ಎಚ್‌ಡಿ ಕುಮಾರಸ್ವಾಮಿ ನಾಳೆ ಮಹತ್ವದ ಸುದ್ದಿಗೋಷ್ಠಿ, ಬಯಲು ಮಾಡ್ತಾರಾ ಇಂಧನ ಇಲಾಖೆ ಕರ್ಮಕಾಂಡ?

ಇಂಧನ ಇಲಾಖೆ ವಿಚಾರವಾಗಿ ನಾಳೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾಳೆ ಸುದ್ದಿಗೋಷ್ಠಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅಂಕಿ-ಅಂಶಗಳ ಸಮೇತ ದಾಖಲೆ ನೀಡಲಿರುವ ಎಚ್‌ಡಿ ಕುಮಾರಸ್ವಾಮಿ.

Important press conference today by HD Kumaraswamy at jp bhavana bengaluru rav

ಬೆಂಗಳೂರು (ಅ.20): ಇಂಧನ ಇಲಾಖೆ ವಿಚಾರವಾಗಿ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ನಾಳೆಗೆ ಮುಂದೂಡಿದ್ದಾರೆ.  ನಾಳೆ ಮಧ್ಯಾಹ್ನ 12.30ರ ಹೊತ್ತಿಗೆ ಜೆಪಿ ಭವನದಲ್ಲಿ ನಡೆಯಲಿರುವ ಮಹತ್ವದ ಸುದ್ದಿಗೋಷ್ಠಿ. ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅಂಕಿ-ಅಂಶಗಳ ಸಮೇತ ದಾಖಲೆ ನೀಡಲಿರುವ ಎಚ್‌ಡಿ ಕುಮಾರಸ್ವಾಮಿ. ಲೋಡ್ ಶೆಡ್ಡಿಂಗ್, ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ, ಮತ್ತಿರ ವಿಚಾರಗಳ ಬಗ್ಗೆಯೂ ಮಾತನಾಡಲಿರುವ ಎಚ್‌ಡಿ ಕುಮಾರಸ್ವಾಮಿ.

ಡಿಕೆಶಿ ಜೈಲಿಗೆ ಹೋಗ್ತಾರೆ ಅಂದಿದ್ದಕ್ಕೂ, ಹೈಕೋರ್ಟ್ ಆದೇಶಕ್ಕೂ ನಂಟಿಲ್ಲ: ಎಚ್‌ಡಿಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ಕೊಟ್ಟಿರುವುದಕ್ಕೂ, ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ನನ್ನ ಹೇಳಿಕೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಅಂಬೇಡ್ಕರ್ ಜನ್ಮದಿನದ ಸಂಖ್ಯೆ ಹೊಂದಿರುವ ವಾಹನ ಪಡೆದ ಸಚಿವ ಸತೀಶ್ ಜಾರಕಿಹೊಳಿ!

ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದೆ. ರಾಮನಗರದಿಂದ ಗಂಟೂ ಮೂಟೆ ಕಟ್ಟಿ ಹಾಸನಕ್ಕೆ ಕಳುಹಿಸುತ್ತೇವೆ ಎಂದು ಡಿ.ಕೆ. ಸಹೋದರರು ಹೇಳುತ್ತಿದ್ದರು. ಇದಕ್ಕೆ ನಮ್ಮ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನಾನು ಮಾತನಾಡಿ, ಸಂತೋಷವಾಗಿ ನಾನು ಹಾಸನಕ್ಕೆ ಹೋಗಬಹುದು. ಅವರು ಎಲ್ಲಿಗೆ ಹೋಗಬಹುದು ಎಂದು ಕೇಳಿದ್ದೆ. ಆದರೆ, ನನ್ನ ಹೇಳಿಕೆಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧ ಇಲ್ಲ. ಸಿಬಿಐ ನೀಡಿದ ಮಾಹಿತಿ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ. ಮೂರು ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಸಿಬಿಐಗೆ ಗಡುವು ನೀಡಲಾಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios