ಹೆಚ್‌ಡಿಕೆ ವಿರುದ್ಧ ಹಂದಿ ಪದ ಬಳಕೆ: ಎಡಿಜಿಪಿ ವಿರುದ್ಧ ತಿರುಗಿಬಿದ್ದ ಜೆಡಿಎಸ್

ಎಡಿಜಿಪಿ ಅವರು ಭೂಕಳ್ಳರು ,ಲ್ಯಾಂಡ್ ಮಾಫೀಯಾ ಜೊತೆ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಎಡಿಜಿಪಿ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

JDS activists demand action against IPS officer M Chandrashekar for allegedly using abusive words against hd kumaraswamy rav

ಚಿಕ್ಕಬಳ್ಳಾಪುರ (ಅ.3): ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರ ಸ್ವಾಮಿ ಬಗ್ಗೆ ಅವಹೇಳನಕಾರಿ ಪದ ಬಳಸಿರುವ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಅಮಾನತು ಮಾಡಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಮಂಗಳವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ, ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಎಡಿಜಿಪಿ ಚಂದ್ರಶೇಖರ್ ಅವಹೇಳನಕಾರಿ ಪದ ಬಳಕೆ ಮಾಡಿರುವುದನ್ನು ನೋಡಿದರೆ ಎಡಿಜಿಪಿ ಚಂದ್ರಶೇಖರ್ ಬ್ಲ್ಯಾಕ್‌ ಮೇಲರ್ ಮತ್ತು ಕ್ರಿಮಿನಲ್ ಆಗಿರಬಹುದು ಎನಿಸುತ್ತದೆ. ಚಂದ್ರಶೇಖರ್‌ಗೆ ರಾಜಕಾರಣ ಮಾಡಲು ಇಷ್ಟ ಆದರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ ಎಂದರು.

ನನ್ನನ್ನು 1 ದಿನವಾದ್ರೂ ಜೈಲಿಗಟ್ಟಲು ಸಿದ್ದರಾಮಯ್ಯ ಗ್ಯಾಂಗ್‌ ಸಂಚು ಮಾಡಿತ್ತು: ಎಚ್‌ಡಿಕೆ

ಹಿಮಾಚಲಪ್ರದೇಶ ಕೇಡರ್‌

ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ, ಹಕ್ಕುಚ್ಯುತಿ ಈ ರೀತಿಯ ಕಾನೂನು ಹೋರಾಟಗಳು ಇವೆ. ಕುಮಾರಣ್ಣ‌ನಿಗೆ ಬೈಯಲು ಬೈಯ್ಯಲು ಸರ್ಕಾರ ಸಂಬಳಕೊಟ್ಟು ಇಟ್ಟುಕೊಂಡಿದೆಯಾ ಎಂದು ಪ್ರಶ್ನಿಸಿದ ಅ‍ವರು, ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶ ಐಪಿಎಸ್ ಕೇಡರ್ ಗೆ ಸೇರಿದವರಾಗಿದ್ದರೂ, ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು, ತದನಂತರ ಕರ್ನಾಟಕ ಐ.ಪಿ.ಎಸ್. ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಹಲವಾರು ಪ್ರಮುಖ ಆಯಕಟ್ಟಿನ ಹುದ್ದೆಗಳಲ್ಲಿ ನೇಮಕಗೊಂಡು ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಈ ಆಯಕಟ್ಟಿನ ಜಾಗದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಹಲವಾರು ಭೂಗಳ್ಳರು, ವ್ಯಾಪಾರಸ್ಥರು, ಉದ್ಯಮಿಗಳು, ಸಮಾಜಘಾತಕರು ಹಾಗೂ ಇತರರೊಂದಿಗೆ ಒಡನಾಟ ಬೆಳೆಸಿಕೊಂಡು ಶಾಮೀಲಾಗಿ ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಅಧಿಕಾರಿ ಸರಣಿ ಅಪರಾಧಗಳನ್ನು ಎಸೆಗಿರುವ ಭ್ರಷ್ಟ ಅಧಿಕಾರಿಯಾಗಿದ್ದು, ಈತನ ವಿರುದ್ದ ಹಲವಾರು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲದಲ್ಲಿವೆ. ಕೂಡಲೆ ಈತನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಎಡಿಜಿಪಿ ಸರ್ಕಾರದ ಕೈಗೊಂಬೆ

ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ಕೇಂದ್ರದ ಮಂತ್ರಿ ಆದಂತಹ ಹೆಚ್.ಡಿ. ಕುಮಾರ ಸ್ವಾಮಿ ಅವರನ್ನು ರಾಜಕೀಯ ದುರುದ್ದೇಶ ದಿಂದ ಬೈಯುವುದು ತಪ್ಪು , ಎಡಿಜಿಪಿ ಚಂದ್ರ ಶೇಖರ್ ಅವರು ರಾಜ್ಯ ಸರಕಾರದ ಕೈಗೊಂಬೆ ರೀತಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಡಿಜಿಪಿ ಚಂದ್ರ ಶೇಖರ್ ಅವರು ಕುಮಾರ ಸ್ವಾಮಿ ಎಂದರೆ ಏನು ಅಂತ ತಿಳಿದು ಕೊಂಡಿದ್ದಾರೆ. ಎರಡು ಬಾರಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು. ಆದರೂ ಎಚ್ಡಿಕೆ ವಿರುದ್ಧ ಚಂದ್ರಶೇಖರ್ ಬಳಸಿರುವ ಪದ ಅಕ್ಷ್ಯಮ್ಯ ಎಂದರು.

ತಪ್ಪಾಯ್ತು ಅಂಥಾ ಕಳ್ಳ ಹೇಳಿದ್ರೆ ಪೊಲೀಸರು ಬಿಟ್‌ಬಿಡ್ತಾರಾ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಎಡಿಜಿಪಿ ಅವರು ಭೂಕಳ್ಳರು ,ಲ್ಯಾಂಡ್ ಮಾಫೀಯಾ ಜೊತೆ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಡಿಜಿಪಿ ಅವರನ್ನು ಹಿಂದೆ ಇದ್ದಂತಹ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಹೇಳಿದರು . ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಮುಖಂಡರಾದ ಕಿಸಾನ್ ಕೃಷ್ಣಪ್ಪ, ಸತೀಶ್, ಶಾಂತ ಮೂರ್ತಿ,ನಾಗರಾಜ್, ಜಿ.ವಿ ಮಂಜುನಾಥ್, ದಿನೇಶ್, ಅಮರ್, ವೆಂಕಟೇಶ,ಲಕ್ಷ್ಮಿನರಸಪ್ಪ,ಜಗದೀಶ್, ಮಂಜುನಾಥ್, ನಂಜೇಗೌಡ,ವೇದಾವತಿ ಕಾಂತರಾಜು, ಪಾರಿಜಾತಮ್ಮ ಹಾಗೂ ಕಾರ್ಯಕರ್ತರು ಇದ್ದರು.

Latest Videos
Follow Us:
Download App:
  • android
  • ios