ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಮಗ ಕಿರಿಟಿ ರೆಡ್ಡಿ ಅಭಿನಯದ 'ಜೂನಿಯರ್' ಸಿನಿಮಾ ವೀಕ್ಷಿಸಿ ಭಾವುಕರಾದರು. ಶ್ರೀ ರಾಮುಲು ಜೊತೆಗಿನ ಸ್ನೇಹದ ಬಗ್ಗೆಯೂ ಸ್ಪಷ್ಟನೆ ನೀಡಿದರು. ಕಿರಿಟಿಯ ನಟನೆಯನ್ನು ಮೆಚ್ಚಿ, ಅವರ ಸಿನಿಮಾ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಮಗ ಕಿರಿಟಿ ರೆಡ್ಡಿ ಅಭಿನಯದ ‘ಜೂನಿಯರ್’ ಸಿನಿಮಾ ಬಿಡುಗಡೆ ಭಾವುಕರಾದರು. ಸಿನಿಮಾವನ್ನು ಕುಟುಂಬ ಸಮೇತ ಬಳ್ಳಾರಿಯ ಟಾಕೀಸ್‌ನಲ್ಲಿ ವೀಕ್ಷಿಸಿದ ರೆಡ್ಡಿ, ತಮ್ಮ ಮಗನ ನಟನೆ ಮೂಲಕ ಬೆಳೆದಿರುವುದನ್ನು ಕಂಡು ಹೆಮ್ಮೆ ವ್ಯಕ್ತಪಡಿಸಿದರು. ಸಂದರ್ಭದಲ್ಲಿ ಶ್ರೀ ರಾಮುಲು ಮತ್ತು ಸ್ನೇಹ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದರು.
ಸಿನಿಮಾ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಾಮುಲು ಅವರೊಂದಿಗೆ ತಮ್ಮ ಸ್ನೇಹದ ಕುರಿತು ಬೇರೆಯವರು ಮಧ್ಯಸ್ಥಿಕೆ ಮಾಡುವ ಅಗತ್ಯವಿಲ್ಲ ಎಂದರು. ರಾಮುಲು ಮತ್ತು ನಾನು ನಾಲ್ಕು ದಶಕಗಳಷ್ಟು ಹಳೆಯ ಸ್ನೇಹ ಹೊಂದಿದ್ದೇವೆ. ನಮ್ಮ ಸ್ನೇಹ ಯಾವುದೇ ಘಟನೆಗಳಿಂದ ಬದಲಾಗದು. ನಾವು ಜೊತೆಯಲ್ಲಿ ಸಿನಿಮಾ ನೋಡೋಷ್ಟು ಹತ್ತಿರವಾಗಿದ್ದೇವೆ. ಈ ಸಂಬಂಧ ಯಾರೂ ಮಾತಾಡಬೇಕಾಗಿಲ್ಲ. ಈಗ ಯಾವುದರ ಬಗ್ಗೆ ಮಾತನಾಡಲ್ಲ ನಮ್ಮಿಬ್ಬರ ಮಧ್ಯೆ ಯಾರು ಬೇಕಿಲ್ಲ. ರಾಮುಲು ನಾನು ಇಬ್ಬರು ಒಟ್ಟಿಗೆ ಸಿನಿಮಾ ಜೂನಿಯರ್ ಸಿನಿಮಾ ನೋಡ್ತೇವೆ. ಯಾವುದೇ ವಿಚಾರದಲ್ಲಿ ಪ್ರೀತಿ ಅಭಿಮಾನ ಅನ್ನೋದು ಒಂದು ಘಟನೆ ಯಿಂದ ಬದಲಾವಣೆ ಅಗಲ್ಲ. ನಮ್ಮಮಾಮುಲು ಸ್ನೇಹ ಅಲ್ಲ ಹದಿನೈದನೇ ವರ್ಷದ ಸ್ನೇಹ ನಲವತ್ತು ವರ್ಷದಿಂದ ಜೊತೆಗಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದರು.
ಕುಟುಂಬ ಸಮೇತರಾಗಿ ‘ಜೂನಿಯರ್’ ಸಿನಿಮಾವನ್ನು ರೆಡ್ಡಿ ತಮ್ಮ ಪತ್ನಿ ಅರಣಾ, ಸಹೋದರ ಸೋಮಶೇಖರ್ ರೆಡ್ಡಿ ಹಾಗೂ ಪುತ್ರ ಕಿರಿಟಿಯೊಂದಿಗೆ ವೀಕ್ಷಿಸಿದರು. ಮಗನಿಗೆ ಬಾಲ್ಯದಿಂದಲೇ ಸಿನಿಮಾಗೆ ಆಸಕ್ತಿ ಇತ್ತು. ಮನೆಯಲ್ಲಿ ರಾಜಕೀಯದ ಬಗ್ಗೆ ಎಷ್ಟೇ ಮಾತು ನಡೆದರೂ, ಆತ ಸಿನೆಮಾದ ಬಗ್ಗೆ ಮಾತ್ರ ಸಂಪೂರ್ಣ ಗಮನ ಹರಿಸುತ್ತಿದ್ದ. ಮನೆಯಲ್ಲಿ ಎಷ್ಟೇ ರಾಜಕೀಯ ಇದ್ರೂ ಮಗ ಸಿನಿಮಸ ಬಿಟ್ರೇ ಯಾವುದಾದರ ಬಗ್ಗೆಯೂ ಕಾನ್ಸಂಟ್ರೇಶನ್ ಮಾಡಲಿಲ್ಲ ಎಂದರು.
ಕಿರಿಟಿ ಅಭಿನಯದ ಮೆಚ್ಚುಗೆ, ಜನರಿಂದ ಸಂಭ್ರಮ
ಬಳ್ಳಾರಿಯಲ್ಲಿ ಚಿತ್ರ ರಾಧಿಕಾ, ನಟರಾಜ್, ಎಸ್ಎಲ್ಎನ್ ಮಾಲ್ ಸೇರಿದಂತೆ ನಾಲ್ಕು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಕಿರಿಟಿಯ ಅಭಿನಯ, ಫೈಟ್ ಸೀನ್ಸ್ ಹಾಗೂ ಎನರ್ಜಿಟಿಕ್ ಡ್ಯಾನ್ಸ್‌ಗಳಿಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಟಾಕೀಸ್ ಮುಂದೆ ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿಕೊಳ್ಳುವ ಮೂಲಕ ಭಕ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಪುನೀತ್ ಮತ್ತು ಎನ್‌ಟಿಆರ್ ಪ್ರಭಾವ
ಕಿರಿಟಿ ಪುನೀತ್ ರಾಜಕುಮಾರ್ ಮತ್ತು ಎನ್‌ಟಿಆರ್ ಅವರನ್ನು ನೋಡುತ್ತಾ ಬೆಳೆದಿದ್ದಾನೆ. ಅವರಿಂದ ಪ್ರೇರಣೆಯಾಗಿ ಇಂದು ಬೆಳೆದು ಈ ಮಟ್ಟಕ್ಕೆ ಬಂದಿದ್ದಾನೆ. ಈ ಸಿನಿಮಾ ಖಚಿತವಾಗಿಯೂ ಯಶಸ್ಸು ಗಳಿಸಲಿದೆ ಎಂದು ನನಗೆ ಭರವಸೆ ಇದೆ ಎಂದು ಜನಾರ್ಧನ ರೆಡ್ಡಿ ಹೇಳಿದರು.
