ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ಹಿನ್ನೆಲೆ ಜರುಗಿದ ಐತಿಹಾಸಿಕ ಮುರಡಬಸವೇಶ್ವರ ಮಹಾರೋಥೋತ್ಸವ ಜಾತ್ರೆಯಲ್ಲೂ ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳು ಜೈಕಾರ ಹಾಕಿ ಉತ್ತುತ್ತಿ, ಬಾಳೆಹಣ್ಣು ಹೂ ಎಸೆದು ಭಕ್ತಿ ಸಮರ್ಪಿಸಿರುವ ಅಭಿಮಾನಿಗಳು. ಆರ್ ಸಿಬಿ ಘೋಷಣೆ ಕೂಗ್ತಾ ಸಕತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್

ಕೊಪ್ಪಳ (ಮಾ.25): ಇದುವರೆಗೂ ಐಪಿಎಲ್‌ನ ಎಲ್ಲಾ ಸೀಸನ್‌ಗಳಲ್ಲಿ ಆಡಿದ್ದರೂ ಒಂದೇ ಒಂದು ಚಾಂಪಿಯನ್‌ಶಿಪ್ ಗೆಲ್ಲಲು ಆರ್‌ಸಿಬಿಗೆ ಸಾಧ್ಯವಾಗಿಲ್ಲ. ಆರ್‌ಸಿಬಿ 2009, 2011 ಮತ್ತು 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಆದರೆ ಪಂದ್ಯ ಗೆಲ್ಲಲಾಗಲಿಲ್ಲ. ತಂಡವು 2020, 2021 ಮತ್ತು 2020 ರ ಐಪಿಎಲ್ ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಬಂದ್ರೂ ಕಪ್ ಗೆಲ್ಲಲಾಗಲಿಲ್ಲ. ಇನ್ನೊಂದು ವಿಶೇಷ ಏನೆಂದರೆ ರಾಯಲ್ ಚಾಲೆಂಜರ್ಸ್ ಇರುವಷ್ಟು ಹಾರ್ಡ್ ಫ್ಯಾನ್ಸ್ ಯಾವುದೇ ತಂಡ ಇಲ್ಲ.

ಪದೇ ಪದೆ ಸೋಲನುಭವಿಸಿದರೂ ಭರವಸೆ, ತಾಳ್ಮೆ ಕಳೆದುಕೊಳ್ಳದ ಆರ್‌ಸಿಬಿ ಫ್ಯಾನ್ಸ್. ಎಷ್ಟೇ ಪಂದ್ಯ ಸೋತರೂ ಯಾವತ್ತೂ ಆರ್‌ಸಿಬಿಯನ್ನು ಬಿಟ್ಟುಕೊಟ್ಟಿಲ್ಲ. ಆರ್ ಸಿಬಿ ಪ್ರತಿ ಪಂದ್ಯ ಆಡುವಾಗಲೂ ಪಂದ್ಯ ಗೆಲುವಿಗೆ ಆರ್‌ಸಿಬಿ ಫ್ಯಾನ್ಸ್ ದೇವರ ಮೊರೆ ಹೋಗುತ್ತಾರೆ, ಹರಕೆ ಹೊರುತ್ತಾರೆ. ಅದ್ಯಾಗೂ ಇದುವರೆಗೆ ಚಾಂಪಿಯನ್ ಆಗುವುದಕ್ಕೆ ಆಗಿಲ್ಲ. ಇದೀಗ ಮತ್ತೊಮ್ಮೆ 2024ರ ಐಪಿಎಲ್ ಪಂದ್ಯ ಪ್ರಾರಂಭವಾಗಿದೆ ಈ ಬಾರಿಯೂ ಆರ್‌ಸಿಬಿ ಗೆಲುವಿಗೆ ದೇವರ ಮೊರೆ ಹೋಗಿರುವ ಫ್ಯಾನ್ಸ್.

IPL 2024 ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ರೋಚಕ ಹೋರಾಟ, ಆರ್‌ಸಿಬಿಗೆ 177 ರನ್ ಟಾರ್ಗೆಟ್!

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ಹಿನ್ನೆಲೆ ಜರುಗಿದ ಐತಿಹಾಸಿಕ ಮುರಡಬಸವೇಶ್ವರ ಮಹಾರೋಥೋತ್ಸವ ಜಾತ್ರೆಯಲ್ಲೂ ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳು ಜೈಕಾರ ಹಾಕಿ ಉತ್ತುತ್ತಿ, ಬಾಳೆಹಣ್ಣು ಹೂ ಎಸೆದು ಭಕ್ತಿ ಸಮರ್ಪಿಸಿರುವ ಅಭಿಮಾನಿಗಳು. ಜಾತ್ರೆ ಮಹೋತ್ಸವದಲ್ಲಿ ಆರ್‌ಸಿಬಿ ಆರ್‌ಸಿಬಿ ಎಂದು ಘೋಷಣೆ ಕೂಗುತ್ತಾ ಸಕತ್ ಡ್ಯಾನ್ಸ್ ಮಾಡಿದ್ದಾರೆ. ಜಾತ್ರೆಯಲ್ಲಿ ಆರ್ಸಿಬಿ ಅಭಿಮಾನಿಗಳದ್ದೇ ಹವಾ. ಸಕತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾರಿ ಮುರಡಬಸವೇಶ್ವರನಿಗೆ ಬೇಡಿಕೊಂಡಿರುವುದರಿಂದ ಆರ್‌ಸಿಬಿ ಗೆಲ್ಲುವುದು ಪಕ್ಕಾ ಎಂದಿರುವ ಅಭಿಮಾನಿಗಳು. ಇಂದು ನಡೆಯುತ್ತಿರುವ ಪಂದ್ಯ ಗೆಲ್ಲುವಂತೆಯೂ ಅಭಿಮಾನಿಗಳು ದೇವರಿಗೆ ಕೈಮುಗಿದು ಮಹಾ ರಥೋತ್ಸವಕ್ಕೆ ಉತ್ತುತ್ತಿ ಬಾಳೆಹಣ್ನು ಹೂ ಎಸೆದು ಕೈಮುಗಿದಿದ್ದಾರೆ. 

IPL 2024 ತವರಿನ ಅಭಿಮಾನಿಗಳ ಭರ್ಜರಿ ಬೆಂಬಲ,ಪಂಜಾಬ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ!