ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬು | ದುಃಖದಲ್ಲೂ ನನಗೆ ಹೆಮ್ಮೆ ಇದೆ: ಸಂತೋಷ್ ತಾಯಿ| ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ
ಹೈದರಾಬಾದ್(ಜೂ.17): ‘ನನಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ’ ಎಂದು ಗಲ್ವಾನ್‌ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬು ತಾಯಿ ಮಂಜುಳಾ ಹೇಳಿದ್ದಾರೆ.
ಕತ್ತಲಾಗುತ್ತಿದ್ದಂತೆ ಚೀನಿಯರಿಂದ ಕಲ್ಲು, ಬಡಿಗೆಯಿಂದ ಭಾರತೀಯರ ಸೈನಿಕರ ಕಗ್ಗೊಲೆ!
ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾನುವಾರವಷ್ಟೇ ನನ್ನ ಜತೆ ಫೋನ್‌ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್‌ಗೆ ಆತ ವರ್ಗವಾಗಿದ್ದ. ಆದರೆ ಲಾಕ್‌ಡೌನ್ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದ ಎಂದು ಕಣ್ಣೀರಿಟ್ಟರು.

ಇದೇ ವೇಳೆ ಮಾತನಾಡಿದ ಸಂತೋಷ್ ತಂದೆ ಉಪೇಂದ್ರ, ನಾನು ಯೋಧ ಆಗಬೇಕು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಮ್ಮ ಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ. ಆತ ಇನ್ನಷ್ಟು ಎತ್ತರಕ್ಕೇರಬೇಕು ಎಂದು ಕನಸು ಕಂಡಿದ್ದೆವು. ಆದರೆ ಇಂದು ಆತ ಹುತಾತ್ಮನಾಗಿದ್ದಾನೆ ಎಂದು ನೋವು ತೋಡಿಕೊಂಡರು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"
