ಬುದ್ಧಿ ಜೀವಿಗಳಿಗೆ ಗೌರವ ಸಿಗದಿದ್ದರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ : ಶ್ರೀನಿವಾಸಾಚಾರಿ

ಬುದ್ಧಿ ಜೀವಿಗಳು ಆಡಳಿತ ವರ್ಗದ ಮೇಲೆ ಚಾಟಿ ಬೀಸಿ ಸರಿದಾರಿಯಲ್ಲಿ ನಡೆಯುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ಶ್ರೀನಿವಾಸಾಚಾರಿ ಹೇಳಿದರು.

It is impossible to build a good society if intellectual beings are respected says srinivasachari rav

ಬೆಂಗಳೂರು (ಜ.30) : ಬುದ್ಧಿ ಜೀವಿಗಳು ಆಡಳಿತ ವರ್ಗದ ಮೇಲೆ ಚಾಟಿ ಬೀಸಿ ಸರಿದಾರಿಯಲ್ಲಿ ನಡೆಯುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ಶ್ರೀನಿವಾಸಾಚಾರಿ ಹೇಳಿದರು. ಕಮಲಾಪುರದ ಮಯ ಪ್ರಕಾಶನ, ಸಿರಿನಾಡು ವೆಬ್‌ಟಿವಿ ಹಾಗೂ ವಿರಾಟ್‌ ವಿಶ್ವ ಗ್ಲೋಬಲ್‌ ¶ೌಂಡೇಷನ್‌ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ

ಚಂದ್ರಶೇಖರ್‌ ಕಂಬಾರ(Chandrashekhar kambar) ಅವರ 87ನೇ ಹುಟ್ಟುಹಬ್ಬ(Birthday)ದ ಅಂಗವಾಗಿ ಶನಿವಾರ ಮಲ್ಲೇಶ್ವರದ ಸರ್ಕಾರಿ ಹೆಣ್ಣು ಮಕ್ಕಳ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ‘ಸಾವಿರದ ಶರಣವ್ವ ಕನ್ನಡದ ತಾಯೆ‘ ಸರಣಿ ವಿಚಾರ ಸಂಕಿರಣದ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು.

 

 ಭಾರತೀಯ ಪರಂಪರೆ ಹೀಗಳೆದವರಿಗೆ ಗೋಷ್ಠಿಯಲ್ಲಿ ತೀಕ್ಷ್ಮ ತರಾಟೆ

ಬುದ್ಧಿ ಜೀವಿಗಳು ನಾಗರಿಕ ಸಮುದಾಯದಲ್ಲಿ ಮಹತ್ವದ ಜವಾಬ್ದಾರಿ ಹೊಂದಿರುತ್ತಾರೆ. ಯಾವ ದೇಶದಲ್ಲಿ ಬುದ್ಧಿ ಜೀವಿಗಳಿಗೆ ಗೌರವ ದೊರೆಯುವುದಿಲ್ಲವೋ ಆ ದೇಶದಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಲೇಖಕರಿಗೆ ಸಮಾಜದಲ್ಲಿ ಇರುವ ಪ್ರಭಾವ ಬೇರೆ ಯಾವುದೇ ವರ್ಗಕ್ಕಿಲ್ಲ. ಪುಸ್ತಕಗಳಿಗೆ ಇರುವ ಶಕ್ತಿ, ಮೋಡಿ ಮಾಡುವ ಮಾತುಗಳಿಗೆ ಇರುವುದಿಲ್ಲ. ಕಾಲ್‌ರ್‍ಮಾರ್ಕ್ಸ್ ಅವರ ಕೃತಿಗಳು ಮುಂದೆ ರಷ್ಯಾ ಮತ್ತು ಚೀನಾ ದೇಶಗಳ ಇತಿಹಾಸವನ್ನು ಬದಲಾಯಿಸಿದ್ದನ್ನು ಗಮನಿಸಬೇಕು ಎಂದರು.

‘ಕನ್ನಡ ರಂಗಭೂಮಿ: ಕಂಬಾರರ ಹೊಸ ಪ್ರಯೋಗಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ರಂಗಕರ್ಮಿ ಸಿ.ಬಸವಲಿಂಗಯ್ಯ, ಕಂಬಾರರ ಚಿಂತನ ಕ್ರಮ ವಿಭಿನ್ನವಾಗಿತ್ತು. ಮೂರ್ನಾಲ್ಕು ಪ್ರಕಾರದಲ್ಲಿ ನಾಟಕ ರಚನೆ ಮಾಡಿದ್ದಾರೆ. ಅನೇಕ ಹೊಸ ಪ್ರಯೋಗಳನ್ನು ಮಾಡಿದ್ದಾರೆ. ಕಂಬಾರರ ನಾಟಕದಲ್ಲಿ ಕಥನಗಳಿರುತ್ತವೆ, ಕದನಗಳಲ್ಲ ಎಂದು ಹೇಳಿದರು.

ಚಿತ್ರನಿರ್ದೇಶಕ ಟಿ.ಎಸ್‌.ನಾಗಾಭರಣ ‘ಕನ್ನಡ ಚಲನಚಿತ್ರ: ಕಂಬಾರರ ಪ್ರಯೋಗಶೀಲತೆ’ ಕುರಿತು, ಡಾ ಬಸವರಾಜ ಕಲ್ಗುಡಿ ‘ಕನ್ನಡ ವಿಶ್ವವಿದ್ಯಾಲಯ: ಕಂಬಾರರ ಪ್ರಯೋಗಗಳು’ ಕುರಿತು ಉಪನ್ಯಾಸ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಸರಣಿ ವಿಚಾರ ಸಂಕಿರಣದ ಸಂಚಾಲಕ ಡಾ ವೀರೇಶ ಬಡಿಗೇರ, ಡಾ ಚಂದ್ರಶೇಖರ ಕಂಬಾರರ 87ನೇ ಜನ್ಮದಿನಾಚರಣೆ ಅಂಗವಾಗಿ ಜ.2ರಿಂದ 30ರವರೆಗೆ ‘ಸಾವಿರದ ಶರಣವ್ವ ಕನ್ನಡ ತಾಯೆ’ ಸರಣಿ ವಿಚಾರ ಸಂಕಿರಣವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕಂಬಾರರ ಕುರಿತು ಹೊಸ ತಲೆಮಾರಿನ ಯುವಕರಿಗೆ ಓದುವ ಆಸಕ್ತಿ ಬೆಳೆಸುವುದು. ಅವರ ಪ್ರಯೋಗಗಳ ಕುರಿತು ಅನುಸಂಧಾನ ಮಾಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಕರ್ನಾಟಕದಲ್ಲಿ ಧರ್ಮ ದ್ವೇಷ, ಸಿಎಂ ಬೊಮ್ಮಾಯಿಗೆ ಬುದ್ಧಿಜೀವಿಗಳಿಂದ ಮಹತ್ವದ ಪತ್ರ

ಈ ವೇಳೆ ಲೇಖಕ ಪ್ರಹ್ಲಾದ್‌ ವಾ.ಪತ್ತಾರ ಅವರ ‘ಸಿರಿ’ ಪುಸ್ತಕವನ್ನು ಡಾ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ವಿರಾಟ್‌ ವಿಶ್ವ ಗ್ಲೋಬಲ್‌ ¶ೌಂಡೇಷನ್‌ನ ಅಧ್ಯಕ್ಷ ಎಸ್‌.ಮಾಳಿಗಾಚಾರ್‌, ಲಲಿತಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕೆ.ಎಸ್‌.ಶ್ರೀನಿವಾಸ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios