Asianet Suvarna News Asianet Suvarna News

 ಹುಬ್ಬಳಿ-ಧಾರವಾಡದಲ್ಲಿ ಐಸಿಸ್ ಉಗ್ರರ ತರಬೇತಿ ಕ್ಯಾಂಪ್? ದೆಹಲಿ ಪೊಲೀಸ್ ವಿಶೇಷ ದಳ ಹೇಳೋದೇನು?

: ಐಸಿಸ್ (ಇಸ್ಲಾಮಿಕ್ ಸ್ಟೇಟ್ಸ್) ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ದೆಹಲಿ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ. ದಕ್ಷಿಣ ಭಾರತದ ಹುಬ್ಬಳ್ಳಿ, ಧಾರವಾಡ ಮತ್ತು ಪಶ್ಚಿಮ ಘಟ್ಟದಲ್ಲಿ ಉಗ್ರರ ತರಬೇತಿ ಕ್ಯಾಂಪ್‌ ಇರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸ್ ವಿಶೇಷ ದಳದಿಂದಲೇ ಮಾಹಿತಿ.

ISIS terrorist training camp in Hubli Dharwad what does delhi police special squad say rav
Author
First Published Oct 3, 2023, 12:14 PM IST

ಹುಬ್ಬಳ್ಳಿ (ಅ.3): ಐಸಿಸ್ (ಇಸ್ಲಾಮಿಕ್ ಸ್ಟೇಟ್ಸ್) ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ದೆಹಲಿ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ. ದಕ್ಷಿಣ ಭಾರತದ ಹುಬ್ಬಳ್ಳಿ, ಧಾರವಾಡ ಮತ್ತು ಪಶ್ಚಿಮ ಘಟ್ಟದಲ್ಲಿ ಉಗ್ರರ ತರಬೇತಿ ಕ್ಯಾಂಪ್‌ ಇರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸ್ ವಿಶೇಷ ದಳದಿಂದಲೇ ಮಾಹಿತಿ. ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖ ಶಹನವಾಜ್‌ಗೆ ಧಾರವಾಡ ನಂಟು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ತರಬೇತಿ ಆಗಿರೋ ಶಂಕೆ ವ್ಯಕ್ತಪಡಿಸಿದ್ದಾರೆ. ಇದೀಗ ದೆಹಲಿ ಪೊಲೀಸರ ಹೇಳಿಕೆ ಹುಬ್ಬಳ್ಳಿ ಧಾರವಾಡದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ ಉಗ್ರರ ತರಬೇತಿ ಕ್ಯಾಂಪಗಳಿವೆಯೇ? ಶಂಕಿತ ಉಗ್ರನ ಪತ್ನಿ ಜಾಡು ಹಿಡಿದು ದೆಹಲಿ ಪೊಲೀಸರು ಇಲ್ಲಿಗೆ ಬರಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದಂತಾಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಶಂಕಿತ ಉಗ್ರರ ತರಬೇತಿ ತಾಣವಾಗಿತ್ತು ಧಾರವಾಡ. ಸಿಮಿ ಸಂಘಟನೆಯ ಶಂಕಿತ ಉಗ್ರರರಿಗೆ ಧಾರವಾಡ ಹೊರವಲಯದ ಅರಣ್ಯದಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬ ವದಂತಿ ಹಬ್ಬಿತ್ತು. ತದನಂತರ ಆ ಸಂಘಟನೆ ನಿಷೇಧಿಸಲಾಗಿತ್ತು. ಆ ಬಳಿಕ ತರಬೇತಿ ಕ್ಯಾಂಪ್ ಗಳ ಬಗ್ಗೆಯೂ ಕೇಳಿಬಂದಿರಲಿಲ್ಲ. ಇದೀಗ ಮತ್ತೆ ಉಗ್ರರ ತರಬೇತಿ ಕ್ಯಾಂಪಗಳು ಇಲ್ಲಿರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿರುವುದು ಆತಂಕವನ್ನುಂಟು ಮಾಡಿದೆ.

ಹುಬ್ಬಳ್ಳಿ, ಪ.ಘಟ್ಟದಲ್ಲಿ ನೆಲೆ ಸ್ಥಾಪನೆಗ ಯತ್ನ: 3 ಐಸಿಸ್‌ ಉಗ್ರರ ಸೆರೆ!

ಅಲ್ಲಿನ ಪೊಲೀಸರು‌ ನೀಡಿರುವ ಹೇಳಿಕೆ ಗಮನಕ್ಕೆ ಬಂದಿದೆ. ಬಂಧಿತರಲ್ಲಿ ಸ್ಥಳೀಯರು ಇರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ದೆಹಲಿ ಪೊಲೀಸರ ಜತೆ ಸಂಪರ್ಕದಲ್ಲಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಅಂತಹ ಕೃತ್ಯಗಳು ನಡೆಯುತ್ತಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ರೇಣುಕಾ‌ ಸುಕುಮಾರ್‌, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

Follow Us:
Download App:
  • android
  • ios