ಮಂಗಳೂರು ಶಾಲಾ ಶಿಕ್ಷಿಕಿಯಿಂದ ಅಯೋಧ್ಯಾ, ಪ್ರಭು ಶ್ರೀರಾಮನ ಅವಹೇಳನ: ಪೋಷಕರು ಹಿಂದೂ ಕಾರ್ಯಕರ್ತರು ಆಕ್ರೋಶ

ಶಾಲಾ ಶಿಕ್ಷಕಿಯಿಂದ ಅಯೋಧ್ಯಾ ಹಾಗೂ ಪ್ರಭು ಶ್ರೀರಾಮನ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶಿಕ್ಷಕಿ ಪ್ರಭಾ ಎಂಬುವವರಿಂದ ರಾಮ ದೇವರ ಅವಹೇಳನ ಆರೋಪ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಪ್ರಭಾ

Insult Ayodhya Sri Rama by school teacher Outrage against Gerosa Education Institute mangaluru rav

ಮಂಗಳೂರು (ಫೆ.10): ಶಾಲಾ ಶಿಕ್ಷಕಿಯಿಂದ ಅಯೋಧ್ಯಾ ಹಾಗೂ ಪ್ರಭು ಶ್ರೀರಾಮನ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶಿಕ್ಷಕಿ ಪ್ರಭಾ ಎಂಬುವವರಿಂದ ರಾಮ ದೇವರ ಅವಹೇಳನ ಆರೋಪ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಪ್ರಭಾ, ಶ್ರೀರಾಮ ಹಾಗೂ ಅಯೋಧ್ಯೆಗೆ ಅವಮಾನ ಮಾಡಿದ್ದಾರೆಂದು ಪೋಷಕಿಯೊಬ್ಬರು ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆಡಿಯೋ ಜೊತೆಗೆ ಶಾಲೆಗೆ ಮುತ್ತಿಗೆ ಹಾಕಲು ಸಂದೇಶ ನೀಡಲಾಗಿದೆ. ಶ್ರೀರಾಮ, ಅಯೋಧ್ಯೆ ರಾಮಮಂದಿರ ಅವಹೇಳನ ಮಾಡಿದ ಶಿಕ್ಷಕಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುವಂತೆ ತಿಳಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದಲ್ಲಿ ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪೋಷಕರು ಸೇರಬೇಕೆಂದು ಸಂದೇಶದಲ್ಲಿ ವಿನಂತಿಸಲಾಗಿದೆ.

ಸಂಸದ ಅನಂತಕುಮಾರ್ ಹೆಗಡೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿ ಸೈಲೆಂಟ್ ಆದ NSUI!

ಆಡಿಯೋ ಸಂದೇಶ ವಾಟ್ಸಪ್ ಗ್ರೂಪ್ ಗಳ ಮೂಲಕ ಎಲ್ಲಡೆ ಹರಿದಾಡಿದ್ದು ಇದರಿಂದ ಶಾಲೆ ಪೋಷಕರು ಹಾಗೂ ಹಿಂದು ಕಾರ್ಯಕರ್ತರು ಶಾಲೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.  ಶಾಲಾ ಆವರಣದಲ್ಲಿ ಜಮಾವಣೆಯಾದ ಕೆಲ ಕಾರ್ಯಕರ್ತರು ಹಾಗೂ ಪೋಷಕರು. ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನ ಬಳಿಕ ಶಾಲೆ ಬಂದ್ ಆಗಿದ್ದರೂ ಕೆಲ ಪೋಷಕರು, ಕಾರ್ಯಕರ್ತರ ಜಮಾವಣೆಯಾಗುತ್ತಿದ್ದಾರೆ. ಶಿಕ್ಷಕಿ ಪ್ರಭಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವ ಪೋಷಕರು.
...

Latest Videos
Follow Us:
Download App:
  • android
  • ios