ಬೆಂಗಳೂರು [ಮಾ.13]: ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ತೀವ್ರ ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 

ಅನಾರೋಗ್ಯದಿಂದ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚರಣ್ ರೆಡ್ಡಿ [55] ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

ಆಂಧ್ರ ಪ್ರದೇಶದ ಚಿತ್ತೂರಿನವರಾದ ಚರಣ್ ರೆಡ್ಡಿ 1933ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಎಸ್ ಐ ಟಿ, ಸಿಬಿಐನಲ್ಲಿಯೂ  ಚರಣ್ ರೆಡ್ಡಿ ಕಾರ್ಯನಿರ್ವಹಿಸಿದ್ದರು. 

ಮಧುಕರ ಶೆಟ್ಟಿ ನಿಗೂಢ ಸಾವಿನ ತನಿಖೆಗೆ ಸಮಿತಿ ರಚನೆ...

2016ರಲ್ಲಿ ಬೆಂಗಳೂರು ಉತ್ತರ ವಲಯದ ಐಜಿಪಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪಶ್ಚಿಮ ವಲಯದ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಿದ್ದರು. 

ಪ್ರಾಮಾಣಿಕ ಅಧಿಕಾರಿಯ ಹೆಮ್ಮೆಯ ಸತ್ಯಗಳು: ಇದು ಸಿಂಹದ ಹೆಜ್ಜೆ...!.

ದಿಟ್ಟ ಅಧಿಕಾರಿಯಾಗಿದ್ದ ಚರಣ್ ರೆಡ್ಡಿ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.