ಐಸಿಸ್ ನಂಟಿನ ಬಗ್ಗೆ ಯತ್ನಾಳ್ ಆರೋಪ ಬೆನ್ನಲ್ಲೇ ಸ್ಫೋಟಕ ಬೆಳವಣಿಗೆ; ಎನ್‌ಐಎ ತನಿಖೆಗೆ ಮನವಿ ಮಾಡಿದ ರಾಘವ ಅನ್ನಿಗೇರಿ
ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಐಸಿಸ್‌ನೊಂದಿಗೆ ನಂಟು ಹೊಂದಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿರುವ ಹಿನ್ನೆಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ ತನಿಖೆ ನಡೆಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಆಗ್ರಹಿಸಿದ್ದಾರೆ.
ವಿಜಯಪುರ (ಡಿ.7): ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಐಸಿಸ್‌ನೊಂದಿಗೆ ನಂಟು ಹೊಂದಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿರುವ ಹಿನ್ನೆಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ ತನಿಖೆ ನಡೆಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಆಗ್ರಹಿಸಿದ್ದಾರೆ.
ಈ ಹಿಂದೆ ಉತ್ತರ ಕರ್ನಾಟಕದಲ್ಲಿ NIA ಸ್ಥಾಪನೆಯಾಗಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ರಾಘವ ಅನ್ನಿಗೇರಿ. ಇದೀಗ ಯತ್ನಾಳ್ ಬಿಡುಗಡೆ ಮಾಡಿದ ಫೋಟೊದಲ್ಲಿ ಮೌಲ್ವಿ ತನ್ವೀರ್ ಪೀರಾ ಬಗ್ಗೆ ಎನ್‌ಐಎ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಮೌಲ್ವಿ ಇರಾನ್ ಹೋಗಿದ್ದನ್ನ ಒಪ್ಪಿಕೊಂಡಿದ್ದಾರೆ, ಪೋಟೊದಲ್ಲಿರುವವರು ಯಾರು? ಧರ್ಮಗುರುಗಳಾ? ಐಸಿಎಸ್ ಉಗ್ರರೋ ತನಿಖೆಯಾಗಬೇಕಿದೆ. ಫೋಟೊಗಳು ಗಂಭೀರತೆ ಹೊಂದಿವೆ ಹೀಗಾಗಿ ಮೌಲ್ವಿ ವಶಕ್ಕೆ ಪಡೆದು ತನಿಖೆ ನಡೆಸುವಂತೆ ಎನ್‌ಐಎಗೆ ರಾಘವ ಅನ್ನಿಗೇರಿ ಮನವಿ ಮಾಡಿದ್ದಾರೆ.
ಐಸಿಸ್ ನಂಟು ಸಾಬೀತುಪಡಿಸಿದರೆ ದೇಶ ತೊರೆಯುವೆ; ಯತ್ನಾಳ್‌ಗೆ ತನ್ವೀರ್ ಹಾಶ್ಮಿ ಸವಾಲು!
ಮದರಸಾ ಆದಾಯದ ಬಗ್ಗೆ ತನಿಖೆಯಾಗಲಿ:
ಜಮಾತ್ ಎ ಅಹಲೆ ಸುನ್ನತ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಜಯಪುರದ ಹಜರತ್ ಹಾಶಿಂಪೀರ ದರ್ಗಾದ ಮೌಲ್ವಿ ಆಗಿರುವ ತನ್ವೀರ್ ಹಾಶ್ಮಿ ಆದಾಯ, ಮದರಸಾಕ್ಕೆ ಬರುವ ಆದಾಯದ ಮೂಲದ ಬಗ್ಗೆಯೂ ತನಿಖೆ ನಡೆಯಬೇಕು. ಯತ್ನಾಳ್ ಬಿಡುಗಡೆ ಮಾಡಿರುವ ಪೋಟೋ ನನ್ನದೆ ಎಂದು ಈಗಾಗಲೇ ಮೌಲ್ವಿ ಒಪ್ಪಿಕೊಂಡಿದ್ದಾರೆ, ಆದರೆ ಅಲ್ಲಿರುವ ಕಪ್ಪು ಧ್ವಜದ ಬಗ್ಗೆ ತನಿಖೆ ಆಗಬೇಕು. ಅದು ಐಸಿಸ್ ಧ್ವಜವಾ ಎನ್ನುವ ಬಗ್ಗೆ ತನಿಖೆಯಾಗಬೇಕು. ಎಷ್ಟು ಬಾರಿ ಯಾವ ವಿದೇಶಗಳಿಗೆ ಹೋಗಿದ್ದಾರೆ, ಯಾವ ಉದ್ದೇಶಕ್ಕೆ ಹೋಗಿದ್ದಾರೆ, ಯಾವ ನಾಯಕರನ್ನ ಭೇಟಿ ಮಾಡಿದ್ದಾರೆ ಈ ಎಲ್ಲ ಆಯಾಮಗಳಲ್ಲೂ ತನಿಖೆಯಾಗಬೇಕು ಮನವಿ ಮಾಡಿದ್ದಾರೆ.
ಸಿಎಂ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಗೆ ಐಸಿಸ್ ನಂಟು, ತನಿಖೆ ನಡೆಸುವಂತೆ ಅಮಿತ್ ಶಾಗೆ ಯತ್ನಾಳ್ ಪತ್ರ
ಮೌಲ್ವಿ ವಿರುದ್ಧ ತನಿಖೆ ರಾಜ್ಯಸರ್ಕಾರದಿಂದ ಸಾಧ್ಯವಿಲ್ಲ. ಈ ಬಗ್ಗೆ ಎನ್‌ಐಎಯಿಂದಲೇ ತನಿಖೆ ಆಗಬೇಕು. ಈ ಹಿಂದೆಯೂ ಉತ್ತರ ಕರ್ನಾಟಕದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿರುವ ಬಗ್ಗೆ NIAಗೆ ದೂರು ನೀಡಿದ್ದ ರಾಘವ ಅನ್ನಿಗೇರಿ. NIA ಸ್ಥಾಪನೆಗೆ ಆಗ್ರಹಿಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದರು.