ಹಗಲೆಲ್ಲ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳಿಗೆ ನುಗ್ಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!
ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಏಳು ಮಂದಿ ಖದೀಮರನ್ನು ಪ್ರತ್ಯೇಕವಾಗಿ ಜ್ಞಾನಭಾರತಿ, ಬಾಗಲಗುಂಟೆ ಹಾಗೂ ಸಂಜಯನಗರ ಠಾಣೆಗಳ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು (ಸೆ.7) : ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಏಳು ಮಂದಿ ಖದೀಮರನ್ನು ಪ್ರತ್ಯೇಕವಾಗಿ ಜ್ಞಾನಭಾರತಿ, ಬಾಗಲಗುಂಟೆ ಹಾಗೂ ಸಂಜಯನಗರ ಠಾಣೆಗಳ ಪೊಲೀಸರು ಸೆರೆ ಹಿಡಿದಿದ್ದಾರೆ.
ರಾತ್ರಿ ವೇಳೆ ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಜ್ಞಾನಭಾರತಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೋಹಿನುದ್ದೀನ್ ಹಾಗೂ ಮೊಹಮ್ಮದ್ ಅಶ್ವಕ್ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಜುನೈದ್ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ ಸುಮಾರು 230 ಗ್ರಾಂ ಚಿನ್ನಾಭರಣ, 72 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ .4 ಲಕ್ಷ ನಗದು ಒಟ್ಟು .18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಚಿಕ್ಕಬಸ್ತಿಯಲ್ಲಿ ಶಬರಿನ್ ತಾಜ್ ಎಂಬುವರ ಮನೆಗೆ ಆರೋಪಿಗಳು ಕನ್ನ ಹಾಕಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮರನ್ನು ಸೆರೆ ಹಿಡಿದಿದ್ದಾರೆ.
ಇಬ್ಬರು ಸಹೋದರಿಯರ ಮೇಲೆ ಗ್ಯಾಂಗ್ ರೇಪ್, ಬಿಜೆಪಿ ನಾಯಕನ ಪುತ್ರ ಸೇರಿ 10 ಮಂದಿ ಆರೆಸ್ಟ್!
ಆಟೋದಲ್ಲಿ ಸುತ್ತಾಡಿ ಕಳ್ಳತನ:
ವಸತಿ ಪ್ರದೇಶಗಳಲ್ಲಿ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಬಾಗಲಗುಂಟೆ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ರವಿ ಅಲಿಯಾಸ್ ರವಿ ಕುಮಾರ್, ಇಮ್ರಾನ್ ಹಾಗೂ ಜೈ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ .1.8 ಲಕ್ಷ ನಗದು ಹಾಗೂ .6.45 ಲಕ್ಷ ಮೌಲ್ಯದ 129 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಶೆಟ್ಟಿಹಳ್ಳಿಯ ಬೈರವೇಶ್ವರ ನಿವಾಸಿ ಶಾಂತಿಬಾಯಿ ಅವರು ದೇವರ ದರ್ಶನಕ್ಕೆ ಹೋಗಿದ್ದಾಗ ಆ.12ರಂದು ಮನೆಯ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡಿದ್ದರು. ಈ ಕೃತೃದಲ್ಲಿ ಖದೀಮರ ಬೆನ್ನುಹತ್ತಿದ್ದ ಪೊಲೀಸರು, ಸಿಸಿಟಿವಿ ನೀಡಿದ ಸುಳಿವಿನ ಮೇರೆಗೆ ಆರೋಪಿಗಳು ಗಾಳಕ್ಕೆ ಹಾಕಿದ್ದಾರೆ.
ಈ ಆರೋಪಿಗಳ ಪೈಕಿ ರವಿ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ರಾಮಮೂರ್ತಿ ನಗರ, ಬೈಯಪ್ಪನಹಳ್ಳಿ, ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತು ವಸತಿ ಪ್ರದೇಶಗಳಲ್ಲಿ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಳಿಕ ರಾತ್ರಿ ವೇಳೆ ನಿಗದಿತ ಮನೆಗಳಲ್ಲಿ ರವಿ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬಿಎಂಟಿಸಿ ಬಸ್ ಸಿಸಿಟಿವಿ ನೀಡಿದ ಕಳ್ಳನ ಸುಳಿವು
ಬಿಎಂಟಿಸಿ ಬಸ್(BMTC Bus)ಗಳ ಸಿಸಿಟಿವಿ(CCTV) ನೀಡಿದ ಸುಳಿವು ಆಧರಿಸಿ ಮನೆಗಳ್ಳನೊಬ್ಬನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮತ್ತಿಕೆರೆ ಮುತ್ಯಾಲನಗರದ ಸುಬ್ರಾತೋ ಮಂಡಲ್ ಬಂಧಿತನಾಗಿದ್ದು, ಆರೋಪಿಯಿಂದ .75 ಸಾವಿರ ನಗದು ಹಾಗೂ .10.5 ಲಕ್ಷ ಮೌಲ್ಯದ 211 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆ.27ರಂದು ಪಟೇಲಪ್ಪ ಲೇಔಟ್‌ನ ಮನೆಯಲ್ಲಿ ಮನೆಗಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನಾ ನಡೆದ ಸ್ಥಳದ ಸುತ್ತಮುತ್ತ ಕಟ್ಟಡದ ಹಾಗೂ ಆ ಮಾರ್ಗದ ಬಿಎಂಟಿಸಿ ಬಸ್‌ಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
10 ಲಕ್ಷ ಕೊಟ್ರೆ MSME ಕೌನ್ಸಿಲ್ ಚೇರ್ಮನ್ ಹುದ್ದೆ ! ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ಖತರ್ನಾಕ್ ಗ್ಯಾಂಗ್ !
ಪಶ್ಚಿಮ ಬಂಗಾಳ ಮೂಲದ ಮಂಡಲ್, ಕೆಲ ದಿನಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಆತ, ಜೋತಾಡುವ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ವಸತಿ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಡಲ್, ಜೋತಾಡುವ ಬೀಗ ಹಾಕಿದ ಮನೆಗಳಲ್ಲಿ ಹಾಕಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದ. ಕೆಲ ತಿಂಗಳ ಹಿಂದೆ ಇದೇ ರೀತಿ ಮನೆಗಳ್ಳತನನ್ನು ಆತನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಮಂಡಲ್, ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.