ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಜೀವನ ಚರಿತ್ರೆ ಆಧರಿತ ಹೊತ್ತಗೆ ‘ಫರೋಸ್ ಇನ್ ಎ ಫೀಲ್ಡ್: ದ ಅನ್‌ಎಕ್ಸ್‌ಪ್ಲೋರ್‌ಡ್ ಲೈಫ್ ಆ ಫ್ ಎಚ್.ಡಿ.ದೇವೇಗೌಡ’ ಬಿಡುಗಡೆ
ನವದೆಹಲಿ (ಡಿ.14): ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ (JDS Leader HD Devegowda) ಜೀವನ ಚರಿತ್ರೆ ಆಧರಿತ ಹೊತ್ತಗೆ ‘ಫರೋಸ್ ಇನ್ ಎ ಫೀಲ್ಡ್: ದ ಅನ್‌ಎಕ್ಸ್‌ಪ್ಲೋರ್‌ಡ್ ಲೈಫ್ ಆ ಫ್ ಎಚ್.ಡಿ.ದೇವೇಗೌಡ’ (Furrows in a Field: The Unexplored Life of HD DeveGowda) ನವದೆಹಲಿಯಲ್ಲಿ (Delhi) ಸೋಮವಾರ ಲೋಕಾರ್ಪಣೆಗೊಂಡಿತು. ಇಲ್ಲಿನ ಮಲ್ಟಿ ಪರ್ಪಸ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಆನ್‌ಲೈನ್ ವೇದಿಕೆಯ ಮೂಲಕ ನಮ್ಮ ರಾಷ್ಟ್ರದ ಶ್ರೇಷ್ಠ ನ್ಯಾಯವಾದಿಗಳಲ್ಲಿ ಒಬ್ಬರಾದ ಫಾಲಿ ಎಫ್.ನಾರಿಮನ್ ಅವರು ಕೃತಿಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ದೇವೇಗೌಡರ ಸುದೀರ್ಘ ರಾಜಕೀಯ (Politics) ಜೀವನದ ಮಜಲುಗಳನ್ನು ಮೆಲುಕು ಹಾಕಿದರು. ಮುಖ್ಯವಾಗಿ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ಜಲವಿವಾದಗಳ ಬಗ್ಗೆ ಗೌಡರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮುಖ್ಯವಾಗಿ ಉಲ್ಲೇಖ ಮಾಡಿದರು.
ಫಾರೂಕ್ ಅಬ್ದುಲ್ಲಾ ಕಣ್ಣೀರು: ಜಮ್ಮು-ಕಾಶ್ಮೀರದ (Jammu Kashmir) ಮಾಜಿ ಮುಖ್ಯ ಮಂತ್ರಿ ಫಾರೂಕ್ ಅಬ್ದುಲ್ಲಾ ಮಾತನಾಡಿ, ಕಣಿವೆಯಲ್ಲಿ ಬಹಳ ದುಸ್ತರ ಸಂದರ್ಭವಿದ್ದ ವೇಳೆಯಲ್ಲಿ ಗೌಡರು ಈ ದೇಶದ ಪ್ರಧಾನಿ ಆಗಿದ್ದರು. ಆಗ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಗೌಡರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಅವರು ತೆಗೆದುಕೊಂಡ ದೃಢ ನಿರ್ಧಾರದಿಂದಾಗಿಯೇ ಅಷ್ಟು ವಿಷಮ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ (Election) ನಡೆದು ನಾನು ಅಧಿಕಾರಕ್ಕೆ ಬಂದೆ ಎಂದು ಗದ್ಗದಿತರಾದರು. ಈ ಕಾರಣಕ್ಕೆ ಜಮ್ಮು, ಕಾಶ್ಮೀರ, ಲಡಾಖ್ ಜನರು ಎಂದೆಂದಿಗೂ ದೇವೇಗೌಡರಿಗೆ ಋುಣಿಯಾಗಿರುತ್ತಾರೆಂದು ಅವರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಹೇಳಿದರು.
ದೇವೇಗೌಡರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ, ಜನರಲ್ ಧಿಲ್ಲೋನ್, ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚನ್ನಮ್ಮ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ಇದ್ದರು. ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಈ ಕೃತಿಯನ್ನು ರಚಿಸಿದ್ದಾರೆ.
ನಾನು ಮಂಡ್ಯಕ್ಕೆ ಎಲ್ಲವನ್ನೂ ಕೊಟ್ಟಿದ್ದೇನೆ :
ಕೇಂದ್ರದಿಂದ ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ. ನಾನು ಮಂಡ್ಯಕ್ಕೆ (Mandya) ಸಾಕಷ್ಟು ಕೊಡುಗೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಾಸನಕ್ಕೆ ಅನುದಾನ, ಐಐಟಿ ಕಾಲೇಜು ಕೇಳಿದ್ದೀರಿ, ಮಂಡ್ಯಕ್ಕೆ ಏನು ಕೇಳಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ. ರೈತರಿಗೆ ಹಲವಾರು ನೀರಾವರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ವರುಣಾ ನಾಲಾ ಚಳವಳಿಯಲ್ಲಿ ಚಡ್ಡಿ ಮೆರವಣಿಗೆ ನಡೆಸಿದ್ದೇನೆ. ಜಿಲ್ಲೆಯ ರೈತರ ಪರವಾಗಿ ದನಿ ಎತ್ತಿ ಹೋರಾಟ ನಡೆಸಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಎಂದೂ ಬಿಜೆಪಿ ಕಾಂಗ್ರೆಸ್ ಸೇರಲ್ಲ : ದೇಶದ ರಾಜಕಾರಣ(Politics) ತುಂಬ ಹದೆಗಟ್ಟಿದೆ. ಆದರೆ ನನ್ನ ರಾಜಕೀಯ ನಿಷ್ಠೆಯನ್ನು ಯಾವ ವ್ಯಕ್ತಿಯು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಆತ್ಮ, ಶರೀರ ಇರುವರೆಗೂ ನಾನು ಕಾಂಗ್ರೆಸ್, ಬಿಜೆಪಿ ಸೇರುವ ವ್ಯಕ್ತಿ ಅಲ್ಲ. ಇಂದಿರಾಗಾಂಧಿಯೆ ನನ್ನನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ಮಾಡಿದರೂ ನಾನು ಹೋಗಲಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ಹೇಳಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್(JDS) ಅಭ್ಯರ್ಥಿ ವಕ್ಕಲೇರಿ ರಾಮು ಪರ ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸನದಲ್ಲಿಯೆ(Hassan) ರಾಹುಲ್ ಗಾಂಧಿ(Rahul Gandhi) ಮೂಲಕವೇ ಜೆಡಿಎಸ್, ಬಿಜೆಪಿ(BJP) ಬಿ ಟೀಮ್ ಎಂದು ಹೇಳಿಸಿದವರೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಫಾರ್ಮಾನು ಪಡೆದು ನನ್ನ ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿಯನ್ನು(HD Kumaraswamy) ಸಿಎಂ ಮಾಡಿಯೆಂದು ಬೇಡಿಕೊಂಡರು ಎಂದು ರಾಜ್ಯ ಕಾಂಗ್ರೆಸ್(Congress) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು
