ಕನ್ನಡ ರಾಜ್ಯೋತ್ಸವ ಆಚರಣೆ ದಿನವೇ ಬಂದಿಲ್ಲವೆಂದ ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ!

ಥಟ್ ಅಂತ ಹೇಳಿ ಕಾರ್ಯಕ್ರಮದ ಖ್ಯಾತ ನಿರೂಪಕ ನಾ. ಸೋಮೇಶ್ವರ ಅವರು ನಮ್ಮ ರಾಜ್ಯದಲ್ಲಿ ನಾವಿನ್ನೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ದಿನವೇ ಬಂದಿಲ್ಲವೆಂದು ಹೇಳಿದ್ದಾರೆ.

Indian television presenter N Someswara statement about Kannada Rajyotsava sat

ಬೆಂಗಳೂರು (ಡಿ.23): ರಾಜ್ಯದಲ್ಲಿ ನವೆಂಬರ್ ತಿಂಗಳು ಬಂದರೆ ಸಾಕು ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವ ಮೆರುಗು ಕಂಡುಬರುತ್ತದೆ. ಆದರೆ, ನಮ್ಮ ರಾಜ್ಯಕ್ಕೆ ಇನ್ನೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಕಾಲವೇ ಬಂದಿಲ್ಲವೆಂದು ಚಂದನ ಟಿವಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆ, ನೆಲ, ಜಲ ಹಾಗೂ ಗಡಿಯ ಉಳಿವಿನ ಕೂಗು ಕೇಳಿಬರುವುದು ನವೆಂಬರ್ ತಿಂಗಳಲ್ಲಿ ಮಾತ್ರ. ರಾಜ್ಯದಾದ್ಯಂತ ಸಾವಿರಾರು ಕನ್ನಡಪರ ಸಂಘಟನೆಗಳು ತಮ್ಮ ಶಕ್ತ್ಯಾನುಸಾರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತವೆ. ಆದರೆ, ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಥಟ್ ಅಂತ ಹೇಳಿ ಕಾರ್ಯಕ್ರಮ ನಿರೂಪಣೆ ಮೂಲಕ ನಾಡಿನಾದ್ಯಂತ ಖ್ಯಾತಿ ಪಡದಿರುವ ನಾ. ಸೋಮೇಶ್ವರ ಅವರು ಇದೀಗ ಕನ್ನಡೆ ರಾಜ್ಯೋತ್ಸವದ ಆಚರಣೆ ದಿನವೇ ಬಂದಿಲ್ಲ ಎಂದು ಗಂಭೀರವಾಗಿ ಚಿಂತನೆ ಮಾಡುವ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಖ್ಯಾತ ಯೂಟೂಬ್ ಸಂದರ್ಶನ ಕೀರ್ತಿ ಅವರು ತಮ್ಮ ಕೀರ್ತಿ ಇಎನ್‌ಟಿ ಕ್ಲಿನ್ ಚಾನೆಲ್ ಮೂಲಕ ನಾ. ಸೋಮೇಶ್ವರ ಅವರನ್ನೂ ಸಂದರ್ಶನ ಮಾಡಿದ್ದಾರೆ. ಈ ವೇಳೆ ನಾ. ಸೋಮೇಶ್ವರ ಅವರು ಈಗ ನಾವು ನವೆಂಬರ್ ತಿಂಗಳಲ್ಲಿ ಆಚರಣೆ ಮಾಡುತ್ತಿರುವುದನ್ನು ಕನ್ನಡ ರಾಜ್ಯೋತ್ಸವ ಎನ್ನಬೇಡಿ ಎಂದು ಫಲಕ ಪ್ರದರ್ಶನ ಮಾಡಿದ್ದಾರೆ. ಅದರಲ್ಲಿ ಕನ್ನಡ ರಾಜ್ಯೋತ್ಸವ ಅಲ್ಲ, ಅದು ಕರ್ನಾಟಕ ರಾಜ್ಯೋತ್ಸವ ಎಂದು ಬರೆದು ತೋರಿಸಿದ್ದಾರೆ. ಪುನಃ ಇದಕ್ಕೆ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಇದನ್ನೂ ಓದಿ: ಕೇರಳ ಜನರಿಗೆ 100 ಮನೆ ನಿರ್ಮಿಸಿಕೊಡುವುದಾಗಿ ಕೇಳಿದ ಸಿದ್ದರಾಮಯ್ಯಗೆ, ಪಿಣರಾಯಿ ಖಡಕ್ ಉತ್ತರ!

ನಾ. ಸೋಮೇಶ್ವರ ಅವರು ಮಾತನಾಡುತ್ತಾ, 'ತುಂಬಾ ಜನರು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಮ್ಮ ರಾಜ್ಯಕ್ಕೆ ಇನ್ನೂ ಆ ದಿನಗಳು ಬಂದಿಲ್ಲ. ಭೌಗೋಳಿಕವಾಗಿ ಕನ್ನಡ ಭಾಷೆ ಮಾತನಾಡುವ 21 ಭೂ ಭಾಗಗಳು ಸೇರಿದಂತಹ ದಿನ ಅದು ಕರ್ನಾಟಕ ರಾಜ್ಯೋತ್ಸವ ಆಗಿದೆ. ಅದು ಕರ್ನಾಟಕ ರಾಜ್ಯ ರೂಪುಗೊಂಡಿರುವ ದಿನವಾಗಿದೆ. ಆದರೆ, ಕನ್ನಡ ನಮ್ಮೆಲ್ಲರ ಭಾಷೆಯಾಗಬೇಕು. ನಾವೆಲ್ಲರೂ ಮಾತನಾಡುವ ಆಡು ಭಾಷೆಯಾಗಬೇಕು. ನಮ್ಮೆಲ್ಲರ ಹೃದಯ, ಭಾವ ಭಾಷೆಯಾಗಬೇಕು. ಮುಖ್ಯವಾಗಿ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಆಗ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡೋಣ. ಅಲ್ಲಿಯವರೆಗೂ ನಾವೆಲ್ಲರೂ 'ಕರ್ನಾಟಕ ರಾಜ್ಯೋತ್ಸವ'ವನ್ನೇ ಆಚರಣೆ ಮಾಡಬೇಕು ಎಂದು ನಾ. ಸೋಮೇಶ್ವರ ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios