ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ 'ವಿಷಸರ್ಪ' ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ನೋಂದಾಯಿತ ಸಂಸ್ಥೆಯಾಗಿದ್ದರೆ ದೂರು ನೀಡಲಿ ಎಂದು ಸವಾಲು ಹಾಕಿದ್ದಾರೆ. ಮುಸ್ಲಿಂ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುವ ಬಿಜೆಪಿಯ ಇಬ್ಬಗೆ ನೀತಿ ಅವರು ಪ್ರಶ್ನಿಸಿದ್ದಾರೆ.

- ಆರೆಸ್ಸೆಸ್ ನೋಂದಣಿ ಆಗಿದ್ರೆ ಖರ್ಗೆ ವಿರುದ್ಧ ದೂರು ನೀಡ್ಲಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಕಲಬುರಗಿ (ಏ.10): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ‘ಬಿಜೆಪಿ, ಆರೆಸ್ಸೆಸ್‌ ವಿಷಸರ್ಪ, ಅವನ್ನು ಕೊಲ್ಲಿ’ ಎಂಬ ಹೇಳಿಕೆ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್‌ ಯಾಕೆ ದೂರು ದಾಖಲಿಸಿಲ್ಲ?. ಅವರು ನೋಂದಣಿ ಮಾಡಿಸಿಕೊಂಡಿದ್ದರೆ ತಾವೇ ಲೆಟರ್‌ಹೆಡ್‌ನಲ್ಲಿ ದೂರು ದಾಖಲಿಸಲಿ ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ. ಬುದ್ಧ-ಬಸವ ಅವರ ತತ್ವಗಳನ್ನು ನಾವು ಹೊಂದಿದ್ದೇವೆ. ಕೆಲವೊಬ್ಬರು ಈ ತತ್ವ ಹಾಗೂ ಸಂವಿಧಾನ ವಿರೋಧಿ ಸಿದ್ಧಾಂತ ಹೊಂದಿರುತ್ತಾರೆ. ಇದು ಸರಿಯಲ್ಲ ಎನ್ನುವುದು ನಮ್ಮ ವೈಯಕ್ತಿಕ ಅಭಿಪ್ರಾಯ. ಅಷ್ಟಕ್ಕೂ ಖರ್ಗೆ ಹೇಳಿದ್ದೇನು?. ವಿಷಸರ್ಪಗಳನ್ನು ಕೊಲ್ಲಿ ಎಂದು ಹೇಳಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಪಾರ್ಲಿಮೆಂಟ್‌ನಲ್ಲಿ ಮೆಜಾರಿಟಿ ಹೊಂದಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಅವರು ಹೇಳಿ ಬಿಡಲಿ. ಯುಎಇಯವರನ್ನು ತಬ್ಬಿಕೊಳ್ಳುತ್ತಾರೆ. ಅವರಿಂದ ಪೆಟ್ರೋಲ್ ಬೇಕು, ಯೂರಿಯಾ ಬೇಕು. ಅಷ್ಟೇಕೆ, ಕೇಸರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಯುಎಇನಿಂದ ಬರುತ್ತದೆ. ಹಾಗಾದರೆ, ಮುಸ್ಲಿಂ ರಾಷ್ಟ್ರಗಳ ಜೊತೆಗೆ ಎಲ್ಲ ವ್ಯಾಪಾರ ವ್ಯವಹಾರ ನಿಲ್ಲಿಸಲಿ ಎಂದು ಸವಾಲು ಹಾಕಿದರು.

==

ಕೊರೋನಾ ಸಮಯದಲ್ಲಿ ಅಮಿತ್ ಶಾ ಮಗ ಐಪಿಎಲ್ ಆಡಿಸಿದ್ದು ದುಬೈನಲ್ಲಿ. ಈ ತರ ಇಬ್ಬಗೆ ನೀತಿ ಯಾಕೆ?. ಅವರ ಮಾತುಗಳನ್ನು ಅವರೇ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಖರ್ಗೆ ಕುಟುಕಿದರು.