ಸಿದ್ದು ಸರ್ಕಾರ ಕರ್ನಾಟಕವನ್ನು ಕಾಶ್ಮೀರ ಮಾಡುತ್ತಿದೆಯೇ?: ಕೋಟ ಶ್ರೀನಿವಾಸ್ ಪೂಜಾರಿ
ಶಿವಮೊಗ್ಗದಲ್ಲಿ ವಿವಾದಿತ ಬ್ಯಾನರ್ ಅಳವಡಿಸಿದಾಗ, ಪೊಲೀಸರೇ ಅದಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಬ್ಯಾನರ್ ಹಾಕಿ ಕಾನೂನು ಉಲ್ಲಂಘಿಸಿದವರ ವಿರುದ್ದ ಕ್ರಮ ಜರುಗಿಸಿಲ್ಲ. ಘಟನೆಯ ಆರಂಭಿಕ ಹಂತದಲ್ಲೇ ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಮುಸಲ್ಮಾನರ ಓಲೈಗೆಗಾಗಿ ಪೋಲಿಸರಿಗೆ ಸರ್ಕಾರ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂದು ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ(ಅ.04): ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಶಿವಮೊಗ್ಗದ ಈದ್ ಮೆರವಣಿಗೆ ಸಂದರ್ಭದಲ್ಲಿ ಕಲ್ಲೆಸೆತ ಘಟನೆಯ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಘಟನೆಯ ಬಗ್ಗೆ ಅಲ್ಲಿನ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ, ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ ಎಂದರು.
ಮೆರವಣಿಗೆಯಲ್ಲಿ ತಲ್ವಾರ್ ಪ್ರದರ್ಶಿಸಿ, ಪೋಲಿಸರಿಗೂ ಕಲ್ಲು ಹೊಡೆದಿದ್ದಾರೆ, ಆದರೆ ರಾಜ್ಯದ ಗೃಹ ಸಚಿವರು, ಮರದ ತಲ್ವಾರ್, ಬಣ್ಣ ಬಳಿಯಲಾಗಿದೆ ಎನ್ನುವ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಗಲಭೆ ಮಾಡಿದವರನ್ನು ಅಮಾಯಕರು ಎಂದು ಹೇಳಿ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಕೋಟ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ಜಲವಿವಾದದಲ್ಲಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಕೋಟ ಶ್ರೀನಿವಾಸ ಪೂಜಾರಿ
ಶಿವಮೊಗ್ಗದಲ್ಲಿ ವಿವಾದಿತ ಬ್ಯಾನರ್ ಅಳವಡಿಸಿದಾಗ, ಪೊಲೀಸರೇ ಅದಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಬ್ಯಾನರ್ ಹಾಕಿ ಕಾನೂನು ಉಲ್ಲಂಘಿಸಿದವರ ವಿರುದ್ದ ಕ್ರಮ ಜರುಗಿಸಿಲ್ಲ. ಘಟನೆಯ ಆರಂಭಿಕ ಹಂತದಲ್ಲೇ ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಮುಸಲ್ಮಾನರ ಓಲೈಗೆಗಾಗಿ ಪೋಲಿಸರಿಗೆ ಸರ್ಕಾರ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂದು ಆರೋಪಿಸಿದರು.
ಇನ್ನೆರಡು ದಿನದೊಳಗೆ ಬಿಜೆಪಿ ರಾಜ್ಯಧ್ಯಕ್ಷರ ನೇತೃತ್ವದ ತಂಡ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ನಂತರ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದರು.