Asianet Suvarna News Asianet Suvarna News

ಭಾರತದ ಕಿರಿಯ ಕವಯಿತ್ರಿ ಅಮನರಾ 'ಗೆಲೋರ್‌ ಆಫ್‌ ಮಿಸ್ಟ್ರಿಸ್‌' ಕೃತಿ ಬಿಡುಗಡೆ ಮಾಡಿದ ಸಂತೋಷ್ ಹೆಗ್ಡೆ!

ಕುಮಾರಿ ಅಮನ ಜೆ.ಕುಮಾರ್ ಅವರ ನಾಲ್ಕನೆ ಪುಸ್ತಕ  Galore of Mysteries ಅನ್ನು ಶ್ರೀ.  ಎನ್.ಸಂತೋಷ್ ಹೆಗ್ಡೆ, ಮಾನ್ಯ ನಿವೃತ್ತ ಸುಪ್ರೀಂಕೋರ್ಟ್ ನ ನ್ಯಾಯಾಧೀಶರು,  ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತರು ಬಿಡುಗಡೆ ಮಾಡಿದರು. 

Indias Youngest Poet Amanas 4th book Galore of Mysteries Released by Santosh Hegde gvd
Author
First Published Dec 30, 2023, 1:30 AM IST

ಬೆಂಗಳೂರು (ಡಿ.30): ಕುಮಾರಿ ಅಮನ ಜೆ.ಕುಮಾರ್ ಅವರ ನಾಲ್ಕನೆ ಪುಸ್ತಕ  Galore of Mysteries ಅನ್ನು ಶ್ರೀ.  ಎನ್.ಸಂತೋಷ್ ಹೆಗ್ಡೆ, ಮಾನ್ಯ ನಿವೃತ್ತ ಸುಪ್ರೀಂಕೋರ್ಟ್ ನ ನ್ಯಾಯಾಧೀಶರು,  ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತರು ಬಿಡುಗಡೆ ಮಾಡಿದರು. ಗೌರವಾನ್ವಿತ ಘನತೆವೆತ್ತ ರಾಜ್ಯಪಾಲರಾದ ಶ್ರೀ. ಥಾವರ್ ಚಂದ್ ಗೆಹ್ಲೋಟ್‌ರವರ ಸಂದೇಶವು ಈ ಪುಸ್ತಕದಲ್ಲಿ ಪ್ರಕಟವಾಗಿದೆ.  ಈ ಪುಸ್ತಕಕ್ಕೆ ಮುನ್ನುಡಿಯನ್ನು ಡಾ. ಪಿ.ವೀರ ಮುತ್ತುವೇಲ್, ಪ್ರಾಜೆಕ್ಟ್ ಡೈರೆಕ್ಟರ್, ಚಂದ್ರಯಾನ - 3 , ISRO ರವರು ಬರೆದಿದ್ದಾರೆ.

ಈ ಪುಸ್ತಕ ಅಮನಳ 4 ನೆಯ ಪುಸ್ತಕ ಹಾಗೂ ಮೊದಲ fiction writing ಪುಸ್ತಕವಾಗಿದೆ. ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವಡ್ ವಿಶ್ವ ವಿದ್ಯಾಲಯದಿಂದ 'Masterpieces of World Literature' ಕೋರ್ಸ್ ಮಾಡಿದ್ದಾರೆ. 'ಅಮಾನಾಳ Galore of Mysteries'  ಪುಸ್ತಕವು, ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿರುತ್ತದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನೆಯ ಲೋಕಕ್ಕೆ ಕರೆದೊಯ್ಯುವ ಆಕರ್ಷಣೆಯನ್ನು ಹೊಂದಿದೆ.

ನಾವು ಇಂಗ್ಲೆಂಡಲ್ಲಿ ಇದ್ದೀವಾ, ಫಲಕಗಳಲ್ಲಿ ಶೇ.60ರಷ್ಟು ಕನ್ನಡ ನಿಯಮ ಸೂಕ್ತ: ಸಚಿವ ಜೋಶಿ

ಡಾ. ಲತಾ ಟಿ.ಎಸ್, ಹಾಗೂ ಜೈವಂತ್ ಕುಮಾರ್ ಅವರ ಮಗಳಾದ ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲೀಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಅವಳ ಪ್ರಥಮ ಕವನ  'Echoes of Soulful Poems'  ಎರಡನೇ 'World Amidst the Words'  ಹಾಗೂ 'Lafzon ki Mhfil' ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿರುತ್ತವೆ. 

ಅಮನಳ ದಾಖಲೆಗಳು
* ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಪ್ ರೆಕಾಡ್ಸ್ -2021
* ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು.
* ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ - 2021 ಗೋವಾದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
* ನೋಬಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಕಿರಿಯ ಕವಯಿತ್ರಿ.
* ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ 
* ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ ಬರೆದಿದ್ದಾರೆ.
* ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ.
* ಇಂಟರ್ನ್ಯಾಷನಲ್ ಬುಕ್ಅಪ್ ರೆಕಾರ್ಡ್ಸ್ ಕಿರಿಯ ಕವಿಯತ್ರಿ.

ಸಿಎಂ, ಪಿಎಂ ಆಗೋ ಯೋಗ್ಯತೆ ಮಲ್ಲಿಕಾರ್ಜುನ ಖರ್ಗೆಗಿದೆ: ಸಚಿವ ಶರಣಬಸಪ್ಪ ದರ್ಶನಾಪುರ

ಇಲ್ಲಿಯವರೆಗೂ ಅಮನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.

Latest Videos
Follow Us:
Download App:
  • android
  • ios