Asianet Suvarna News Asianet Suvarna News

ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ, ಬೆಂಗ್ಳೂರಲ್ಲೇ ಹೆಚ್ಚು..!

14ನೇ ವಯಸ್ಸಿನಿಂದ 19ನೇ ವಯಸ್ಸಿನವರೆಗೆ 39 ಸಾವಿರಕ್ಕೂ ಹೆಚ್ಚು ಬಾಲ ಗರ್ಭಿಣಿಯರಿದ್ದಾರೆ. ಬಾಲ್ಯ ವಿವಾಹ ಮತ್ತು ಪ್ರೇಮವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ.

Increase in Child Pregnant Women Cases in Karnataka grg
Author
First Published Jun 27, 2024, 10:46 AM IST

ಮಂಡ್ಯ ಮಂಜುನಾಥ 

ಮಂಡ್ಯ(ಜೂ.27): ಬಾಲ್ಯ ವಿವಾಹ ತಡೆಗೆ ಏನೆಲ್ಲಾ ಜಾಗೃತಿ ಮೂಡಿ ಸಲಾಗುತ್ತಿದ್ದರೂ ರಾಜ್ಯದಲ್ಲಿ ಬಾಲ ಗರ್ಭಿಣಿ ಯರ ಸಂಖ್ಯೆ ಹೆಚ್ಚುತ್ತಲೇ ಇದೆ. 14ನೇ ವಯಸ್ಸಿನಿಂದ 19ನೇ ವಯಸ್ಸಿನವರೆಗೆ 39 ಸಾವಿರಕ್ಕೂ ಹೆಚ್ಚು ಬಾಲ ಗರ್ಭಿಣಿಯರಿದ್ದಾರೆ. ಬಾಲ್ಯ ವಿವಾಹ ಮತ್ತು ಪ್ರೇಮವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ. ರಾಜ್ಯದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಬಾಲಗರ್ಭಿಣಿಯರು ಇದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಗಳು ತಿಳಿಸಿವೆ.

Increase in Child Pregnant Women Cases in Karnataka grg

ಆಯೋಗದ ಅಂಕಿ ಅಂಶಗಳ ಪ್ರಕಾರ 2021 -22ನೇ ಸಾಲಿನಲ್ಲಿ 14-15 ವರ್ಷದವರೆಗೆ 147, 15-16 ವರ್ಷದವರೆಗೆ 509, 16-17 ವರ್ಷದವರೆಗೆ 1,413, 17-18 2 9723, 18-19 33,487 ಸೇರಿ 45,279 ಬಾಲಗರ್ಭಿಣಿ ಯರಿದ್ದರು. 2022- 23ನೇ ಸಾಲಿನಲ್ಲಿ 14-15 ವರ್ಷದವರೆಗೆ 217, 15-16 ವರ್ಷದವರೆಗೆ 686, 16-17 ವರ್ಷ ದವರೆಗೆ 1,881, 17-18 10, 414, 18-19 ವರ್ಷದವರೆಗೆ 36,093 49,291 ಬಾಲಗರ್ಭಿಣಿಯರಿದ್ದರೆ, 2023- 24ನೇ ಸಾಲಿನಲ್ಲಿ 14-15 ವರ್ಷದವರೆಗೆ 156, 15-16 ವರ್ಷದವರೆಗೆ 419, 16-17 1,397, 17-18 ವರ್ಷದವರೆಗೆ 6659, 18-10 ವರ್ಷದವರೆಗೆ 30,761 ಸೇರಿ 39,392 ಬಾಲಗರ್ಭಿಣಿಯರಿದ್ದಾರೆ.

2 ವರ್ಷದಲ್ಲಿ 42 ಬಾಲ್ಯ ವಿವಾಹ, 259 ಪೋಕ್ಸೋ ಪ್ರಕರಣ

ಬೆಂಗಳೂರು ಪ್ರಥಮ: 

ಬಾಲ ಗರ್ಭಿಣಿಯರಿ ರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2021-22 6455, 2022-23 6702, 2023-24 4,506 ಗರ್ಭಿಣಿಯರನ್ನು ಹೊಂದಿದ್ದರೆ, ಬೆಳಗಾವಿ 2021 - 22ರಲ್ಲಿ 4,066, 2022-2350 4258, 2023-2400 3974 ಬಾಲ ಗರ್ಭಿಣಿಯರನ್ನು ಹೊಂದಿದೆ. ಮಂಡ್ಯ ಜಿಲ್ಲೆಯಲ್ಲಿ 2021-22 0 1521,2022-2350 1390, 2023- 24ರಲ್ಲಿ 1,010 ಬಾಲ ಗರ್ಭಿಣಿಯರನ್ನು ಹೊಂದಿದೆ.

ಬೆಳಗಾವಿ: ಬಾಲ್ಯ ವಿವಾಹ ವಿರೋಧಿಸಿದ ಪತ್ನಿಯ ಕೈಕಾಲು ಮುರಿದ ಕಿರಾತಕ..!

ಪ್ರೇಮ ಪ್ರಕರಣಗಳೂ ಕಾರಣ: 

ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬಾಲ್ಯ ವಿವಾಹ ಒಂದು ಕಾರಣವಾದರೆ, ಹದಿಹರೆಯ ದರಲ್ಲೇ ಪ್ರೇಮಪಾಶಕ್ಕೆ ಸಿಲುಕುತ್ತಿರುವ ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೊಳಗಾಗುತ್ತಿರು ವುದು ಪ್ರಾಪ್ತ ವಯಸ್ಸಿಗೆ ಮುನ್ನವೇ ಗರ್ಭ ಧರಿಸುವುದಕ್ಕೆ ಮತ್ತೊಂದು ಕಾರಣ ಎನ್ನುವುದು ಸಮೀಕ್ಷೆಗಳಿಂದ ತಿಳಿದು ಬಂದಿರುವ ಸಂಗತಿಯಾಗಿದೆ. 

ಬಾಲ ಗರ್ಭಿಣಿಯರ ಸಂಖ್ಯೆ ತೀವ್ರಗತಿಯಲ್ಲಿ ಎರುತ್ತಿದೆ. ವಿಶೇಷ ಮಕ್ಕಳ ಪೊಲೀಸ್ ಘಟಕ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪರಸ್ಪರ ಕುಳಿತು ಚರ್ಚಿಸಿ ಬಾಲಗರ್ಭಿನೆಯರ ತಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಪ್ರಕರಣಗಳು ಪತ್ತೆಯಾದಾಗ ಹೆಣ್ಣು ಆಪ್ತ ಸಮಾಲೋಚನೆ ನಡೆಸಿ ಧೈರ್ಯ. ಆತ್ಮವಿಶ್ವಾಸ, ಕಾನೂನಾತ್ಮಕ ಅರಿವು ಮೂಡಿಸಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios