Asianet Suvarna News Asianet Suvarna News

ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಕೊರೋನಾ ಕೇಸ್‌: ಹೆಚ್ಚಿದ ಟೆನ್ಷನ್‌..!

*  ಬುಧವಾರ 1826 ಕೇಸು, 33 ಜನರ ಸಾವು
*  13 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆ
*  ರಾಜ್ಯದಲ್ಲಿ ಒಟ್ಟು 36,881 ಮಂದಿ ಕೊರೋನಾಗೆ ಬಲಿ
 

Increased Corona Cases In Border Districts in Karnataka grg
Author
Bengaluru, First Published Aug 12, 2021, 7:40 AM IST
  • Facebook
  • Twitter
  • Whatsapp

ಬೆಂಗಳೂರು(ಆ.12): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಬುಧವಾರ 1,826 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 33 ಮಂದಿ ಸಾವನ್ನಪ್ಪಿದ್ದಾರೆ.

ಕೇರಳಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಏರುಗತಿಯಲ್ಲೇ ಸಾಗಿದೆ. ಬುಧವಾರ 422 ಮಂದಿಗೆ ಸೋಂಕು ತಗುಲಿದ್ದು 5 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 377 ಮಂದಿಗೆ ಸೋಂಕು ಉಂಟಾಗಿದ್ದು 5 ಮಂದಿ ಬಲಿಯಾಗಿದ್ದಾರೆ. ಬುಧವಾರದ 1,826 ಪ್ರಕರಣಗಳ ಮೂಲಕ ದಿನದ ಸೋಂಕು ಪ್ರಮಾಣ ದರ ಮೂರು ದಿನಗಳ ನಂತರ ಮತ್ತೆ (ಆ.8ರಂದು ಶೇ.1.09) ಶೇ.1.09ಕ್ಕೆ ಏರಿಕೆಯಾಗಿದೆ.

ಗಡಿ ಭಾಗದಲ್ಲಿ ಸೋಂಕು ಹೆಚ್ಚಳ: 

ಗಡಿ ಜಿಲ್ಲೆಗಳಲ್ಲಿ ಮತ್ತೆ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ದಕ್ಷಿಣ ಕನ್ನಡದಲ್ಲಿ 422, ಉಡುಪಿಯಲ್ಲಿ 130, ಮೈಸೂರಿನಲ್ಲಿ 118 ಪ್ರಕರಣಗಳು ವರದಿಯಾಗಿವೆ. ಇದಲ್ಲದೆ ಬೆಂಗಳೂರು ನಗರದಲ್ಲಿ 377,  ಹಾಸನದಲ್ಲಿ 175 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ 14 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಎರಡಂಕಿಗೆ ಹಾಗೂ 9 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ. ಗದಗ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಶೂನ್ಯ ವರದಿಯಾಗಿದೆ.

ಕೊರೋನಾ: ದಕ್ಷಿಣ ಕನ್ನಡ ರಾಜ್ಯದಲ್ಲೇ ನಂ.1

ಒಟ್ಟು ಸೋಂಕಿತರ ಸಂಖ್ಯೆ 29.22 ಲಕ್ಷ ದಾಟಿದಂತಾಗಿದೆ. ಒಂದೇ ದಿನ 1,618 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 28.63 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,676ರಿಂದ 22,851 ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 5 ಮಂದಿ ಸೇರಿದಂತೆ ಸೋಂಕಿತರಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. 13 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದ್ದು, 17 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯ ಎಂದು ವರದಿಯಾಗಿದೆ. ಇದರಿಂದ ದಿನದ ಮರಣ ಪ್ರಮಾಣ ದರ ಶೇ.1.80 ತಲುಪಿದ್ದು, ಈವರೆಗೂ ಒಟ್ಟು 36,881 ಮಂದಿ ಸಾವನ್ನಪ್ಪಿದ್ದಾರೆ.
 

Follow Us:
Download App:
  • android
  • ios