ನಗರದ ಬಿಎಂಟಿಸಿ ಬಸ್ ಕಂಡಕ್ಟರ್, ಡ್ರೈವರ್ ವಿದ್ಯಾರ್ಥಿನಿಯನ್ನು ನಿಂದಿಸಿ ಮಾರ್ಗಮಧ್ಯೆ ಇಳಿಸಿದ ಅಮಾನವೀಯ ಘಟನೆ ನಡೆದಿದೆ. ಬಿಎಂಟಿಸಿ ಕಂಡಕ್ಟರ್, ಇಬ್ಬರು ಪುರುಷ ಪ್ರಯಾಣಿಕರಿಂದ 9 ನೇ ತರಗತಿಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿ ಪೋಷಕರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು (ಆ.13): ನಗರದ ಬಿಎಂಟಿಸಿ ಬಸ್ ಕಂಡಕ್ಟರ್, ಡ್ರೈವರ್ ವಿದ್ಯಾರ್ಥಿನಿಯನ್ನು ನಿಂದಿಸಿ ಮಾರ್ಗಮಧ್ಯೆ ಇಳಿಸಿದ ಅಮಾನವೀಯ ಘಟನೆ ನಡೆದಿದೆ.

ಬಿಎಂಟಿಸಿ ಕಂಡಕ್ಟರ್, ಇಬ್ಬರು ಪುರುಷ ಪ್ರಯಾಣಿಕರಿಂದ 9 ನೇ ತರಗತಿಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿ ಪೋಷಕರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಏನು?

ನಗರ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಶಾಲೆ ಮುಗಿಸಿಕೊಂಡು ಎಂದಿನಂತೆ ಬಿಎಂಟಿಸಿ ಬಸ್ ಹತ್ತಿರುವ ವಿದ್ಯಾರ್ಥಿನಿ. ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಇರುವ ಕಾರಣ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆಧಾರ್ ಕಾರ್ಡ್ ನೋಡಿದ ಕಂಡಕ್ಟರ್ ಇದರಲ್ಲಿ ಹಿಂದಿ ಅಕ್ಷರಗಳಿವೆ. ಫ್ರೀ ಟಿಕೆಟ್ ನೀಡಲ್ಲ ಎಂದಿದ್ದಾರೆ. ಬಳಿಕ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡಿರುವ ವಿದ್ಯಾರ್ಥಿನಿ. ಬಳಿಕ ವಿದ್ಯಾರ್ಥಿನಿ ಟಿಕೆಟ್‌ ಹರಿದು ಬಸ್‌ನಿಂದ ಇಳಿದುಕೊಳ್ತೇನೆ ಬಸ್ ನಿಲ್ಲಿಸಿ ಎಂದಿದ್ದಾಳೆ. ಆದರೆ ಕಂಡಕ್ಟರ್, ಡ್ರೈವರ್ ಬಸ್ ನಿಲ್ಲಿಸದೇ ಬೇರೊಂದು ಕಡೆ ನಿಲ್ಲಿಸಿದ್ದಾರೆ. ಅಲ್ಲಿವರೆಗೆ ಸುಮ್ಮನಿರದ ಕಂಡಕ್ಟರ್ ಆಧಾರ್ ಕಾರ್ಡ್ ನ್ನು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ತೋರಿಸಿ ವಿದ್ಯಾರ್ಥಿನಿಗೆ ಮನಬಂದಂತೆ ಬೈದಿದ್ದಾನೆ. ಈ ವೇಳೆ ಕಂಡೆಕ್ಟರ್ ಗೆ ಸಾಥ್ ಕೊಟ್ಟು, ಬಾಲಕಿಯನ್ನ ಕತ್ತು ಹಿಡಿದು, ಹೊರ ದಬ್ಬಲು ಇಬ್ಬರು ಪ್ರಯಾಣಿಕರ ಪ್ರಯತ್ನಿದ್ದಾರೆ ಎನ್ನಲಾಗಿದೆ.

Bengaluru: ಟಿಕೆಟ್‌ ವಿಚಾರಕ್ಕೆ ಗಲಾಟೆ, ಪ್ರಯಾಣಿಕ-ಕಂಡಕ್ಟರ್‌ ನಡುವೆ ಬಸ್‌ನಲ್ಲೇ ಫೈಟ್‌!

ವಿದ್ಯಾರ್ಥಿನಿ ಬೆದರಿಸಿದ ಪ್ರಯಾಣಿಕರು:

ಟಿಕೆಟ್ ಪಡೆದ ಮೇಲೂ ಪ್ರಯಾಣಿಕರ ಎದುರು ವಿದ್ಯಾರ್ಥಿನಿಯನ್ನು ನಿಂದಿಸಿರುವ ಬಸ್ ಕಂಡಕ್ಟರ್. ಈ ವೇಳೆ ಸಹಜವಾಗಿ ವಿದ್ಯಾರ್ಥಿನಿ ಕೋಪಗೊಂಡಿದ್ದಾಳೆ. ಟಿಕೆಟ್ ಹರಿದು ಬಸ್ ಇಲ್ಲೆ ನಿಲ್ಲಿಸುವಂತೆ ಒತ್ತಾಯಿಸಿದ್ದಾಳೆ. ಆದರೆ ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಕಸಿದುಕೊಂಡು ಅದರಲ್ಲಿ ಹಿಂದಿ ಅಕ್ಷರಗಳನ್ನು ಪ್ರಯಾಣಿಕರಿಗೆ ತೋರಿಸಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇದೇ ಪ್ರಯಾಣಿಕರು, ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ್ದಾರೆ.

ನಿಮ್ಮಪ್ಪ ಸಿಎಮ್ಮಾ? ಪಿಎಮ್ಮಾ? ಹಾಂ ನಿನ್ನ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಾಕ್ತಿನಿ ಎಂದು ವಿದ್ಯಾರ್ಥಿನಿಗೆ ಬೆದರಿಸಿದ್ದಾರೆಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಒಬ್ಬಳು ಶಾಲಾ ವಿದ್ಯಾರ್ಥಿನಿಯೊಂದಿಗೆ ಈ ರೀತಿ ಅಮಾನವೀಯವಾಗಿ ವರ್ತಿಸುವುದು ಸರಿಯೇ? ಹಿಂದಿ ಅಕ್ಷರ ಇರುವ ಆಧಾರಕಾರ್ಡ್‌ಗಳಿಗೆ ಉಚಿತ ಟಿಕೆಟ್ ಇಲ್ಲವೆಂದು ಹೇಳಲಾಗಿದೆಯೇ? ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಬಿಎಂಟಿಸಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. 

ಟೋಪಿ ಧರಿಸಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಪ್ರಶ್ನಿಸಿದ ಮಹಿಳೆ, ವಿಡಿಯೋ ವೈರಲ್‌!