Asianet Suvarna News Asianet Suvarna News

ಮುಂದಿನ 5-6 ವರ್ಷಗಳಲ್ಲಿ ಭಾರತ ಜಗತ್ತಿನ ನಂ.1 ರಾಷ್ಟ್ರವಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಸಂಸದ ಪ್ರಹ್ಲಾದ ಜೋಶಿ ಪ್ರಸ್ತುತಪಡಿಸುವ ಸಂಸದ ಸಾಂಸ್ಕೃತಿಕ ಕಾರ್ಯಕ್ರಮ -2024 ರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

India will become worlds No 1 country in next 5 or 6 years Says Pralhad Joshi gvd
Author
First Published Feb 29, 2024, 2:00 AM IST

ಶಿಗ್ಗಾಂವಿ (ಫೆ.29): ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಸಂಸದ ಪ್ರಹ್ಲಾದ ಜೋಶಿ ಪ್ರಸ್ತುತಪಡಿಸುವ ಸಂಸದ ಸಾಂಸ್ಕೃತಿಕ ಕಾರ್ಯಕ್ರಮ -2024 ರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿ, ಯುವಕರು ಸದೃಢವಾಗಿರಬೇಕಾದರೆ ದೇಶೀಯ ಕ್ರೀಡೆಗಳನ್ನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಆಡಿಸಬೇಕು ಎಂಬುದು ಪ್ರದಾನಿ ನರೇಂದ್ರ ಮೋದಿಯವರ ಆಸೆಯಾಗಿದೆ. ಜನರ ಆಶಯದಂತೆ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುತ್ತಾರೆ. ಜೊತೆಗೆ ಜಗತ್ತಿನ ಮೂರನೇ ಅತೀ ಬಲಿಷ್ಟ ರಾಷ್ಟ್ರ ಭಾರತವಾಗುತ್ತದೆ. ಮುಂದಿನ 5-6 ವರ್ಷಗಳಲ್ಲಿ ಜಗತ್ತಿನ ನಂ. 1 ರಾಷ್ಟ್ರ ಭಾರತವಾಗುತ್ತದೆ ಎಂದು ಭವಿಷ್ಯ ನುಡಿದರು.

ಯುವಕರು ಮಣ್ಣಿನಲ್ಲಿ ಆಟ ಆಡಬೇಕು, ದೇಶದ ಮಣ್ಣು ಶ್ರೇಷ್ಟವಾದದ್ದು, ಆ ಮಣ್ಣಿನ ಜೊತೆಗೆ ಬೆರೆತು ಶಕ್ತಿವಂತರಾಗಬೇಕು. ಬದಲಾದ ಭಾರತಕ್ಕೆ ಬದಲಾದ ಯುವಕರನ್ನ ತಯಾರಿಸಬೇಕು ಎಂಬ ಕಾರಣಕ್ಕಾಗಿ ಈ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ನಾನು ಮತ್ತು ಬೊಮ್ಮಾಯಿಯವರು ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಕಾರ್ಯ ಮಾಡಿದರೂ ನಗುನಗುತ್ತಾ ಮಾಡಿದ್ದೇವೆ. ಅಂತಹ ಸಹಕಾರವನ್ನ ಬೊಮ್ಮಾಯಿಯವರು ಹಾಗೂ ಕ್ಷೇತ್ರದ ಜನತೆ ನನಗೆ ಕೊಟ್ಟಿದ್ದಾರೆ. ಕಬಡ್ಡಿ ಪಂದ್ಯಾವಳಿಯನ್ನು ಪ್ರತಿ ವರ್ಷವೂ ಆಯೋಜನೆ ಮಾಡುವುದಾಗಿ ಹೇಳಿದರು.

ಮಾಜಿ ಸಿಎಂ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಕ್ರೀಡೆ, ಸಂಸ್ಕಾರ, ಸಂಸ್ಕೃತಿ, ಸಂಗೀತ, ನಾಟ್ಯ ಸೇರಿದಂತೆ ಎಲ್ಲವುಗಳಿಗೆ ಒಂದು ಶಕ್ತಿಯನ್ನು ಪ್ರಧಾನಿ ಮೋದಿಯವರು ತುಂಬಿದ್ದಾರೆ. ಅಭಿವೃದ್ಧಿಗೆ ಬಹಳಷ್ಟು ಶ್ರಮ ಬೇಕು. ಆ ನಿಟ್ಟಿನಲ್ಲಿ ಜೋಶಿಯವರು ಕೆಲಸ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿಗ್ಗಾಂವಿಯ ಸ್ವಸ್ತಿಕ್ ಎ., ದ್ವಿತೀಯ ಸ್ಥಾನ ಪಡೆದ ಸ್ವಸ್ತಿಕ್ ಬಿ ಹಾಗೂ ತೃತೀಯ ಹಾಗೂ ೪ ನೇ ಸ್ಥಾನ ಪಡೆದ ತಂಡಗಳಿಗೆ ಕೇಂದ್ರ ಸಚಿವ ಜೋಶಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ರೋಫಿ ಹಾಗೂ ಬಹುಮಾನ ವಿತರಿಸಿದರು. ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಡಾ. ಶೋಭಾ ನಿಸ್ಸೀಮಗೌಡ್ರ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಪರವಾಗಿದ್ಯಾ?: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಜನಮನ ಸೂರೆಗೊಂಡ ಸಂಗೀತ ಕಾರ್ಯಕ್ರಮ: ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಡುಗಳಿಗೆ ಮಕ್ಕಳು, ಯುವಕರು ಹಾಗೂ ಮಹಿಳೆಯರು ಕುಣಿದು ಕುಪ್ಪಳಿಸಿದರು. ಸರಿಗಮಪ ಖ್ಯಾತಿಯ ಪುರಷೋತ್ತಮ್ ಹಾಗೂ ಸಂಗೀತಾ ಭಟ್ ಅವರ ಹಾಡುಗಳೂ ಸಹಿತ ಜನಮನ ಸೂರೆಗೊಂಡವು. ಒಂದು ೧ ಗಂಟೆಗೂ ಹೆಚ್ಚು ಕಾಲ ರಾಜೇಶ್ ಕೃಷ್ಣನ್ ಹಾಡುಗಳನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೇಳಿದರು.

Follow Us:
Download App:
  • android
  • ios