ಬೆಂಗಳೂರು (ಅ.29): ಎಡಿಜಿಪಿಯಾಗಿದ್ದ ಇಬ್ಬರು ಐಪಿಎಸ್‌ ಅಧಿಕಾರಿಗಳಿಗೆ ಡಿಜಿಪಿ ಹುದ್ದೆಗೆ ಬಡ್ತಿಯೊಂದಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ರಾಜಧಾನಿ ಬೆಂಗಳೂರು ಆಯುಕ್ತರಾಗಿದ್ದ ಟಿ.ಸುನೀಲ್‌ ಕುಮಾರ್‌ ಅವರಿಗೆ ನಿವೃತ್ತಿಗೂ ಮುನ್ನ ಒಂದು ದಿನಕ್ಕೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ ಎಂಬುದು ವಿಶೇಷ.

ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿಯಾಗಿದ್ದ ಸುನೀಲ್‌ ಕುಮಾರ್‌ ಅವರಿಗೆ 1 ದಿನದ ಮಟ್ಟಿಗೆ ಬಡ್ತಿ ನೀಡಿ, ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಮೂವರು 'IPS' ಅಧಿಕಾರಿಗಳನ್ನ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ

ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಅಮರ್‌ಕುಮಾರ್‌ ಪಾಂಡೆ ಅವರಿಗೆ ಡಿಜಿಪಿಯಾಗಿ ತರಬೇತಿಗೆ ವರ್ಗಾವಣೆ ಮಾಡಲಾಗಿದ್ದು, ಅಮರ್‌ ಪಾಂಡೆ ಅವರಿಂದ ತೆರವಾದ ಸ್ಥಳಕ್ಕೆ ಪ್ರತಾಪ್‌ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.