ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮಂಗಳವಾರ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಹಾರಂಗಿ ಜಲಾಶಯ ವೀಕ್ಷÜಣೆಗೂ ಮೊದಲು ಪ್ರವಾಹ ಪೀಡಿತ ಕುಶಾಲನಗರದ ಸಾಯಿ ಮತ್ತು ಕುವೆಂಪು ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಸಂತ್ರಸ್ಥರ ಜೊತೆ ಮಾತುಕತೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮಡಿಕೇರಿ (ಜು.25): ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮಂಗಳವಾರ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಹಾರಂಗಿ ಜಲಾಶಯ ವೀಕ್ಷÜಣೆಗೂ ಮೊದಲು ಪ್ರವಾಹ ಪೀಡಿತ ಕುಶಾಲನಗರದ ಸಾಯಿ ಮತ್ತು ಕುವೆಂಪು ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಸಂತ್ರಸ್ಥರ ಜೊತೆ ಮಾತುಕತೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಾರಂಗಿ ಜಲಾಶಯ ಹಾಗೂ ಕಾವೇರಿ ನದಿ ತಟದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿ ತಟದಲ್ಲಿ ತಡೆಗೋಡೆ ನಿರ್ಮಾಣವಾಗಬೇಕು ಅಂತ ಸ್ಥಳಿಯರು ಹೇಳಿದ್ದಾರೆ. ಮತ್ತೆ ಕೆಲವರು ನದಿಯ ಹೂಳು, ಮರಳು ತೆಗೆಯಬೇಕು ಅಂತಿದ್ದಾರೆ. ಬತ್ತ, ಕಾಫಿ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ಕೂಡ ಪ್ರವಾಹದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲರ ಅಭಿಪ್ರಾಯ, ಮಾಹಿತಿ ಸಂಗ್ರಹಿಸಿ ಸಿಎಂ ಜೊತೆ ಚರ್ಚೆ ನಡೆಸಲಾಗುತ್ತದೆ.

ಎಚ್‌ಎನ್‌ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು

ಪ್ರಾಕೃತಿಕ ವಿಕೋಪ ಸಮಿತಿ ಪ್ರಾಕೃತಿಕ ವಿಕೋಪ, ಕಾರಣ, ಪರಿಹಾರ ಬಗ್ಗೆ ವರದಿ ತಯಾರಿಸುತ್ತಿದೆ. ಸಮಿತಿ ವರದಿ ಆಧರಿಸಿ ಕೊಡಗಿಗೆ ವಿಶೇಷ ಪ್ಯಾಕೇಜ್‌ ಬಗ್ಗೆ ನಿರ್ಧಾರ ನಾಳೆ ಸಿಎಂ ಅವರು ಡಿಸಿ ಸಿಇಓ ಹಾಗೂ ಉಸ್ತುವಾರಿಗಳ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೊಡಗಿನ ಬಗ್ಗೆ ಧ್ವನಿ ಎತ್ತಿ ಜಿಲ್ಲೆಯ ಪ್ರಾಕೃತಿಕ ವಿಕೋಪದ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಐಸಿಸಿ ಸಭೆ ನಡೆಸಿ ಡಿಸಿ, ಶಾಸಕರು, ಸಿಇಓ ಸೂಕ್ತ ಕ್ರಮಕ್ಕೆ ಯೋಜನೆ ರೂಪಿಸುತ್ತೇವೆ ಎಂದರು.

ಈ ಸಂದರ್ಭ ಶಾಸಕ ಡಾ.ಮಂತರ್‌ ಗೌಡ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಮತ್ತಿತರರು ಇದ್ದರು.

ಆಪರೇಶನ್‌ ಸಕ್ಸಸ್‌ ಆಗಲ್ಲ : ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು

ಮಡಿಕೇರಿ : ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹತಾಶರಾಗಿ ಕಾಂಗ್ರೆಸ್‌ ವಿರುದ್ಧ ಬೇಕಾಬಿಟ್ಟಿಹೇಳಿಕೆ ನೀಡುವ ಪ್ರಯತ್ನ ನಡೆದಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌ ಭೋಸರಾಜು ಹೇಳಿದ್ದಾರೆ.

ಸಿಂಗಾಪುರದಲ್ಲಿ ಕುಳಿತು ಸರ್ಕಾರ ಬೀಳಿಸುವ ಯತ್ನ ನಡೆದಿದೆ ಎಂಬ ಹೇಳಿಕೆ ವಿಚಾರಕ್ಕೆ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ಮೆಜಾರಿಟಿ ಓಟ್‌ ಇದೇ ಮೊದಲು. ವೋಟ್‌ ಶೇರಿಂಗ್‌ ಕೂಡ ಕಾಂಗ್ರೆಸ್ನದ್ದು ಹೆಚ್ಚಿದೆ. ಹೀಗಾಗಿ ಯಾರೂ ಆಪರೇಷನ್‌ಗೆ ಕೈ ಹಾಕಲ್ಲ. ಮಾಡಲು ಸಾಧ್ಯವೇ ಇಲ್ಲ, ಹತಾಶರಾಗಿರುವವರು ಇಂತಹ ಪ್ರಯತ್ನ ಮಾಡುತ್ತಾರೆ. ಆದರೆ ಆ ಪ್ರಯತ್ನ ಸಕ್ಸಸ್‌ ಆಗಲು ಸಾಧ್ಯವೇ ಇಲ್ಲ ಅಂತ ನನಗೆ ಅನ್ನಿಸುತ್ತಿದೆ. ನಾನು 53 ವರ್ಷದಿಂದ ದೇವರಾಜು ಅರಸು ಕಾಲದಿಂದ ರಾಜಕೀಯ ನೋಡ್ತಿದ್ದೇನೆ. ಏನಾದರೂ ಲಭ್ಯ ಮಾಡಿಕೊಳ್ಳಲು ಹೀಗೆ ಹೇಳ್ತಾರೆ ಅಷ್ಟೇ ಎಂದರು.

ಕಲ್ಯಾಣದ ಅಭಿವೃದ್ಧಿಗೆ ಎಲ್ಲ ಶಾಸಕರು ಶ್ರಮಿಸಿ: ಸಚಿವ ಎನ್‌ಎಸ್ ಬೋಸರಾಜು

ಸರ್ಕಾರದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಸರಿಯಾಗಿದೆ. ಸಿಂಗಾಪುರದಲ್ಲಿ ಸಭೆ ನಡೆಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಉರುಳಿಸಲು ನಡೆದಿರುವ ಸಭೆಯ ಬಗ್ಗೆ ನನಗೆ ಮಾಹಿತಿಯಿಲ್ಲ. ಕಾಂಗ್ರೆಸ್‌ ಶಾಸಕರು, ಸಚಿವರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಗುರುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಇದೇ ಸಂದರ್ಭ ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಹೇಳಿದ್ದಾರೆ.