Asianet Suvarna News Asianet Suvarna News

ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯ: ದೇವೇಗೌಡ

*  ಕೇಂದ್ರದ ಯೋಜನೆಯಿಂದ ಬೆಂಗಳೂರಿಗೆ ನೀರಿನ ಬರ
*  ಸಂಸತ್ತಿನಲ್ಲಿ ಬಜೆಟ್‌ ಚರ್ಚೆ ವೇಳೆ ಮಾಜಿ ಪಿಎಂ ಕಳವಳ
*  ಕರ್ನಾಟಕದ ಪಾಲು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು
 

Injustice to Karnataka By River Alignment Says Former PM HD Devegowda grg
Author
Bengaluru, First Published Feb 9, 2022, 6:05 AM IST

ನವದೆಹಲಿ(ಫೆ.09):  ಕೇಂದ್ರ ಬಜೆಟ್‌ನಲ್ಲಿ(Union Budget) ಘೋಷಿಸಲಾಗಿರುವ ನದಿ ಜೋಡಣೆ ಯೋಜನೆಗಳಿಂದ(River Alignment) ಕರ್ನಾಟಕಕ್ಕೆ ಭಾರೀ ಅನ್ಯಾಯ ಆಗಲಿದೆ. ರಾಜ್ಯದಲ್ಲಿ ಭಾರೀ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda)  ಅವರು ಮಂಗಳವಾರ ಕಳವಳ ವ್ಯಕ್ತಪಡಿಸಿದರು.

ಬಜೆಟ್‌ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿಗೂ(Drinking Water) ಪರದಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಬೆಂಗಳೂರಿನಲ್ಲಿ(Bengaluru) ಈಗಾಗಲೇ ಕುಡಿಯುವ ನೀರಿನ ಅಭಾವ ಇದೆ. ಸುಪ್ರೀಂಕೋರ್ಟ್‌(Supreme Court) ಕರ್ನಾಟಕದ ನೀರಾವರಿ ಯೋಜನೆಗಳಿಗೆಂದು(Irrigation Projects) ಮೀಸಲಿಟ್ಟನೀರನ್ನು ಈಗ ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಬಜೆಟ್‌ನಲ್ಲಿ ಘೋಷಿಸಲಾದ ನದಿ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಭಾರೀ ಹಾನಿಯಾಗಲಿದೆ ಎಂದು ಹೇಳಿದರು. ಇದೇ ವೇಳೆ ಪ್ರಸ್ತಾಪಿತ ಕೃಷ್ಣಾ-ಪೆನ್ನಾರ್‌ ಮತ್ತು ಪೆನ್ನಾರ್‌-ಕಾವೇರಿ ನದಿ ಜೋಡಣೆ ಯೋಜನೆಗಳ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ ಮತ್ತು ವಿವರಗಳನ್ನು ಕೇಳಿದರು.

JDS karnataka ದೇವೇಗೌಡ ಕ್ಲಿಯರ್ ಕಟ್, ಹೆಚ್‌ಡಿಕೆ ಬಗ್ಗೆ ಕೇಳಬೇಡಿ ಎಂದ ವೈಎಸ್‌ವಿ ದತ್ತ!

ಕೃಷ್ಣಾ-ಪೆನ್ನಾರ್‌(Krishna-Pennar) ಯೋಜನೆಯನ್ನು ಉಲ್ಲೇಖಿಸಿದ ಅವರು,‘ಯೋಜನೆಯಿಂದ ತಮಿಳುನಾಡಿಗೆ ಸುಮಾರು 130 ಟಿಎಂಸಿ ಸಿಗುತ್ತದೆ. ಕರ್ನಾಟಕದ ಪಾಲಿನ ಬಗ್ಗೆ ಏನೂ ಹೇಳಿಲ್ಲ. ಕರ್ನಾಟಕದ ಪಾಲು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ(Central Government) ಮಧ್ಯಸ್ಥಿಕೆ ವಹಿಸಬೇಕು’ಎಂದು ಕೋರಿದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಬಳಕೆಗಾಗಿ ಸುಪ್ರೀಂಕೋರ್ಟ್‌ 4.7 ಟಿಎಂಸಿ ನೀಡಿದೆ. ಆದರೆ 2011ರಲ್ಲಿ ಬೆಂಗಳೂರು ನಗರದ ಜನಸಂಖ್ಯೆ 85 ಲಕ್ಷ ಇತ್ತು. ಆದರೆ ಇಂದು ಬೆಂಗಳೂರಿನಲ್ಲಿ 130 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ನೀರಾವರಿಗೆ ಮೀಸಲಿಟ್ಟ 50 ಟಿಎಂಸಿ ನೀರನ್ನು ಬಳಸುತ್ತಿದ್ದೇವೆ. 130 ಲಕ್ಷ ಜನರಿಗೆ 4.75 ಟಿಎಂಸಿ ನೀರು ಸಾಲುವುದಿಲ್ಲ ಎಂದು ವಿವರಿಸಿದರು.

ಕಾವೇರಿ ಜಲ ವಿವಾದದಲ್ಲಿ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ 284 ಟಿಎಂಸಿ ಮತ್ತು ತಮಿಳುನಾಡಿಗೆ 400 ಟಿಎಂಸಿ ಹಂಚಿಕೆ ಮಾಡಿದೆ. ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು ನಗರದ ಮೂರನೇ ಒಂದು ಭಾಗಕ್ಕೆ ಕುಡಿಯುವ ನೀರು ಹಂಚಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದು ಆರೋಪಿಸಿದರು. ಕೇಂದ್ರವು ಕರ್ನಾಟಕವನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದರಿಂದ ನಾವು ಅನಾಥರಂತೆ ಇದ್ದೇವೆ ಎಂದು ಆರೋಪಿಸಿದರು.

ಬಜೆಟ್‌ನಲ್ಲಿ ಕೃಷಿ ಅನುದಾನ 3.8% ಕಡಿತ: ರಾಜ್ಯಸಭೆಯಲ್ಲಿ ದೇವೇಗೌಡ

ನವದೆಹಲಿ: ಬಜೆಟ್‌ನಲ್ಲಿ ಕೃಷಿಗೆ(Agriculture) ನೀಡಲಾಗುವ ಒಟ್ಟಾರೆ ಅನುದಾನದಲ್ಲಿ ಭಾರಿ ಕಡಿತವಾಗಿದೆ. ಇದರಿಂದ ರೈತರಿಗೆ ತೀವ್ರ ನಿರಾಸೆಯಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಅವರು ಸೋಮವಾರ ರಾಜ್ಯಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಉತ್ತರ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು, ಸರ್ಕಾರ 2022ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿತ್ತು. ಆದರೆ ಈ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿಲ್ಲ. 2022-23ರ ಬಜೆಟ್‌ನಲ್ಲಿ ಕೃಷಿಗೆ ನೀಡುವ ಅನುದಾನವನ್ನು ಶೇ.3.8ರಷ್ಟುಕಡಿತಗೊಳಿಸಲಾಗಿದೆ. ಕೃಷಿ ಸರಕುಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡುವ ಮನವಿಯನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ನಡೆಗೆ ದತ್ತಾ ಅಸಮಾಧಾನ, ಜೆಡಿಎಸ್‌ಗೆ ಗುಡ್‌ ಬೈ ಹೇಳ್ತಾರಾ ದೇವೇಗೌಡ್ರ ಮಾನಸ ಪುತ್ರ

ದೇಶದಲ್ಲಿ(India) ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಯನ್ನು ಪೂರೈಸಲು ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸಬೇಕಾಗಿದೆ. ಆದರೆ ಬಜೆಟ್‌ನಲ್ಲಿ ರಾಸಾಯನಿಕ ಸಿಂಪಡಣೆಗಾಗಿ ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯಂತಹ ಯೋಜನೆಗಳು ಸಂಪೂರ್ಣ ಅರ್ಥರಹಿತ. ಏಕೆಂದರೆ ಶೇ.82ರಷ್ಟುರೈತರು ಕನಿಷ್ಠ ಮತ್ತು ಸಣ್ಣ ಹಿಡಿವಳಿದಾರರಾಗಿದ್ದು, ಸರಾಸರಿ 1.08 ಹೆಕ್ಟೇರ್‌ ಭೂಮಿ ಹೊಂದಿದ್ದಾರೆ ಎಂದು ತಿಳಿಸಿದರು.

ಆಹಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದ್ದು, ಇದು ಕೃಷಿ ವೆಚ್ಚ ಮತ್ತು ವೆಚ್ಚದ ಒಳಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಬಜೆಟ್‌ ಹಂಚಿಕೆಯು ಎಲ್ಲರನ್ನೂ ನಿರಾಶೆಗೊಳಿಸಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ (MSP)ಗೆ ಹೆಚ್ಚಿನ ಸಂಖ್ಯೆಯ ಬೆಳೆಗಳನ್ನು ಒಳಗೊಳ್ಳುವಂತೆ ಮಾಡುವ ಬದಲು ಕಡಿತ ಮಾಡಲಾಗಿದೆ. ಇದು ರೈತರ ಆಹಾರ ಉತ್ಪಾದನೆ ಮತ್ತು ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಆದಾಗ್ಯೂ, 2022-23 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸುವ ಸರ್ಕಾರದ ಕ್ರಮವನ್ನು ಸ್ವಾಗತಿಸಿ, ಇದು ಬಜೆಟ್‌ನ ಪ್ರಧಾನ ಆಕರ್ಷಣೆ ಎಂದು ಕರೆದರು.
 

Follow Us:
Download App:
  • android
  • ios