Asianet Suvarna News Asianet Suvarna News

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೇವದಾಸಿಯರು ಹೊಲಿದಿದ್ದ ಕವದಿಯನ್ನು ಗಿಫ್ಟ್​​ಕೊಟ್ಟ ಸುಧಾಮೂರ್ತಿ​

ಇಲ್ಲಿನ ತ್ರಿಬಲ್ ಐಐಐಟಿ ಉದ್ಘಾಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರಿಗೆ ಇನ್ಫೋಸಿಸ್‌ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರು ಇಳಕಲ್ ಸೀರೆಯನ್ನು ಭಾಗವಹಿಸಿದ್ದ ಗಣ್ಯರಿಗೆ ಉಡುಗೊರೆಯಾಗಿ ನೀಡಿದರು. 

Infosys Sudha Murthy Present Ilkal Saree To President Draupadi Murmu gvd
Author
First Published Sep 26, 2022, 10:52 PM IST

ಧಾರವಾಡ (ಸೆ.26): ಇಲ್ಲಿನ ತ್ರಿಬಲ್ ಐಐಐಟಿ ಉದ್ಘಾಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರಿಗೆ ಇನ್ಫೋಸಿಸ್‌ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರು ಇಳಕಲ್ ಸೀರೆಯನ್ನು ಭಾಗವಹಿಸಿದ್ದ ಗಣ್ಯರಿಗೆ ಉಡುಗೊರೆಯಾಗಿ ನೀಡಿದರು. ಧಾರವಾಡ ಐಐಐಟಿ ಉದ್ಘಾಟನೆ ವೇಳೆ ರಾಜ್ಯಪಾಲರಿಗೆ ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಇಳಕಲ್ ಸೀರೆಯೊಂದಿಗೆ ಒಂದು ಪುಸ್ತಕ ನೀಡಿ ಸುಧಾ ಮೂರ್ತಿ ಅವರು ಗೌರವ ಸಲ್ಲಿಸಿದರು.

ಇನ್ನೂ, ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವರಿಗೆ ಕೌದಿಯನ್ನು ಉಡುಗೊರೆಯಾಗಿ ಸುಧಾಮೂರ್ತಿ ನೀಡಿದರು. ಮೂರು ಸಾವಿರ ಹೊಲಿಗೆ ಹಾಕಿದ ರಾಯಚೂರು ಬಳಿ ಇರುವ ದೇವದಾಸಿಯರು ಹೊಲಿದಿದ್ದ ಕೌದಿಯ ಜೊತೆಗೆ, ಒಂದು ಪುಸ್ತಕ ಹಾಗೂ ರೇಷ್ಮೆ ಸೀರೆಯನ್ನು ಕೊಟ್ಟರು. ನಂತರ ಮಾತನಾಡಿದ ಸುಧಾ ಮೂರ್ತಿ ಅವರು, ನಾನು ರಾಷ್ಟ್ರಪತಿ ಮುರ್ಮು ಅವರಿಗೆ ನಾನು ಕವದಿ‌ ಕೊಟ್ಟಿದ್ದೇನೆ, ಆ ಕವದಿ ವಿಷೇಷವಾಗಿದ್ದು, ಅದರ ಜೊತೆಗೆ ಕವದಿ ಬಗ್ಗೆ‌ ಇರೋ ಒಂದು ಪುಸ್ತಕ ಕೊಟ್ಟಿದ್ದೇನೆ, ಆ ಪುಸ್ತಕವನ್ನ ಬರೆದವಳು ನಾನೇ ಎಂದರು.

Mandya: ಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ

ಇನ್ನು ರಾಯಚೂರಿನ ದೇವದಾಸಿಗಳ ಜೊತೆ 18 ವರ್ಷ ಕೆಲಸ ಮಾಡಿದ್ದು, ಆ ಪುಸ್ತಕ 3000 ಸಾವಿರ ಜನರನ್ನ‌ ಬದಲಾವಣೆ ಮಾಡಿದೆ. ಜೊತೆಗೆ ಇದರಿಂದ ಆ ಮೂರು ಸಾವಿರ ಜನರು ಸಾಮಾನ್ಯ ಜೀವನಕ್ಕೆ ಬಂದರು. ಅಕ್ಕಾ ನಮಗೆ ನೀನು ಬಾಳ್ ಒಳ್ಳೆದು ಮಾಡಿದಿಯಾ, ಅದಕ್ಕೆ ನಾವು ನಿಮಗೆ ಕವದಿ ಕೊಟ್ಟಿದ್ದೇವೆ, ಅದರಲ್ಲಿ ಮೂರು ಸಾವಿರ ಹೊಲಿಗೆ ಇರುತ್ತೆ, ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಣ್ಣನೆ ವಾತಾವರಣ ಕೊಡುತ್ತೆ. ಅದು ನಮ್ಮ‌ ಪ್ರೀತಿ  ಅದಕ್ಕೆ‌ ನಾನು ಅವರಿಗೆ ಕೊಟ್ಟಿದ್ದೇನೆ ಎಂದರು.

Inspiration Sudha Murthy: ಯಾರನ್ನೋ ಮೆಚ್ಚಿಸಲು ಬದಲಾಗಬೇಡಿ, ನೀವು ನೀವಾಗಿರಿ

ಬಂಗಾರ ಬೆಳ್ಳಿ ಎಲ್ಲರೂ ಕೊಡ್ತಾರೆ, ಅವರು ನನಗೆ ಕವದಿ ಕೊಟ್ಟಿದ್ದಾರೆ. ನಾನು ಅವರ ಕಡೆಯಿಂದ ವರ್ಷಕೊಮ್ಮೆ‌ಕವದಿ ಹೊಲಿಸುತ್ತೇನೆ, ನಾನು ಗೌರವಾನ್ವಿತರಿಗೆ ಅದನ್ನು ಗಿಫ್ಟ್‌ ಆಗಿ ಕೊಡುತ್ತೇನೆ. ಅದರ ಹಿಂದೆ ಅವರ ಕಣ್ಣೀರು ಇರುತ್ತೆ. ಹಾಗಾಗಿ ಎಲ್ಲರಿಗೂ ಕವದಿಯನ್ನು ಗಿಫ್ಟ್‌ ಆಗಿ ಕೊಟ್ಟಿದ್ದೇನೆ. ಇನ್ನು ಸಾಮಾನ್ಯ ಜನರು ಏನು ಊಟ ಮಾಡಿದ್ದಾರೆ ಅದನ್ನೆ ರಾಷ್ಟ್ರಪತಿ ಅವರು ತಿಂದಿದ್ದು, ಉತ್ತರ ಕರ್ನಾಟಕದ ಅಡುಗೆಯನ್ನ ಅವರು ಸವಿದಿದ್ದಾರೆ ಎಂದರು.

Follow Us:
Download App:
  • android
  • ios