ಅಂಬೇಡ್ಕರ್ ಜನ್ಮದಿನದ ಸಂಖ್ಯೆ ಹೊಂದಿರುವ ವಾಹನ ಪಡೆದ ಸಚಿವ ಸತೀಶ್ ಜಾರಕಿಹೊಳಿ!
ಅಭಿವೃದ್ಧಿ ವಿಚಾರಕ್ಕೆ ಅನುದಾನದ ಕೊರತೆ ಎಂದು ಹೇಳುವ ಸರ್ಕಾರದಿಂದಲೇ ಕಾರು ಖರೀದಿಗೆ ಕೋಟಿ ಕೋಟಿ ಹಣ ಖರ್ಚು. ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ನೂತನ ಶಾಸಕ, ಸಚಿವರಿಗೆ ಹೊಸ ಕಾರು ಭಾಗ್ಯ ನೀಡಿದ ರಾಜ್ಯಸರ್ಕಾರ.
ಬೆಂಗಳೂರು (ಅ.20): ಕಾಂಗ್ರೆಸ್ ಸರ್ಕಾರ ತನ್ನ ಎಲ್ಲ ಸಚಿವರಿಗೆ ಹೊಸ ಇನ್ನೋವಾ ಕಾರು ಖರೀದಿಸುವ ಮೂಲಕ 'ಕಾರು ಭಾಗ್ಯ' ನೀಡಿದೆ. ಅಭಿವೃದ್ಧಿ ವಿಚಾರಕ್ಕೆ ಅನುದಾನದ ಕೊರತೆ ಎಂದು ಹೇಳುವ ಸರ್ಕಾರದಿಂದಲೇ ಕಾರು ಖರೀದಿಗೆ ಕೋಟಿ ಕೋಟಿ ಹಣ ಖರ್ಚು. ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ನೂತನ ಶಾಸಕ, ಸಚಿವರಿಗೆ ಹೊಸ ಕಾರು ಭಾಗ್ಯ ನೀಡಿದ ರಾಜ್ಯಸರ್ಕಾರ.
ಎಲ್ಲ ಸಚಿವರ ನೂತನ ವಾಹನಗಳಿಗೆ 9ರ ನಂಟು ಇದೆ. ಸಂಖ್ಯಾಶಾಸ್ತ್ರದ ಪ್ರಕಾರ 9 ನಂಬರ್ ಆದೃಷ್ಟ ಸಂಖ್ಯೆ ಎಂದು 9 ಇರುವ ಸಂಖ್ಯೆ ಹೊಂದಿರುವ ವಾಹನ ಪಡೆದಿರುವ ಬಹುತೇಕ ಸಚಿವರು. ಆದರೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಡಿಫ್ರೆಂಟ್. ತಮಗೆ ನೀಡಿರುವ ವಾಹನಕ್ಕೆ ಅಂಬೇಡ್ಕರ್ ಜನ್ಮ ದಿನವನ್ನೇ ವಾಹನದ ಸಂಖ್ಯೆಯಾಗಿ ಹಾಕಿಸಿಕೊಂಡಿರುವ ಸತೀಶ್ ಜಾರಕಿಹೊಳಿ.
ದೇಶದಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣ ಇದೆ: ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ಮಹಮ್ಮದ್ ಅಜರುದ್ದೀನ್
ಸತೀಶ್ ಜಾರಕಿಹೊಳಿ ಇನ್ನೋವಾ ವಾಹನದ ಸಂಖ್ಯೆ KA 01 GB 1404 ಅಂದರೆ 14 ಎಪ್ರಿಲ್ ತಿಂಗಳಲ್ಲಿ ಅಂಬೇಡ್ಕರ್ ಜನ್ಮ ದಿನ. ಹಾಗಾಗಿ ಅದೇ ನಂಬರ್ ಬೇಕು ಎಂದು ಕೇಳಿ ಪಡೆದಿರುವ ಸಚಿವ ಸತೀಶ್ ಜಾರಕಿಹೊಳಿ. ಈ ಬಗ್ಗೆ ಡಿಪಿಆರ್ ಗೆ ಪತ್ರ ಬರೆದು ವಾಹನದ ಸಂಖ್ಯೆಯನ್ನ ಪಡೆದಿದ್ದಾರೆ.
ಭೀಕರ ಬರಗಾಲದಲ್ಲೂ ಸರ್ಕಾರ ಹೊಸ ಕಾರು ಖರೀದಿ ಬೇಕಿತ್ತಾ?
ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆ ಕೊರತೆಯಿಂದ ಅನ್ನದಾತರು ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ಬದುಕು ದುಸ್ತರವಾಗಿದೆ. ಜಮೀನುಗಳಲ್ಲಿ ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಬಿಂದಿಗೆಯಲ್ಲಿ ನೀರು ಹೊತ್ತುತಂದು ಸಸಿಗಳಿಗೆ ನೀರುಣಿಸಿ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಸಚಿವರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇನ್ನೋವಾ ಹೈಬ್ರಿಡ್ ಖರೀದಿ ಮಾಡಿದೆ.
ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಅಂತಾ ಹೇಳುವ ಸರ್ಕಾರದಿಂದಲೇ ಕಾರು ಖರೀದಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಹೈಬ್ರೀಡ್ ಕಾರ್ ಖರೀದಿಸಿರುವ ಸರ್ಕಾರ. ಅಗಸ್ಟ್ ತಿಂಗಳ 17 ರಂದೇ 33 ಇನ್ನೋವಾ ಕಾರು ಖರೀದಿಗಾಗಿ ಹಣ ಬಿಡುಗಡೆಯಾಗಿತ್ತು.
ನನ್ನ ಸೈಲೆಂಟ್ ನನ್ನ ದೌರ್ಬಲ್ಯವಲ್ಲ: ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡದ ಸಚಿವ ಜಾರಕಿಹೊಳಿ
ಬರಗಾಲ ಇದ್ದರೂ ಸಚಿವರ ಕಾರುಬಾರಿಗೇನು ಕೊರತೆಯಿಲ್ಲ:
ರಾಜ್ಯದಲ್ಲಿ ತೀವ್ರ ಬರಗಾಲ ಇದೆ ಮೈಸೂರು ದಸರಾ ಸರಳ ಆಚರಣೆ, ಹಂಪಿ ಉತ್ಸವ ಸರಳ ಎಲ್ಲವೂ ಸರಳ ಅನ್ನುತ್ತಿರುವ ಸರ್ಕಾರ. ಆದರೆ ಅದೇ ಬರಗಾಲ ಇದ್ದರೂ, ಸಚಿವರ ಕಾರುಬಾರಿಗೇನು ಕೊರತೆಯಾಗಿಲ್ಲ. ದಸರಾ ಆರಂಭವಾಗ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಬಂದು ನಿಂತಿರುವ ಕಾರುಗಳು. ಪೂಜೆ ಪುನಸ್ಕಾರದ ಬಳಿಕ ಹೊಸ ಕಾರಿನಲ್ಲಿ ಓಡಾಟ ಶುರು ಮಾಡಿದ್ದಾರೆ.
ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮುಂದುವರಿದಿರುವ ಸಚಿವರ ಕಾರುಗಳ ಪರೇಡು. ಅಭಿವೃದ್ಧಿ ವಿಚಾರಕ್ಕೆ ಅನುದಾನದ ಕೊರತೆ ಅನ್ನೋ ಸರ್ಕಾರದಿಂದಲೇ ಕಾರು ಖರೀದಿಗೆ ಕೋಟಿ ಕೋಟಿ ಹಣ ವಿಪರ್ಯಾಸ.