ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ₹42 ಕೋಟಿ ಪತ್ತೆ; ಇದು ಎಐಸಿಸಿಗೆ ಕಳಿಸಬೇಕಿದ್ದ ಹಣ: ಈಶ್ವರಪ್ಪ ಗಂಭೀರ ಆರೋಪ
ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ ಐಟಿ ದಾಳಿ ಸಂಬಂಧ ಮಾತನಾಡಿದ ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಈ ಹಣವನ್ನು ಕೇಂದ್ರದ ಎಐಸಿಸಿಗೆ ಹೋಗಬೇಕಿದ್ದ ಹಣ ಎಂದು ಗಂಭೀರ ಆರೋಪ ಮಾಡಿದರು.

ಬೆಂಗಳೂರು (ಅ.13) : ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ ಐಟಿ ದಾಳಿ ಸಂಬಂಧ ಮಾತನಾಡಿದ ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಈ ಹಣವನ್ನು ಕೇಂದ್ರದ ಎಐಸಿಸಿಗೆ ಹೋಗಬೇಕಿದ್ದ ಹಣ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಗುತ್ತಿಗೆದಾರನ ಮನೆಮೇಲೆ ಐಟಿ ದಾಳಿ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಭಾವಿಕವಾಗಿ ಐಟಿ ದಾಳಿಯನ್ನು ಸಿದ್ದರಾಮಯ್ಯ, ಡಿಕೆಶಿ ಖಂಡನೆ ಮಾಡಬೇಕಿತ್ತು. ಆದ್ರೆ ಅವರು ಖಂಡನೆ ಮಾಡ್ತಿಲ್ಲ. ಏಕೆಂದರೆ ಈ ಹಣ ತಮ್ಮದು ಎಐಸಿಸಿಗೆ ಕಳಿಸಬೇಕಿದ್ದ ಹಣ. ಕಾಂಗ್ರೆಸ್ ನವರಿಗೂ ಗುತ್ತಿದೆದಾರರಿಗೂ ನೇರ ಸಂಬಂಧ ಇದೆ ಎಂದು ಗಂಭೀರ ಆರೋಪ ಮಾಡಿದರು.
ಬೆಂಗ್ಳೂರಲ್ಲಿ ಐಟಿ ಅಧಿಕಾರಿಗಳ ರಾತ್ರಿ ಕಾರ್ಯಾಚರಣೆ: ಬಾಕ್ಸ್‌ಗಳಲ್ಲಿ ಕಂತೆ ಕಂತೆ ಹಣ ಪತ್ತೆ..!
ಈ ಹಣವನ್ನು ಕೇಂದ್ರದ ಎಐಸಿಸಿಗೆ ಕಳಿಸಿಕೊಡುವ ತಯಾರಿ ಆಗಿತ್ತು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಈಗ ಸಿಕ್ಕಿರುವ 42 ಕೋಟಿ ಹಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆಗ ಇದು ಸಿದ್ದರಾಮಯ್ಯ ಹಣನಾ? ಡಿಕೆಶಿ ಹಣನಾ? ಅಂತ ಗೊತ್ತಾಗುತ್ತೆ ಈ ಹಣವನ್ನು ಎಐಸಿಸಿಗೆ ಕಳಿಸಲು ಸಂಗ್ರಹ ಮಾಡಲಾಗಿತ್ತು. ಪಂಚ ರಾಜ್ಯಗಳ ಚುನಾವಣೆಗೆ ಕಳಿಸಲು ಈ ಹಣ ಇಟ್ಕೊಂಡಿದ್ರು ಅಂತ ಹಲವರು ಹೇಳುತ್ತಿದ್ದಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಗುತ್ತಿಗೆದಾರರು, ಕಾಂಗ್ರೆಸ್‌ನವರು ಅಣ್ಣತಮ್ಮಂದಿರಿದ್ದಂತೆ. ನಮ್ಮ ಸರ್ಕಾರವಿದ್ದಾಗ ಇದೇ ಕಾಂಗ್ರೆಸ್‌ನವರು ಯಾವುದೇ ದಾಖಲೆ ಇಲ್ಲದೆ ನಮ್ಮ ಮೇಲೆ 40% ಆರೋಪವನ್ನು ಮಾಡಿದ್ರು. ಆಗಲೇ ನಾವು ಈ ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು ಎಂದಿದ್ವಿ. ಅದೀಗ ನಿಜವಾಗಿದೆ ಎಂದರು.
ಬಾಮೈದನ ಮನೆಯಲ್ಲಿ 42 ಕೋಟಿ ಬಚ್ಚಿಟ್ಟಿದ್ದ ಗುತ್ತಿಗೆದಾರ ಅಂಬಿಕಾಪತಿ, ತಮಿಳುನಾಡಿಗೆ ಹಣ ಸಾಗಿಸಲು ಮಹಾಪ್ಲಾನ್!