ಬೆಂಗಳೂರು, (ಜೂನ್.17): ಚೀನಾ ಹಾಗೂಭಾರತದ ನಡುವೆ ಲಡಾಕ್‌ನ ಗಾಲ್ವಾನ್ ಕಣುವೆಯಲ್ಲಿ ಸೈನಿಕರ ಘರ್ಷಣೆಯಲ್ಲಿ ಹತಾತ್ಮನಾದ ಕರ್ನಲ್ ಸಂತೋಷ್ ಬಾಬು ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆ ಧೀರ ತಾಯಿ ಮಂಜುಳಾಗೆ ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ನಮನಗಳನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಸುಧಾಕರ್, ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುರವರ ತಾಯಿಯ ಮಾತು, “ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ, ಆದರೂ ನನ್ನ ಮಗ ದೇಶವನ್ನು ರಕ್ಷಿಸುವಾಗ ಹುತಾತ್ಮನಾದ ಎಂದು ನನಗೆ ಹೆಮ್ಮೆ ಇದೆ!” ಆ ಧೀರ ತಾಯಿಗೆ ನಮನಗಳು.

'ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ, ದುಃಖದಲ್ಲೂ ನನಗೆ ಹೆಮ್ಮೆ ಇದೆ'

ಪ್ರತಿ ಭಾರತೀಯ ಸೈನಿಕನ ಹಿಂದೆ ಆತನ ಕುಟುಂಬ ಮತ್ತು ಭಾರತೀಯರ ದೇಶಭಕ್ತಿಯ ಶಕ್ತಿಯಿದೆ. ಜೈ ಹಿಂದ್ ಎಂದು ಬರೆದುಕೊಂಡು ತಾಯಿ ಮಾತನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

ತಾಯಿ ಹೇಳಿದ್ದೇನು..?
ಮಾಧ್ಯಮಗಳ ಜೊತೆ ಮಾತನಾಡಿದ್ದ ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ, ನನ್ನ ಸೊಸೆ ಹಾಗೂ ಮೊಮ್ಮಕ್ಕಳು ದೆಹಲಿಯಲ್ಲೇ ಇರುತ್ತಾರೆ. ಮಗನ ಸಾವಿನ ಸುದ್ದಿ ಕೇಳಿ ಒಂದು ಕಡೆ ದುಃಖವಾಗ್ತಿದೆ. ಮತ್ತೊಂದು ಕಡೆ ಸಂತೋಷವಾಗ್ತಿದೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟ ಅನ್ನೋದು ಒಂದೆಡೆಯಾದರೆ, ಮಗನ ಅಗಲಿಕೆ ನೋವಿನ ಸಂಗತಿಯಾಗಿದೆ. ನನಗೆ ಇರುವುದು ಒಬ್ಬನೇ ಮಗ ಎಂದು ಕಣ್ಣೀರಾದರು. ಮಗನ ಸಾವಿನ ಸುದ್ದಿ ಸೊಸೆಗೆ ಸೋಮವಾರ ರಾತ್ರಿಯೇ ತಿಳಿದಿತ್ತು. ಆದರೆ ನಾನು ಆಘಾತಕ್ಕೆ ಒಳಗಾಗುತ್ತೇನೆ ಎಂದು ಹೇಳಿರಲಿಲ್ಲ. ಕೊನೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಭಾವುಕರಾದ್ರು.