Asianet Suvarna News Asianet Suvarna News

ಮಠಾಧೀಶರು, ನಾಯಕರ ಕೈಗೆ ಆಯುಧ ಕೊಡಬೇಕು ಎಂದ ದಿಂಗಾಲೇಶ್ವರ ಸ್ವಾಮೀಜಿ!

ನಮ್ಮ ಸಮಾಜದ ನಾಯಕರು, ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ಬಾಳೇಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Jagdish Shettar Birthday Program Dingaleshwar swamiji statement at hubballi rav
Author
First Published Dec 18, 2023, 3:00 PM IST

ಹುಬ್ಬಳ್ಳಿ (ಡಿ.18): ನಮ್ಮ ಸಮಾಜದ ನಾಯಕರು, ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ಬಾಳೇಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹುಟ್ಟುಹಬ್ಬ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತಾನಾಡಿದ ಸ್ವಾಮೀಜಿ, ದೇವಿ ಕಡೆ ಸ್ವತಂತ್ರ ಆಯುಧ ಇರಲಿಲ್ಲ. ಎಲ್ಲರೂ ಒಂದು ಆಯುಧ ಕೊಟ್ಟಿರೋ ಕಾರಣಕ್ಕೆ ದುಷ್ಟರ ಸಂಹಾರ ದೇವಿ ಮಾಡಿದ್ಳು. ಇದನ್ನು ಹೇಳೋಕೆ ಕಾರಣ ಏನೆಂದರೆ ನಮ್ಮ ನಾಯಕರ ಕಡೆ ಒಬ್ಬೊಬ್ಬರು ಆಯುಧ ಕೊಡಬೇಕು. ಸಮಾಜದಲ್ಲಿ ಬಲಿಷ್ಠ ಆಗೋ ವ್ಯಕ್ತಿಗಳಿಗೆ ತೊಂದರೆ ಕೊಡೋ ಕೆಲಸ ಈ ನಾಡಿನಲ್ಲಿ ಆಗ್ತಿದೆ. ಇದು ಮಠಾಧಿಪತಿಗಳಿಗೂ ತಪ್ಪಿಲ್ಲ. ಮಠಾಧಿಪತಿಗಳ ತೇಜೋವಧೆ ಮಾಡುವ ಕೆಲಸ ಆಗ್ತಿದೆ. ನಮ್ಮ ಮಠಗಳನ್ನ ನಾಶ ಮಾಡೋದರ ಜೊತೆ ಎರಡನೇ ಹಂತದ ನಾಯಕರನ್ನು ರಾಜಕೀಯವಾಗಿ ನಾಶ ಮಾಡೋ ವ್ಯವಸ್ಥೆ ನಡೆಯುತ್ತಿದೆ. ಹುಟ್ಟು ಹಬ್ಬದಲ್ಲಿ ಇದನ್ನು ಹೇಳಬೇಕೋ ಬೇಡ್ವೋ ಆದ್ರೂ ನಮ್ಮ ಭಾವನೆ ಹೇಳತೀನಿ ಎಂದರು.

ಸ್ವಾಮಿಗಳದ್ದು ಎಷ್ಟರ ಮಟ್ಟಿಗೆ ಕಷ್ಟ ಐತಿ ಅಂದ್ರ; ರಾಜಕಾರಣಿ ಮನೆ ಕಸ ಬಳಿಯುವ ಆಳಿಗಿಂತ ಕಡೇ ಆಗೇತಿ: ದಿಂಗಾಲೇಶ್ವರಶ್ರೀ ಆಕ್ರೋಶ

ಯಾರ ಅಧಃಪತನ ನಾವು ಸಹಿಸಹಬಾರದು. ಸಮಾಜಕ್ಕೆ ಆಧಾರಸ್ತಂಭ ಮಠಾಧೀಪತಿಗಳು, ರಾಜಕೀಯ ನಾಯಕರು. ಲಿಂಗಾಯತ ನಾಯಕರು ಕಂಬ ಗಟ್ಟಿಯಾಗಿರಬೇಕು ಎಲ್ಲರೂ ಎಚ್ಚೆತ್ತುಕೊಳ್ಳೋ ಕಾಲ ಬಂದಿದೆ ಎಂದು ಎಚ್ಚರಿಸಿದರು.

Follow Us:
Download App:
  • android
  • ios