ಕೇಂದ್ರ ಬಜೆಟ್ ಬಗ್ಗೆ ನಮಗೆ ಯಾವುದೇ ನಿರೀಕ್ಷೆ ಇಲ್ಲ: ಪ್ರಿಯಾಂಕ್ ಖರ್ಗೆ
ದೇಶ ಬಡತನ ರೇಖೆಯಲ್ಲಿ 111 ಸ್ಥಾನದಲ್ಲಿದೆ. ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 98ನೇ ಸ್ಥಾನದಲ್ಲಿದೆ. ಹೀಗಾಗಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆ ಶೂನ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಹೇಳಿದರು.
ಬೆಂಗಳೂರು (ಫೆ.1) : ದೇಶ ಬಡತನ ರೇಖೆಯಲ್ಲಿ 111 ಸ್ಥಾನದಲ್ಲಿದೆ. ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 98ನೇ ಸ್ಥಾನದಲ್ಲಿದೆ. ಹೀಗಾಗಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆ ಶೂನ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು, ಕೇಂದ್ರ ಬಜೆಟ್ ಬಗ್ಗೆ ನಮ್ಮ ನಿರೀಕ್ಷೆ ಶೂನ್ಯ. ಕೇಂದ್ರದಿಂದ ಉದ್ಯೋಗ ಸೃಷ್ಟಿಆಗಿದ್ಯಾ? 10 ಸಾವಿರ ಜನ ಇಸ್ರೇಲ್ ನಲ್ಲಿಕೆಲಸ ಮಾಡ್ತಿದ್ದಾರೆ ಯಾಕೆ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಎಂದು ವಾಗ್ದಾಳಿಕ ನಡೆಸಿದರು.
50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?
ಈ ಬಜೆಟ್ ಬಗ್ಗೆ ನಮಗೆ ಯಾವುದೇ ನಿರೀಕ್ಷೆ ಇಲ್ಲ. ಬಿಜೆಪಿಗರು ದೊಡ್ಡ ದೊಡ್ಡ ಮಾತು ಹೇಳುವುದಷ್ಟೇ. ಬಡವರಿಗೆ ಯಾವ ಯೋಜನೆ ತಂದಿದ್ದಾರೆ. ಫೈನಾನ್ಸ್ ಮಿನಿಸ್ಟರ್ ಕನ್ನಡಿಗರಿಂದ ಹೋದವರು, ಆದರೆ, ಕರ್ನಾಟಕಕ್ಕೆ ಅವರ ಕೊಡುಗೆಯೇನು? ಎಂದು ಪ್ರಶ್ನಿಸಿದರು.
Union Budget 2024: ಈ ವರ್ಷ ಕ್ರೆಡಿಟ್ ಹರಿವು ಹೆಚ್ಚಳ; 9 ತಿಂಗಳಲ್ಲಿ ವಿವಿಧ ವಲಯಕ್ಕೆ ಕ್ರೆಡಿಟ್ ಹರಿವು ಎಷ್ಟಿದೆ?
ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಲೇ ಇದೆ. ಜಿಎಸ್ ಟಿ ಮರುಪಾವತಿಯಲ್ಲಿ ಅನ್ಯಾಯವಾಗಿದೆ. ಕಲಬುರಗಿಯಲ್ಲಿ ಇಂಡಸ್ಟ್ರೀಸ್ ಮಾಡುತ್ತೇವೆ ಎಂದಿದ್ದರು ಆಯಿತೇ? ಮೋದಿ ಗ್ಯಾರೆಂಟಿಯಲ್ಲಿ ಶೇ.50ರಷ್ಟು ಕನ್ನಡಿಗರ ಬೆವರಿದೆ. ಜಲಜೀವನ್ ಮಿಷನ್ ನಲ್ಲಿ ಶೇ.50ರಷ್ಟು ಮಂದಿಯ ಬೆವರಿದೆ ಎಂದರು.