ವಾಲ್ಮೀಕಿ ನಿಗಮದ ಹಗರಣ: ಸಿಬಿಐನಿಂದಲೂ ತನಿಖೆ ನಿಶ್ಚಿತ?
100 ಕೋಟಿಗೂ ಹೆಚ್ಚು ಮೊತ್ತದ ಕಡ್ಡಾಯವಾಗಿ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈ ಪ್ರಕರಣದಲ್ಲಿ 87 ಕೋಟಿ ರು.ಗಳ ಅವ್ಯವಹಾರ ನಡೆದಿದ್ದು, ಬ್ಯಾಂಕಿಂಗ್ ಅವ್ಯವಹಾರ ಆಗಿರುವುದರಿಂದ ಆರ್‌ಬಿಐನಿಯಮಗಳ ಪ್ರಕಾರ ಸಿಬಿಐ ತನಿಖೆಗೆ ಮುಂದಾಗುವ ಸಾಧ್ಯತೆಯೇ ಹೆಚ್ಚು.
ಬೆಂಗಳೂರು(ಜೂ.01): ಯೂನಿಯನ್ ಬ್ಯಾಂಕ್‌ನಲ್ಲಿ ನಡೆದಿರುವ ವಾಲ್ಮೀಕಿ ನಿಗಮದ 87 ಕೋಟಿ ರು. ಅಕ್ರಮ ಹಣ ವರ್ಗಾ ವಣೆ ಕುರಿತು ಬ್ಯಾಂಕ್ ಈಗಾಗಲೇ ಸಿಬಿಐಗೆ ದೂರು ನೀಡಿದ್ದು, ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವುದೇ ಕುತೂಹಲ ಮೂಡಿದೆ.
ಆರ್‌ಬಿಐ ನಿಯಮಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸಿದರೆ 87 ಕೋಟಿ ರು. ಹಣ ಆಕ್ರಮ ವರ್ಗಾವಣೆಯಾಗಿರುವುದರಿಂದ ಸಹಜವಾಗಿಯೇ ತನಿಖೆಗೆ ಮುಂದಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಆರ್‌ಬಿಐ ನಿಯಮಗಳ ಪ್ರಕಾರ 25 ರಿಂದ 50 ಕೋಟಿ ರು. ಮೊತ್ತದ ಯಾವುದೇ ಬ್ಯಾಂಕ್ ವಂಚನೆ ಪ್ರಕರಣವನ್ನು ಕಡ್ಡಾಯವಾಗಿ ಸಿಬಿಐನ ವಿಭಾಗ (ಬಿಎಸ್‌ಎಫ್‌ಸಿ) ಹಾಗೂ 50 ಕೋಟಿಗೂ ಹೆಚ್ಚಿನ ಮೊತ್ತದ ವಂಚನೆಯನ್ನು ಸಿಬಿಐ ಜಂಟಿ ನಿರ್ದೇಶಕರೇ ತನಿಖೆ ನಡೆಸಬೇಕು.
ನಾಗೇಂದ್ರ ವಿರುದ್ಧದ ಆರೋಪದ ವಾಸ್ತವಾಂಶ ಪರಿಶೀಲನೆ: ಡಿ.ಕೆ. ಶಿವಕುಮಾರ್
ಇನ್ನು 100 ಕೋಟಿಗೂ ಹೆಚ್ಚು ಮೊತ್ತದ ಕಡ್ಡಾಯವಾಗಿ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈ ಪ್ರಕರಣದಲ್ಲಿ 87 ಕೋಟಿ ರು.ಗಳ ಅವ್ಯವಹಾರ ನಡೆದಿದ್ದು, ಬ್ಯಾಂಕಿಂಗ್ ಅವ್ಯವಹಾರ ಆಗಿರುವುದರಿಂದ ಆರ್‌ಬಿಐನಿಯಮಗಳ ಪ್ರಕಾರ ಸಿಬಿಐ ತನಿಖೆಗೆ ಮುಂದಾಗುವ ಸಾಧ್ಯತೆಯೇ ಹೆಚ್ಚು. ಹೀಗಾದಲ್ಲಿ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ನೇಮಕ ಮಾಡಿರುವ ಎಸ್‌ಐಟಿ ಹಾಗೂ ಸಿಬಿಐ ಎರಡೂ ತನಿಖಾ ಸಂಸ್ಥೆಗಳೂ ಒಂದೇ ಸಮಯದಲ್ಲಿ ತನಿಖೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.