ಇಸ್ರೇಲ್ ಹಮಾಸ್ ಯುದ್ಧ: 100 ಹೈಬ್ರಿಡ್ ಹಸುಗಳ ಆಮದು ಸ್ಥಗಿತ
ತುಮಕೂರು ಮೂಲದ ಅಶೋಕ್ ಹಾಸನದ ಹೊಳೆನರಸೀಪುರದಲ್ಲಿ ತಮ್ಮ ಅಗ್ರಿಕಲ್ಚರ್ ಸ್ಟಾರ್ಟಪ್ ಮೂಲಕ ರೈತರಿಗೆ ಇಸ್ರೇಲ್ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಿ ರಾಜ್ಯದ ವಿವಿಧ ಭಾಗದ ರೈತರಿಗೆ ಇಸ್ರೇಲ್ ಹಸುಗಳನ್ನು ಕೊಡಿಸುವ ಪ್ರಯತ್ನ ನಡೆಸಿದ್ದರು ಆದರೆ ಹಮಾಸ್ ಇಸ್ರೇಲ್ ಯುದ್ಧದಿಂದಾಗಿ ಹೈಬ್ರಿಡ್ ಹಸುಗಳ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ತುಮಕೂರು (ಅ.10) : ಹಮಾಸ್ ಉಗ್ರರ ವಿರುದ್ಧ ದೂರದ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧ ಕರ್ನಾಟಕದ ಮೇಲೆ ನೇರ ಪರಿಣಾಮ ಬೀರಿದೆ.
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ವಿಚಾರದಲ್ಲಿ ತನ್ನದೇ ಛಾಪು ಮೂಡಿಸಿರುವ ಇಸ್ರೇಲ್, ಜಗತಿನ ಹಲವು ಕೃಷಿಕರನ್ನು ತನ್ನತ್ತ ಸೆಳೆದುಕೊಂಡಿದೆ. ಇಸ್ರೇಲ್ ತಂತ್ರಜ್ಞಾನವನ್ನು ನಮ್ಮ ಕರ್ನಾಟಕಕ್ಕೆ ತಂದು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಪ್ರಗತಿ ಪರ ರೈತ ಅಶೋಕ್ ಮುಂದಾಗಿದ್ದರು. ಈ ಸಂಬಂದ ಈಗಾಗ್ಲೇ ಎರಡು ಬಾರಿ ಇಸ್ರೇಲ್‌ಗೆ ಭೇಟಿ ನೀಡಿರುವ ಅಶೋಕ್ ಅಲ್ಲಿ ಕೃಷ್ಣ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಈ ಭಾರಿ 100 ಹೈ ಬ್ರಿಡ್ ಇಸ್ರೇಲ್ ಹಸುಗಳನ್ನು ಆಮದು ಮಾಡಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದರು. ಇದೇ ತಿಂಗಳ 29ರೊಂದು ರಾಜ್ಯದ 30 ಜನ ರೈತರ ತಂಡದೊಂದಿಗೆ ಇಸ್ರೇಲ್ ಗೆ ಪ್ರಯಣಿಸಿ ಅಲ್ಲಿ ನೇರವಾಗಿ ಹಸುಗಳ ಹಸುಗಳನ್ನು ಖರೀದಿಸಿ, ರಾಜ್ಯಕ್ಕೆ ತರಲಾಗುತ್ತಿತ್ತು. ಈ ಸಂಬಂಧ ಭಾರತ ಹಾಗೂ ಇಸ್ರೇಲ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ರೈತರು ಸಂಪರ್ಕದಲ್ಲಿದ್ದರು, ಇದೀಗ ದಿಢೀರನೇ ಯುದ್ಧ ಪ್ರಾರಂಭವಾದ ಪರಿಣಾಮ 100 ಹಸುಗಳ ಆಮದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಇಸ್ರೇಲ್ ಪ್ರತಿದಾಳಿಗೆ ಬೆಚ್ಚಿದ ಉಗ್ರರು, ಹಮಾಸ್ ಆರ್ಥಿಕ ಸಚಿವ ಏರ್‌ಸ್ಟ್ರೈಕ್‌ನಲ್ಲಿ ಹತ!
ತುಮಕೂರು ಮೂಲದ ಅಶೋಕ್ ಹಾಸನದ ಹೊಳೆನರಸೀಪುರದಲ್ಲಿ ತಮ್ಮ ಅಗ್ರಿಕಲ್ಚರ್ ಸ್ಟಾರ್ಟಪ್ ಮೂಲಕ ರೈತರಿಗೆ ಇಸ್ರೇಲ್ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಿ ರಾಜ್ಯದ ವಿವಿಧ ಭಾಗದ ರೈತರಿಗೆ ಇಸ್ರೇಲ್ ಹಸುಗಳನ್ನು ಕೊಡಿಸುವ ಪ್ರಯತ್ನ ನಡೆಸಿದ್ದರು. ಒಂದು ವರ್ಷದಿಂದ ಇಸ್ರೇಲ್ ನೊಂದಿಗೆ ಸಂಪರ್ಕದಲ್ಲಿದ್ದರು, ಕಳೆದ ಶುಕ್ರವಾರದಷ್ಟೇ ಇಸ್ರೇಲ್ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಿದ್ದರು, ಯುದ್ಧ ನಡೆಯದಿದ್ದರೆ, ಹಸುಗಳನ್ನು ಆಮದು ಪ್ರಕ್ರಿಯೆ ಮುಂದುವರೆಯುತ್ತಿತ್ತು. ಆದರೆ ಹಮಾಸ ಉಗ್ರರು ರಾಕೆಟ್ ದಾಳಿ ನಡೆಸಿ ಅಪಾರ ಸಾವು ನೋವುಗಳುಂಟಾಗಿವೆ. ಇತ್ತ ಇಸ್ರೇಲ್ ಸಹ ಪ್ಯಾಲೆಸ್ತಿನ್ ಮೇಲೆ ಯುದ್ಧ ಸಾರಿದ್ದು ವಿಮಾನಯಾಣ ಸಂಚಾರ ಎಲ್ಲವೂ ಬಂದ್ ಆಗಿವೆ. ಈ ಹಿನ್ನೆಲೆ ಹಸು ತರುವ ಪ್ರಕ್ರಿಯೇ ಸ್ಥಗಿತಗೊಂಡಿದೆ. ಜೊತೆಗೆ ಇಸ್ರೇಲ್ ತೆರಳಿ ಯುದ್ಧ ಪರಿಸ್ಥಿತಿಯಲ್ಲಿ ಸಿಲುಕುವ ಸಂಕಷ್ಟದಿಂದ ರೈತರು ಕೂಡ ಪಾರಾಗಿದ್ದಾರೆ