Asianet Suvarna News Asianet Suvarna News

ಈ ಖತರ್ನಾಕ್ ಗ್ಯಾಂಗ್ ಫೀಲ್ಡಿಗಿಳಿದರೆ ಮನೆ, ಪಿಜಿ ಮುಂದೆ ಬಿಟ್ಟಿರೋ ಶೂ ಚಪ್ಪಲಿಗಳು ಮಾಯಾ!

ಶೂ ಕಳ್ಳರ ಗ್ಯಾಂಗ್ ಬಾಗಲುಗುಂಟೆಯಲ್ಲಿ ಸಕ್ರಿಯವಾಗಿದೆ. ಶೂ ಕಳ್ಳರ ಹಾವಳಿಯಿಂದ ಜನರು ಹೊರಗಡೆ ಶೂ ಚಪ್ಪಲಿ ಬಿಡಲು ಯೋಚಿಸುವಂತಾಗಿದೆ. ಅಕ್ಷರಶಃ ಈ ಕಳ್ಳರ ಹಾವಳಿಗೆ ಜನರು ಬೇಸತ್ತುಹೋಗಿದ್ದಾರೆ. ಕೈಯಲ್ಲಿ ಚೀಲ ಹಿಡಿದುಕೊಂಡು ಬರುವ ಈ ಗ್ಯಾಂಗ್ ಲೇಡಿಸ್ ಬಾಯ್ಸ್ ಪಿಜಿ ಎನ್ನದೇ ಹೊರಗೆ ಬಿಟ್ಟ ಬಣ್ಣ ಬಣ್ಣದ ಚಪ್ಪಲಿ ಶೂಗಳನ್ನು ದೋಚುವುದೇ ಇವರ ಕಾಯಕ!

Increase in shoe thieves in Bagalgunte at bengaluru rav
Author
First Published Sep 8, 2023, 1:37 PM IST

ಬೆಂಗಳೂರು: ಬೆಂಗಳೂರಲ್ಲಿ ಒಂಟಿಮನೆಗಳಿಗೆ ನುಗ್ಗಿ ಕಳ್ಳತನ ಮಾಡುವುದು, ದಾರಿಯಲ್ಲಿ ಹೋಗುವ ಮಹಿಳೆಯ ಕತ್ತಿನ ಸರ ಕಿತ್ತುಕೊಂಡು ಬೈಕ್‌ ಕ್ಷಣಾರ್ಧದಲ್ಲಿ ಪರಾರಿಯಾಗೋದು, ಬ್ಯಾಂಕ್‌ಗೆ ಎಟಿಎಂ ಗಳಿಗೆ ನುಗ್ಗಿ ಗರಿಗರಿ ನೋಟು ಎಗರಿಸುವ ಕಳ್ಳರನ್ನು ನೋಡಿರಬಹುದು ಅಲ್ಲಲ್ಲ, ಆ ಬಗ್ಗೆ ಸುದ್ದಿಗಳನ್ನು ಓದಿರಬಹುದು. ಆದರೆ ಬಾಗಲುಗುಂಟೆಯಲ್ಲಿರೋ ಇದ್ದಾರೆ ವಿಚಿತ್ರ ಕಳ್ಳರು. ಇವರು ಗರಿ ಗರಿ ನೋಟು, ಚಿನ್ನದ ಸರ ಕದಿಯೋದಿಲ್ಲ. ಇವರ ಟಾರ್ಗೆಟ್ ಮನೆ, ಪಿಜಿ, ದೇವಸ್ಥಾನದ ಮುಂದೆ ಬಿಟ್ಟಿರೋ ಶೂ, ಚಪ್ಪಲಿಗಳು!

ಹೇಳಿಕೇಳಿ ಈಗ ಶೂ, ಚಪ್ಪಲಿಗಳ ಬೆಲೆಯೂ ಗಗನಕ್ಕೇರಿದೆ ಒಂದು ಜೊತೆ ಶೂ ಸಾವಿರಾರು ರುಪಾಯಿ ಬೆಲೆಬಾಳುತ್ತೆ. ಶೂ, ಚಪ್ಪಲಿಯಲ್ಲಾ ಯಾವ ಕಳ್ಳ ತಾನೆ ಕದಿಯೋಕೆ ಸಾಧ್ಯ ಎಂದು ಹೊರಗೆ ಬಿಡ್ತಿದ್ದ ಜನರಿಗೆ ಶಾಕ್ ಕೊಟ್ಟಿರೋ ಕಳ್ಳರು. 

ಹಗಲೆಲ್ಲ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳಿಗೆ ನುಗ್ಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

ಹೌದು, ಇಂಥ ಶೂ ಕಳ್ಳರ ಗ್ಯಾಂಗ್ ಬಾಗಲುಗುಂಟೆಯಲ್ಲಿ ಸಕ್ರಿಯವಾಗಿದೆ. ಶೂ ಕಳ್ಳರ ಹಾವಳಿಯಿಂದ ಜನರು ಹೊರಗಡೆ ಶೂ ಚಪ್ಪಲಿ ಬಿಡಲು ಯೋಚಿಸುವಂತಾಗಿದೆ. ಅಕ್ಷರಶಃ ಈ ಕಳ್ಳರ ಹಾವಳಿಗೆ ಜನರು ಬೇಸತ್ತುಹೋಗಿದ್ದಾರೆ. ಕೈಯಲ್ಲಿ ಚೀಲ ಹಿಡಿದುಕೊಂಡು ಬರುವ ಈ ಗ್ಯಾಂಗ್ ಲೇಡಿಸ್ ಬಾಯ್ಸ್ ಪಿಜಿ ಎನ್ನದೇ ಹೊರಗೆ ಬಿಟ್ಟ ಬಣ್ಣ ಬಣ್ಣದ ಚಪ್ಪಲಿ ಶೂಗಳನ್ನು ದೋಚುವುದೇ ಇವರ ಕಾಯಕ!

ಬಾಗಲಗುಂಟೆಯಲ್ಲಿ ಉದ್ಯಮಿ ಲಕ್ಕಣ್ಣ, ನಾರಾಯಣ್ ಎಂಬುವವರ ಮನೆಯಲ್ಲಿ ಶೂ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಹೊತ್ತು ಕೈ ಚೀಲ ಹಿಡಿದು ಬಂದ ಇಬ್ಬರು ಖದೀಮರಿಂದ ಶೂ ಚಪ್ಪಲಿ ಕಳ್ಳತನ. ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯ ಲೇಕ್ ವ್ಯೂ ಬಡಾವಣೆಯಲ್ಲಿ ಕೈ ಚಳಕ ತೋರಿಸಿರುವ ಖದೀಮರು. ಒಂದಲ್ಲ ಎರಡಲ್ಲ, ಐದಾರು ಮನೆಗಳಲ್ಲಿ ಶೂ ಕಳ್ಳತನ ಮಾಡಿರೋ ಗ್ಯಾಂಗ್. ಇದೀಗ ಶೂ ಕಳ್ಳರ ಗ್ಯಾಂಗ ಪತ್ತೆ ಹಚ್ಚುವ ಕಾರ್ಯದಲ್ಲಿ ಬಾಗಲಗುಂಟೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕಳ್ಳರು ಎಲ್ಲೆಲ್ಲಿ, ಯಾರಾರ ಮನೆಮುಂದಿನ ಚಪ್ಪಲಿ ಶೂ ಕದ್ದಿದ್ದಾರೋ ಅವರೆಲ್ಲ ಮನೆಯ ಸಿಸಿಟಿವಿ ಜಾಲಾಡುತ್ತಿರುವ ಪೊಲೀಸರು. ಸದ್ಯ ಈ ಕಳ್ಳರು ಮನೆಗೆ ನುಗ್ಗಿ ಬಂಗಾರ ಬೆಳ್ಳಿ ದೋಚುತ್ತಿಲ್ಲವಲ್ಲ ಅಂತಾ ಸಮಾಧಾನ ಪಡಬೇಕಾಗಿದೆ. 

 

ಬೆಂಗಳೂರು: ಕೇಳಿದ ಬೈಕ್‌ ಕದ್ದು ಕೊಡ್ತಿದ್ದ ಗ್ಯಾಂಗ್‌ ಅಂದರ್‌..!

Follow Us:
Download App:
  • android
  • ios