Asianet Suvarna News Asianet Suvarna News

ರಸ್ತೆಯಲ್ಲಿ ಸಿಕ್ಕ ಐಫೋನ್ ಮಾಲೀಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್!

ರಸ್ತೆಯಲ್ಲಿ ಬಿದ್ದಿದ್ದ ಸಾವಿರಾರು ರೂಪಾಯಿ ಬೆಲೆಬಾಳುವ ಐಫೋನ್‌ನ್ನು ವಾರಸುದಾರರಿಗೆ ಹಿಂದಿರುಗಿಸಿದ ಸಂಚಾರಿ ಪೊಲೀಸ್ ಪೇದೆಯ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Iphone returned to owner by honest traffic police parameshwarappa at vijayangar bengaluru rav
Author
First Published Apr 11, 2024, 12:11 PM IST

ಬೆಂಗಳೂರು (ಏ.11): ರಸ್ತೆಯಲ್ಲಿ ಬಿದ್ದಿದ್ದ ಸಾವಿರಾರು ರೂಪಾಯಿ ಬೆಲೆಬಾಳುವ ಐಫೋನ್‌ನ್ನು ವಾರಸುದಾರರಿಗೆ ಹಿಂದಿರುಗಿಸಿದ ಸಂಚಾರಿ ಪೊಲೀಸ್ ಪೇದೆಯ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಪರಮೇಶ್ವರಪ್ಪ, ಪ್ರಾಮಾಣಿಕತೆ ಮೆರೆದ ಸಂಚಾರಿ ಪೊಲೀಸ್ ಪೇದೆ. ಕೆಎಲ್ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ಹೆಡ್‌ಕಾನ್ಸ್‌ಟೇಬಲ್ ಆಗಿರುವ ಪರಮೇಶ್ವರಪ್ಪ ಇಂದು ರಂಜಾನ್ ಪ್ರಯುಕ್ತ ವಿಜಯನಗರದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದಲ್ಲಿದ್ದ ವೇಳೆ ರಸ್ತೆಯಲ್ಲಿ ಐಫೋನ್ ಸಿಕ್ಕಿದೆ. ತಕ್ಷಣ ಮೊಬೈಲ್‌ ಕಳೆದುಕೊಂಡ ಮಾಲೀಕನನ್ನು ಪತ್ತೆ ಹಚ್ಚಿದ ಪರಮೇಶ್ವರಪ್ಪ. ಸಿಮೆಂಟ್ ಉದ್ಯಮಿಯಾಗಿರುವ ಗೌರವ್ ಆರ್ಚರ್ ವಾಹನ ಸಂಚಾರದ ವೇಳೆ ರಸ್ತೆಯಲ್ಲಿ ಬಿಳಿಸಿಕೊಂಡು ಹೋಗಿದ್ದರ. ಮೊಬೈಲ್ ಕಳೆದುಕೊಂಡ ಬಳಿಕ ಅದು ವಾಪಸ್ ಸಿಗುತ್ತೆಂಬ ಆಸೆ ಕೈಬಿಟ್ಟಿದ್ದ ಉದ್ದಮಿ. ಕಾರಣ ಐಫೋನ್ ಸಿಕ್ಕರೆ ಯಾರೂ ಮರಳಿ ಕೊಡುವುದಿಲ್ಲ ಎಂಬುದು. ಆದರೆ ಪ್ರಾಮಾಣಿಕ ಪೊಲೀಸ್ ಪೇದೆಗೆ ಕೈಗೆ ಸಿಕ್ಕಿದ್ದ ಐಫೋನ್‌ ಕೂಡಲೇ ಸಂಪರ್ಕಿಸಿ ಮಾಲೀಕನಿಗೆ ಹಿಂದಿರುಗಿಸಿದ್ದಾರೆ.

ದಾರೀಲಿ ಸಿಕ್ಕ ಐಫೋನ್ ಮಾಲೀಕನಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಪೇದೆ

ಮೊಬೈಲ್ ಕಳೆದುಕೊಂಡಾಗಲೇ ಇದು ನನ್ನ ಕೈಗೆ ಸಿಗುವುದಿಲ್ಲ ಎಂದುಕೊಂಡಿದ್ದೆ ಆದರೆ ವಾಪಸ್ ಸಿಕ್ಕಿರುವುದು ಖುಷಿಯಾಗಿದೆ ಎಂದ ಉದ್ಯಮಿ, ಈ ವೇಳೆ ಸಂಚಾರಿ ಪೊಲೀಸ್ ಪರಮೇಶ್ವರಪ್ಪ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಧನ್ಯವಾದಗಳು ತಿಳಿಸಿದ್ದಾರೆ.

ಪೊಲೀಸರೆಂದರೆ ಅದರಲ್ಲೂ ಟ್ರಾಫಿಕ್ ಪೊಲೀಸರೆಂದರೆ ಹಣ ಸುಲಿಯುವವರು, ಭ್ರಷ್ಟರು, ಕರುಣೆ ಇಲ್ಲದವರು ಆಡಿಕೊಳ್ಳುವವರನ್ನು ಕೇಳಿದ್ದೇವೆ. ಆದರೆ ಪರಮೇಶ್ವರಪ್ಪರಂಥ ಪ್ರಾಮಾಣಿಕ ಸಂಚಾರಿ ಪೊಲೀಸರು ಇದ್ದಾರೆಂಬುದು ಮರೆಯಬಾರದು. ಇಂಥವರ ಸಂಖ್ಯೆ ನೂರ್ಮಡಿಯಾಗಲಿ ಎಂಬುದೇ ನಮ್ಮ ಆಶಯ.

 

ರಸ್ತೆ ಬದಿ ಬಿದ್ದು ಸಿಕ್ಕ 25 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Follow Us:
Download App:
  • android
  • ios