ರಾಜ್ಯ ಸರ್ಕಾರ ಸ್ವಾಮೀಜಿಗಳನ್ನು ಬೆದರಿಸೋದು ಸರಿಯಲ್ಲ: ವಿಜಯೇಂದ್ರ

ಆರೋಗ್ಯ ಸರಿ ಇಲ್ಲ ಎಂದು ಸ್ವಾಮೀಜಿಯವರು ಪತ್ರದ ಮೂಲಕ ಉತ್ತರ ನೀಡಿದ್ದರು. ಆದರೂ ಬರುವಂತೆ ಒತ್ತಡ ಹಾಕುವುದು ಖಂಡನೀಯ. ವಕ್ಫ್‌ ವಿಷಯ ಮುಂದಿಟ್ಟು ಕೊಂಡು ರೈತರ ಒಕ್ಕಲೆಬ್ಬಿಸುವುದು, ಮಠ-ಮಾನ್ಯಗಳ ಜಮೀನು ಕಿತ್ತುಕೊಳ್ಳುವುದು, ಅಧಿಕಾರಿಗಳ ಮೂಲಕ ನೋಟಿಸ್ ನೀಡುವ ವಿರುದ್ದ ಉಗ್ರ ಪ್ರತಿಭಟನೆ ನಡೆಯು ತ್ತಿದೆ. ರೈತರು ಬೀದಿಗಿಳಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

It is not right for the state government to threaten the Swamijis Says BY Vijayendra grg

ಬೆಂಗಳೂರು(ಡಿ.03): ದೇಶದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧದ ಕೇಸ್‌ಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರ, ಸ್ವಾಮೀಜಿಗಳ ವಿರುದ್ಧ ಕೇಸ್ ದಾಖಲಿಸಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. 

ಸೋಮವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ| ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರೊಂದಿಗೆ ನಗರದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಚಂದ್ರಶೇಖರನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 

ನಾನು ಸಂವಿಧಾನ ಬಗ್ಗೆ ಮಾತಾಡಿಲ್ಲ, ಸಿಎಂ ತಿಳಿದು ಮಾತನಾಡಬೇಕಿತ್ತು: ಪೇಜಾವರ ಶ್ರೀ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಹೋರಾಟದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಸ್ವಾಮೀಜಿಯವರು ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಬಳಿಕ ಕ್ಷಮೆ ಕೇಳಿದ್ದಾರೆ. ಆದಾಗ್ಯೂ ಎಫ್ಐಆರ್‌ ದಾಖಲು ಮಾಡಿ ವಿಚಾರಣೆಗೆ ಬರುವಂತೆ ಒತ್ತಾಯಿಸುವುದು ಸರಿಯಲ್ಲ ಎಂದರು. 

ಆರೋಗ್ಯ ಸರಿ ಇಲ್ಲ ಎಂದು ಸ್ವಾಮೀಜಿಯವರು ಪತ್ರದ ಮೂಲಕ ಉತ್ತರ ನೀಡಿದ್ದರು. ಆದರೂ ಬರುವಂತೆ ಒತ್ತಡ ಹಾಕುವುದು ಖಂಡನೀಯ. ವಕ್ಫ್‌ ವಿಷಯ ಮುಂದಿಟ್ಟು ಕೊಂಡು ರೈತರ ಒಕ್ಕಲೆಬ್ಬಿಸುವುದು, ಮಠ-ಮಾನ್ಯಗಳ ಜಮೀನು ಕಿತ್ತುಕೊಳ್ಳುವುದು, ಅಧಿಕಾರಿಗಳ ಮೂಲಕ ನೋಟಿಸ್ ನೀಡುವ ವಿರುದ್ದ ಉಗ್ರ ಪ್ರತಿಭಟನೆ ನಡೆಯು ತ್ತಿದೆ. ರೈತರು ಬೀದಿಗಿಳಿದ್ದಾರೆ ಎಂದು ಹೇಳಿದರು.

ಠಾಣೆಗೆ ಬೆಂಕಿ ಇಟ್ಟವರ ಬಿಟ್ಟು ಶ್ರೀ ಮೇಲೆ ಕ್ರಮ: ಅಶೋಕ್ ವಾಗ್ದಾಳಿ

ಮೈಸೂರು: ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಹಾಗೂ ಡಿಜೆ ಹಳ್ಳಿ ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಸುಮೆ ಬಿಟ್ಟಿದ್ದು, ಕ್ಷಮೆ ಕೋರಿದ 82 ವರ್ಷದ ಚಂದ್ರಶೇಖರ ಸ್ವಾಮೀಜಿ ಮೇಲೆ ಕೇಸ್ ಹಾಕಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. 

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀಗಳಿಗೆ ಕಿಂಚಿತ್ತು ಸಮಸ್ಯೆಯಾದರೂ ಸಮುದಾಯ ಅವರ ಹಿಂದಿದೆ ಎಂಬುದನ್ನು ಮರೆಯಬೇಡಿ. ಅವರಿಗೆ ಈಗ 82 ವರ್ಷವಾಗಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮತಾಂಧನೊಬ್ಬ ಚಿಕ್ಕಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ ಮಾತ್ರಕ್ಕೆ ಸಿಎಂ, ಗೃಹ ಸಚಿವರಾದಿಯಾಗಿ ಎಲ್ಲರೂ ಕ್ರಮವಹಿಸಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

'ರಾಜ್ಯದ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರನ್ನು ಸಮರ್ಥನೆ ಮಾಡಿಕೊಂಡು, ಬಿರಿಯಾನಿ ಕೊಟ್ಟಿದ್ದೀರಿ. ಸ್ವಾಮೀಜಿಗೆ ನೀರಾದರು ಬೇಡವೆ. ಚುನಾ ವಣೆ ಬಂದಾಗ ಹೋಗಿ ಕಾಲಿಗೆ ಬೀಳುತ್ತೀರಿ. ಹಿಂದೂಗಳಿಗೆ ಏನಾದರೂ ಸುಮ್ಮನಿರುವ ನೀವು ಮುಸ್ಲಿಮರಿಗೆ ಪಿನ್ ಚುಚ್ಚಿದರೂ ಮುಲಾಮು ಹಾಕಿ ಬ್ಯಾಂಡೇಜು ಹಾಕುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 

ವಾರದೊಳಗೆ ಸಮಸ್ಯೆಗೆ ಪರಿಹಾರ: 

ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್ ಜಾರಿ ವಿಚಾರ ನನಗೆ ಗೊತ್ತಿಲ್ಲ. ನೋಟಿಸ್ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಒಂದು ವಾರದೊಳಗೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಮಾತು ವಾಪಸ್ ಪಡೆಯದಿದ್ದರೆ ಸೋಲು, ಬಿಜೆಪಿ ನೋಟಿಸ್ ಬೆನ್ನಲ್ಲೇ ಯತ್ನಾಳ್‌ಗೆ ಸ್ವಾಮೀಜಿ ಶಾಪ!

ಪಾಕಿಸ್ತಾನ್‌ ಜಿಂದಾಬಾದ್‌ ಅಂದರೂ ಕ್ರಮವಿಲ್ಲ, ನಮಗೆ ನೋಟಿಸ್‌: ಚಂದ್ರಶೇಖರನಾಥ ಸ್ವಾಮೀಜಿ

ಬೆಂಗಳೂರು:  ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದರೂ ಅವರನ್ನು ಏನೂ ಮಾಡಿಲ್ಲ. ಆದರೆ ತಮ್ಮ ವಿರುದ್ದ ಮಾತ್ರ ಪ್ರಕರಣ ದಾಖಲು ಮಾಡುತ್ತಾರೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು' ಎಂದು ಹೇಳಿದ್ದಕ್ಕೆ ಉಪ್ಪಾರಪೇಟೆ ಠಾಣೆ ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ವಿಷಯ, ಪಾಕಿಸ್ತಾನ್ ಜಿಂದಾಬಾದ್ ಸೇರಿ ಎಂತೆಂಥ ವಿಷಯಗಳಾಗಿಲ್ಲ, ಆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ತಮಗೆ ಹುಷಾರಿಲ್ಲ, ನಡೆಯಲೂ ಆಗುವುದಿಲ್ಲ ಎಂದು ಕ್ಷಮೆ ಕೇಳಿದರೂ ಈ ವಯಸ್ಸಿನಲ್ಲಿ ಕೇಸ್ ಹಾಕುತ್ತಾರೆ. ಪೊಲೀಸರು ನೋಟಿಸ್ ನೀಡಿದ್ದು ತಮಗೆ ಹೋಗಲು ಸಾಧ್ಯವಿಲ್ಲ. ಅವಶ್ಯವಿದ್ದರೆ ಮಠಕ್ಕೆ ಬಂದು ಹೇಳಿಕೆ ಪಡೆಯಲಿ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios