, ಅಬಕಾರಿ ಆ್ಯಕ್ಟ್ ಅಡಿಗಳಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ. ಸುಬ್ರಮಣ್ಯ ನಗರ ಇನ್ಸ್ ಪೆಕ್ಟರ್ ತನಿಖೆ ನಡೆಸುತಿದ್ದಾರೆ. 12:30 ಕ್ಕೆ ಬಂದು ಅಧಿಕಾರಿ ತಿಳಿಸಿದಾಗ ಬಂದ್ ಮಾಡೋದಾಗಿ ಹೇಳಿದ್ದಾರೆ. ಅದಾದ ಬಳಿಕ ಬೇರೆ ಕೆಲಸದ ನಿಮಿತ್ತ ಅಧಿಕಾರಿ ಹೊಗಿದ್ದಾರೆ.

ಅದಾದ ಬಳಿಕವೂ ಸಹ ಪಾರ್ಟಿ ಮಾಡಿರೊದು ಕಂಡು ಬಂದಿದೆ. ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪಾರ್ಟಿಯಲ್ಲಿ ಡ್ರಗ್ಸ್ ಯಾವುದೂ ಬಳಕೆ ಮಾಡಿರೋದು ಕಂಡು ಬಂದಿಲ್ಲ. ಮಧ್ಯ ಸೇವನೆ ಮಾಡಿರೋದು ಕಂಡು ಬಂದಿದೆ. ಪ್ರತೀದಿನ ಒಂದು ಗಂಟೆಗೆ ಅಲ್ಲಿ ಕ್ಲೋಸ್ ಮಾಡಲಾಗಿತ್ತು. ಅಂದು ಮಾತ್ರ ಪಬ್ ಓಪನ್ ಮಾಡಲಾಗಿತ್ತು. ಆ ರಾತ್ರಿ ಪೊಲೀಸ್ ಇಲಾಖೆಯಲ್ಲಿ ಯಾರ್ಯಾರು ನೈಟ್ ರೌಂಡ್ಸ್ ಇದ್ದರು ಅವರ ಮೇಲೆ ಕ್ರಮವಾಗುತ್ತೆ ಎಂದಿದ್ದಾರೆ.

Follow Us:
Download App:
  • android
  • ios