ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಬೆಂಗಳೂರು ಪ್ರೆಸ್‌ಕ್ಲಬ್‌ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಬ್ಯುಸಿನೆಸ್‌ ಐಕಾನ್‌ ಅವಾರ್ಡ್‌-2022’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು (ಆ.25) : ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಬೆಂಗಳೂರು ಪ್ರೆಸ್‌ಕ್ಲಬ್‌ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಬ್ಯುಸಿನೆಸ್‌ ಐಕಾನ್‌ ಅವಾರ್ಡ್‌-2022’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರಿಗೆ ನಿವೃತ್ತ ವೇತನ ನೀಡುವ ಸಂಬಂಧ ಶೀಘ್ರದಲ್ಲಿ ಸಮಿತಿ ರಚನೆ ಮಾಡಲಾಗುವುದು. ಜತೆಗೆ, ಪ್ರಸ್ತುತ ಇರುವ ಷರತ್ತುಗಳನ್ನು ಸಡಿಲಗೊಳಿಸಿ ನಿವೃತ್ತಿ ವೇತನದ ಮೊತ್ತವನ್ನು ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು: ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್‌ಗೆ ಕೆಯುಡಬ್ಲ್ಯೂಜೆ ಗೌರವ

ಪತ್ರಕರ್ತರು ಹಲವು ವಿಚಾರಗಳ ಕುರಿತು ಚರ್ಚೆ ನಡೆಸುತ್ತಾರೆ. ಸಾವಿರಾರು ಕೋಟಿ ರು.ಗಳ ಯೋಜನೆಗಳು, ಅವ್ಯವಹಾರಗಳ ಕುರಿತು ಸುದ್ದಿಗಳನ್ನು ಮಾಡುತ್ತಾರೆ. ಆದರೆ, ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ನಡೆಯುತ್ತಿರುತ್ತದೆ. ಪತ್ರಕರ್ತ ನಾಟಕದಲ್ಲಿ ಶ್ರೀಮಂತನ ಪಾತ್ರ ಮಾಡಿ ಬಣ್ಣ ತೆಗೆದು ಮನೆಗೆ ಹೋಗುವಂತೆ ಇರಲಿದೆ. ಆದ್ದರಿಂದ ಪತ್ರಕರ್ತರಿಗೆ ನಿವೃತ್ತಿ ಯೋಜನೆ ಜಾರಿ ಮಾಡುವುದಾಗಿ ವಿವರಿಸಿದರು.

ರಾಜಕೀಯ ಸುದ್ದಿಗಳಿಲ್ಲದೆ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ರಾಜಕಾರಣಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಅವಿನಾಭಾವ ಸಂಬಂಧವಿರಲಿದೆ. ಪತ್ರಕರ್ತರು ನಾಡು ಮತ್ತು ದೇಶಕ್ಕೆ ಸೇವೆ ಮಾಡುತ್ತಿದ್ದೇವೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು. ಕೈಗಾರಿಕಾ ಸಚಿವ ಮುರಗೇಶ್‌ ನಿರಾಣಿ ಮಾತನಾಡಿ, ಸದಾ ಒತ್ತಡದಲ್ಲಿರುವ ಪತ್ರಕರ್ತರು ಬಿಸಿನೆಸ್‌ ಅವಾರ್ಡ್‌ ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಚಿವ ಕೆ.ಗೋಪಾಲಯ್ಯ, ಚಿತ್ರ ನಟಿ ರಮ್ಯಾ, ಪ್ರೆಸ್‌ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಉಪಸ್ಥಿತರಿದ್ದರು.

ಮಾಧ್ಯಮಗಳನ್ನು ಜನರೂ ವಿಶ್ಲೇಷಿಸ್ತಾರೆ: ಸಿಎಂ ಬೊಮ್ಮಾಯಿ

ಪ್ರಶಸ್ತಿ ಪುರಸ್ಕೃತರು: ಹೆಲ್ಪಿಂಗ್‌ ಹಾಟ್ಸ್‌ರ್‍ ಎನ್‌ಜಿಒದ ಅದಿತಿ, ಏರ್‌ವೇಸ್‌ ಕೋರಿಯರ್‌ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಪೂಜಾರಿ, ನೋನಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜಯಂತಿ, ವೇದಂ ಆಯುರ್ವೇದ ಕಂಪನಿಯ ಡಾ ರವಿರಾಜ್‌, ಆಯುರ್‌ ಕೇಶ್‌ ಹೇರ್‌ ಆಯಿಲ್‌ನ ಸಂತೋಷ್‌ ಗುರೂಜಿ ಸೇರಿದಂತೆ 19 ಸಾಧಕರಿಗೆ ಪ್ರೆಸ್‌ ಕ್ಲಬ್‌ ಬುಸಿನೆಸ್‌ ಐಕಾನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.