ದೈವಾರಾಧನೆ ಮೂಲಕ ಸಾಮಾಜಿಕ ಏಕತೆ ಸಾರಿದ ಸಮುದಾಯ ಜೈನರದು: ನಳಿನ್ ಕುಮಾರ್ ಕಟೀಲ್

ದೈವಾರಾಧನೆ ಮೂಲಕ ಸಾಮಾಜಿಕ ಏಕತೆ ಸಾರಿದ ಸಮುದಾಯ ಜೈನರದು. ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಗೆ ಅತೀ ಹೆಚ್ಚಿನ ಕೊಡುಗೆ ಜೈನ ಸಮುದಾಯ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

Jains community that spread social unity through divine worship Says Nalin Kumar Kateel gvd

ಬೆಳ್ತಂಗಡಿ (ಫೆ.27): ದೈವಾರಾಧನೆ ಮೂಲಕ ಸಾಮಾಜಿಕ ಏಕತೆ ಸಾರಿದ ಸಮುದಾಯ ಜೈನರದು. ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಗೆ ಅತೀ ಹೆಚ್ಚಿನ ಕೊಡುಗೆ ಜೈನ ಸಮುದಾಯ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾಗಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಸ್ತಾಕಾಭೀಷೇಕದ ನಾಲ್ಕನೇ ದಿನವಾದ ಭಾನುವಾರ ಭರತೇಶ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೈನ ಮುನಿಗಳು ಕಠೋರ ಜೀವನ ಕ್ರಮ ಪಾಲಿಸುವ ಮೂಲಕ ಅಹಿಂಸಾ ಪರಮೋಧರ್ಮದ ಸಂದೇಶ ಸಾರಿದ್ದಾರೆ‌. 

ಅಂತಹಾ ತ್ಯಾಗಿ ಬಾಹುಬಲಿ ಸ್ವಾಮಿಯ 12 ವರುಷಗಳ ಬಳಿಕದ ಮಹಾಮಜ್ಜನ ಕಾಲಘಟ್ಟದಲ್ಲಿ ನಾವಿರುವುದೇ ಸುಯೋಗ. ಅಧಿಕಾರ ಶ್ರೀಮಂತಿಕೆಯಿಂದ ಹೊರತಾದ ಜೀವನ ಶ್ರೇಷ್ಠ ಕ್ಷಣಗಳಿವೆ ಎಂಬುದಕ್ಕೆ ಮಹಾಚಕ್ರವರ್ತಿ ಬಾಹುಬಲಿಯ ತ್ಯಾಗವೇ ಸಾಕ್ಷಿ ಎಂದರು. ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಜಗತ್ತಿಗೇ ಅಹಿಂಸೆಯ ಸಂದೇಶ ಸಾರಿದ ಶ್ರೇಷ್ಠ ಧರ್ಮ ಜೈನ ಧರ್ಮ. ಸಮಾಜದಲ್ಲಿ ಬದುಕು ಬದುಕಲು ಬಿಡು ಎಂಬ ತತ್ವದೊಂದಿಗೆ ನಾವು ಜೀವಿಸಬೇಕಿದೆ. ಸಂಖೆಯಲ್ಲಿ ಅಲ್ಪಸಂಖ್ಯಾತರಾದರು ಅತ್ಯಂತ ಅಧಿಕ ಪ್ರಮಾಣದಲ್ಲಿ ತೆರಿಗೆ ಪಾವತಿಸುವ ಮೂಲಕ ಜೈನ ಸಮುದಾಯ

ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ನನ್ನ ಆಸ್ತಿ ಇನ್ನೂ ಜಾಸ್ತಿ ಇದೆ: ಸಂಸದ ರಮೇಶ ಜಿಗಜಿಣಗಿ

ಕಾಯಕಜೀವಿಗಳು ಎಂದು ತೋರಿಸಿಕೊಟ್ಟಿದ್ದಾರೆ. ಮಹಾಮಸ್ತಕಾಭಿಷೇಕದ ಮೂಲಕ ಧರ್ಮ ಪ್ರಭಾವನೆ ಮೂಡಿ ಜಗತ್ತಿಗೆ ಶಾಂತಿ ನೆಲೆಸಲಿ ಎಂದು ಆಶಿಸಿದರು. ಸ್ವರ್ಣಲತಾ ಪ್ರಭಾತ್ ನೆಲ್ಲಿಕಾರು ಬರೆದಿರುವ ರಾಜೇಶ್ ಭಟ್ ಸಂಗೀತ ಸಂಯೋಜನೆಯಲ್ಲಿ ವೃತಿಕ್ ಜೈನ್ ಪಡ್ಯೋಡಿಗುತ್ತು ಧ್ವನಿಯಲ್ಲಿ ಮೂಡಿಬಂದ ‘ವೇಣುಪುರದಿ ನೆಲೆನಿಂತ ಭಜಬಲೀಶನೇ’ ಎಂಬ ಹಾಡಿನ ಸಿಡಿ ಬಿಡುಗಡೆ ಮಾಡಲಾಯಿತು. ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು. ಭರತ-ಬಾಹುಬಲಿ ಜೀವನ ಸಂದೇಶ ಎಂಬ ವಿಷಯದ ಕುರಿತು ತುಮಕೂರು ವಿಶ್ರಾಂತ ಪ್ರಾಚಾರ್ಯ ಮತ್ತು ವಿದ್ವಾಂಸ ಡಾ.ಎಸ್.ಪಿ. ಪದ್ಮಪ್ರಸಾದ್ ವಿಶೇಷ ಉಪನ್ಯಾಸ ನೀಡಿದರು.

ಅಭಿವೃದ್ಧಿ ಶೂನ್ಯ ಗ್ಯಾರಂಟಿ ಕಾಂಗ್ರೆಸ್‌ ಸರ್ಕಾರ: ಬಿ.ವೈ.ವಿಜಯೇಂದ್ರ ಆರೋಪ

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ, ಪ್ರ.ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ್ ಕಂಬಳಿ, ನೋಡೆಲ್ ಅಧಿಕಾರಿ ಮಾಣಿಕ್ಯ ಜೈನ್, ಸೇವಾಕರ್ತರಾದ ಸುಲೋಚನಾ ಇದ್ದರು. ದಿನದ ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ನವೀನ್ ಕುಮಾರ್ ವಂದಿಸಿದರು. ಪ್ರಾಚಾರ್ಯ ಡಾ.ಪ್ರಭಾತ್ ಬಲ್ನಾಡ್ ನಿರೂಪಿಸಿದರು.

Latest Videos
Follow Us:
Download App:
  • android
  • ios