Asianet Suvarna News Asianet Suvarna News

ನಾವು ಇಂಗ್ಲೆಂಡಲ್ಲಿ ಇದ್ದೀವಾ, ಫಲಕಗಳಲ್ಲಿ ಶೇ.60ರಷ್ಟು ಕನ್ನಡ ನಿಯಮ ಸೂಕ್ತ: ಸಚಿವ ಜೋಶಿ

ಕರ್ನಾಟಕದಲ್ಲಿನ ವಾಣಿಜ್ಯ ಮಳಿಗೆಗಳು ಹಾಕುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಎಂಬ ನಿಯಮವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬೆಂಬಲಿಸಿದ್ದಾರೆ. 

Union Minister Pralhad Joshi Backs 60 Percent Kannada In Signage Rules Says This Is Not England gvd
Author
First Published Dec 29, 2023, 9:43 PM IST

ನವದೆಹಲಿ (ಡಿ.29): ಕರ್ನಾಟಕದಲ್ಲಿನ ವಾಣಿಜ್ಯ ಮಳಿಗೆಗಳು ಹಾಕುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಎಂಬ ನಿಯಮವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬೆಂಬಲಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜೋಶಿ, ‘ಹಿಂಸೆಯನ್ನು ನಾನು ಸಮರ್ಥಿಸುವುದಿಲ್ಲವಾದರೂ, ಕನ್ನಡದಲ್ಲೂ ನಾಮಫಲಕ ಇರಬೇಕು ಎಂಬ ಬೇಡಿಕೆಯನ್ನು ನಾನು ಒಪ್ಪುತ್ತೇನೆ. 

ನಾಮಫಲಕಗಳು ಎಲ್ಲರೂ ಓದುವಂತೆ ಇರಬೇಕು, ಏಕೆಂದರೆ ಎಲ್ಲರೂ ಇಂಗ್ಲಿಷ್‌ನಲ್ಲಿ ಓದಲು ಸಾಧ್ಯವಿಲ್ಲ. ಹಾಗಿರುವಾಗ ಫಲಕಗಳಲ್ಲಿ ಇಂಗ್ಲಿಷ್‌ ಜೊತೆಗೆ ಹಿಂದಿ ಬಳಸಿದಂತೆ ಕನ್ನಡವನ್ನೂ ಬಳಸಲು ತೊಂದರೆಯಾದರೂ ಏನು? ಕೇವಲ ಇಂಗ್ಲೀಷ್‌ನಲ್ಲಿ ಮಾತ್ರವೇ ಫಲಕ ಹಾಕುವ ಹಠ ಮಾರಿತನ ಏಕೆ? ನಾವೇನು ಇಂಗ್ಲೆಂಡ್‌ನಲ್ಲಿ ಇದ್ದೇವಾ? ಬೆಂಗಳೂರಿನ ಅಂಗಡಿ ಮಾಲೀಕರು ಸ್ಥಳೀಯರ ಭಾವನೆ ಮತ್ತು ಅಗತ್ಯವನ್ನು ಮನಗಾಣಬೇಕು’ ಎಂದು ಸಲಹೆ ನೀಡಿದ್ದಾರೆ.

ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಸ್ಮರಣೀಯ: ಶಾಸಕ ಕೆ.ವೈ.ನಂಜೇಗೌಡ

ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಿ: ಧಾರವಾಡ ಲೋಕಸಭಾ ವ್ಯಾಪ್ತಿಯೊಳಗೆ ಕೈಗೊಂಡಿರುವ ಹಲವಾರು ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಸೇರಿದಂತೆ ಹಲವಾರು ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ನೈಋತ್ಯ ರೈಲ್ವೆ ಮಹಾಪ್ರಭಂದಕರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಇತ್ತೀಚೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಪಡೆ, ರೈಲ್ವೆ ಪೊಲೀಸ್ ಹಾಗೂ ಇತರೆ ಭದ್ರತಾ ಅಧಿಕಾರಿಗಳಿಗೆ ಪ್ರಯಾಣಿಕರ ಹಾಗೂ ಅವರೊಂದಿಗೆ ಇರುವ ಸರಕುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕಟ್ಟುನಿಟ್ಟಿನ ಆದೇಶ ನೀಡಿದರಲ್ಲದೇ ಕಳ್ಳತನದ ಪ್ರಕರಣಗಳ ತನಿಖೆಯನ್ನು ಸೂಕ್ತ ಸಮಯದಲ್ಲಿ ಕೈಗೊಂಡು ಕಳೆದುಕೊಂಡವರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡುವಂತೆ ಸೂಚನೆ ನೀಡಿದರು.

ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು: ಸಚಿವ ಮಹದೇವಪ್ಪ

ಹೊಸದಾಗಿ ನೇಮಕಾತಿ ಹೊಂದಿ ಆದೇಶಗಳಿಗೆ ನಿರೀಕ್ಷೆಯಲ್ಲಿರುವ ಡಿ-ಗ್ರೂಪ್ ಅಭ್ಯರ್ಥಿಗಳಿಗೆ ಬೇಗನೇ ನೇಮಕಾತಿ ಆದೇಶ ಪತ್ರ ನೀಡಲು ಮತ್ತು ಹುಬ್ಬಳ್ಳಿ-ವಾರಣಾಸಿ ರೈಲು ವಾರದಲ್ಲಿ 2 ಬಾರಿ ಓಡಿಸುವ ಎಕ್ಸಪ್ರೆಸ್‌ ರೈಲುಗಳಿಗೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ, ಕುಂದಗೋಳ ಮೇಲ್ಸೇತುವೆ ಪಕ್ಕದ ಸರ್ವೀಸ್‌ ರೋಡ್ ನಿರ್ಮಾಣ, ಅಣ್ಣಿಗೇರಿ ನಿಲ್ದಾಣದ ಹತ್ತಿರ ಮೇಲ್ಸೇತುವೆ ನಿರ್ಮಾಣ, ಧಾರವಾಡ ವಿವಿ ಹಾಗೂ ತಪೋವನದ ಹತ್ತಿರ ಕೆಳಸೇತುವೆ ನಿರ್ಮಾಣ, ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ರೈಲ್ವೆ ಓಡಾಟಗಳ ಪುನರಾರಂಭ ಇತ್ಯಾದಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರ್ ಸೇರಿದಂತೆ ನೈಋತ್ಯ ರೈಲ್ವೆಯ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios