Asianet Suvarna News Asianet Suvarna News

ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆ ಕೊಂಚ ಹೆಚ್ಚಳ: ಆತಂಕ ದೂರ?

*   1500 ಮೆ.ವ್ಯಾಟ್‌ ಕುಸಿದಿದ್ದ ಉತ್ಪಾದನೆ ಈಗ 2118ಕ್ಕೇರಿಕೆ
*   ಆರ್‌ಟಿಪಿಎಸ್‌ 3ನೇ ಘಟಕ ಈಗಲೂ ಬಂದ್‌
*   ಕಲ್ಲಿದ್ದಲು ಕೊರತೆಯಿಂದ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆಯಾಗಿಲ್ಲ.

Increasing Electricity Generation in Karnataka grg
Author
Bengaluru, First Published Oct 17, 2021, 7:54 AM IST
  • Facebook
  • Twitter
  • Whatsapp

ಬೆಂಗಳೂರು(ಅ.17): ಕಲ್ಲಿದ್ದಲು(Coal) ಅಭಾವದಿಂದ ವಿದ್ಯುತ್‌(Electricity) ಉತ್ಪಾದನೆಯಲ್ಲಿ ಅರ್ಧದಷ್ಟು ಕುಸಿತ ಕಂಡಿದ್ದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ(Thermal Power Plant) ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದ್ದು, ವಿದ್ಯುತ್‌ ಉತ್ಪಾದನೆ ಉತ್ತಮಗೊಂಡಿದೆ. ಆದರೂ, ರಾಯಚೂರು(Raichur) ಉಷ್ಣ ವಿದ್ಯುತ್‌ ಸ್ಥಾವರದ 3ನೇ ಘಟಕ ಕಲ್ಲಿದ್ದಲು ಕೊರತೆಯಿಂದ ಶುಕ್ರವಾರವೂ ಸ್ಥಗಿತಗೊಂಡಿರುವುದಾಗಿ ಇಂಧನ ಇಲಾಖೆ ತಿಳಿಸಿದೆ.

ಐದು ದಿನಗಳ ಹಿಂದೆ ತೀವ್ರ ಕಲ್ಲಿದ್ದಲು ಕೊರತೆಯಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಶೇ. 52 ರಷ್ಟು ಕುಸಿದಿತ್ತು. ಅಲ್ಲದೆ, ರಾಜ್ಯದ(Karnataka) ಒಟ್ಟಾರೆ ವಿದ್ಯುತ್‌ ಉತ್ಪಾದನೆಯೂ ಶೇ.50 ರಷ್ಟು ಕುಸಿತ ಕಂಡಿತ್ತು.

ಆಗಸ್ಟ್‌ 10 ರಂದು ಆರ್‌ಟಿಪಿಎಸ್‌(RTPS) (ರಾಯಚೂರು) ಘಟಕದ ಉತ್ಪಾದನೆ 475 ಮೆ.ವ್ಯಾಟ್‌ಗೆ, (BTPS) (Ballari)(ವಿದ್ಯುತ್‌ ಉತ್ಪಾದನೆ 342 ಮೆ.ವ್ಯಾಟ್‌ಗೆ ಕುಸಿದಿತ್ತು. (YTPS) (ಯರಮರಸ್‌) ಘಟಕ ಮಾತ್ರ 707 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿತ್ತು.

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

ಮೂರು ಘಟಕಗಳು 5,020 ಮೆ.ವ್ಯಾಟ್‌ ಗರಿಷ್ಠ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ವಾಡಿಕೆ ದಿನಗಳಲ್ಲಿ 3,200 ರಿಂದ 3,300 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದವು. ಆದರೆ, ಕಲ್ಲಿದ್ದಲು ಕೊರತೆಯಿಂದ ಅ.10 ರಂದು ಮೂರು ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಕೇವಲ 1,524 ಮೆ.ವ್ಯಾಟ್‌ಗೆ ಕುಸಿತ ಕಂಡಿತ್ತು. ಕಲ್ಲಿದ್ದಲು ಕೊರತೆಯಿಂದಾಗಿಯೇ ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಎರಡು ಉತ್ಪಾದನಾ ಘಟಕ ಸ್ಥಗಿತಗೊಳಿಸಿರುವ ಬಗ್ಗೆ ಇಂಧನ ಇಲಾಖೆಯೇ ಅಧಿಕೃತವಾಗಿ ಪ್ರಕಟಿಸಿತ್ತು.

ಅಲ್ಪ ಚೇತರಿಕೆ, ಕೊರತೆ ಮುಂದುವರಿಕೆ:

ಇದೀಗ ಶುಕ್ರವಾರದ ವೇಳೆಗೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ತಕ್ಕ ಮಟ್ಟಿಗೆ ಚೇತರಿಕೆ ಕಂಡಿದೆ. ಅ. 15 ರಂದು ಆರ್‌ಟಿಪಿಎಸ್‌ (ರಾಯಚೂರು) ಘಟಕದಲ್ಲಿ 768 ಮೆ.ವ್ಯಾಟ್‌, ಬಿಟಿಪಿಎಸ್‌ (ಬಳ್ಳಾರಿ) ಘಟಕದಲ್ಲಿ 790 ಮೆ.ವ್ಯಾಟ್‌, ವೈಟಿಪಿಎಸ್‌ (ಯರಮರಸ್‌) ಘಟಕದಲ್ಲಿ 560 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಿದೆ. ಒಟ್ಟಾರೆ 2,118 ಮೆ.ವ್ಯಾಟ್‌ ವಿದ್ಯುತ್‌ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಉತ್ಪಾದನೆಯಾಗಿದೆ. ಒಟ್ಟಾರೆ ವಿದ್ಯುತ್‌ ಪೂರೈಕೆಯು 8,852 ಮೆ.ವ್ಯಾಟ್‌ ತಲುಪಿದೆ.

ಆದರೂ, ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಾಡಿಕೆ ದಿನಗಳಲ್ಲಿ ಉತ್ಪಾದನೆಯಾಗುತ್ತಿದ್ದ ಪ್ರಮಾಣವನ್ನು ಮುಟ್ಟಿಲ್ಲ. ಶುಕ್ರವಾರವೂ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರದ 3ನೇ ಘಟಕವನ್ನು ಕಲ್ಲಿದ್ದಲು ಕೊರತೆಯಿಂದ ಮುಚ್ಚಿರುವುದಾಗಿ ಇಂಧನ ಇಲಾಖೆ ಉನ್ನತ ಅಧಿಕಾರಿಗಳು ಕನ್ನಡಪ್ರಭಕ್ಕೆ(Kannada Prabha) ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ನೀಡಿರುವ ಇಂಧನ ಸಚಿವ ವಿ. ಸುನಿಲ್‌ಕುಮಾರ್‌(V Sunil Kumar), ಕಲ್ಲಿದ್ದಲು ಕೊರತೆಯಿಂದ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆಯಾಗಿಲ್ಲ. ಕಲ್ಲಿದ್ದಲು ಕೊರತೆಯಿಂದ ಯಾವುದೇ ಘಟಕ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂಧನ ಇಲಾಖೆಯೇ ಅಧಿಕೃತವಾಗಿ ಕಲ್ಲಿದ್ದಲು ಕೊರತೆಯಿಂದ ಎರಡು ಘಟಕ ಸ್ಥಗಿತಗೊಳಿಸಿರುವುದಾಗಿ ಹೇಳಿದ್ದರೂ ಸಚಿವರು ನೀಡಿದ್ದ ಸ್ಪಷ್ಟನೆ ತೀವ್ರ ಚರ್ಚೆ ಹುಟ್ಟು ಹಾಕಿತ್ತು.

ಟಾಪ್‌- ಸುಧಾರಣೆ ವಿದ್ಯುತ್‌ ಉತ್ಪಾದನೆ ಹೆಚ್ಚಳ

ಸ್ಥಾವರ ಅ.10 ಅ.15 (ಮೆ.ವ್ಯಾಟ್‌)

ಆರ್‌ಟಿಪಿಎಸ್‌ 475 768
ಬಿಟಿಪಿಎಸ್‌ 342 790
ವೈಟಿಪಿಎಸ್‌ 707 560
ಒಟ್ಟು 1524 2118
 

Follow Us:
Download App:
  • android
  • ios