Asianet Suvarna News Asianet Suvarna News

ಮುಸ್ಲಿಮರು ಬೀದಿಗಿಳಿದರೆ ಸಿಎಎ(ಪೌರತ್ವಕಾಯ್ದೆ) ಅನುಷ್ಠಾನ ಕಷ್ಟ: ಅಮ್ನೆಸ್ಟಿ!

ಮುಸ್ಲಿಮರು ಎಲ್ಲ ನಗರಗಳಲ್ಲಿ ಬೀದಿಗಿಳಿದರೆ ಪೌರತ್ವ ಕಾಯ್ದೆ 2019 (ಸಿಎಎ) ಅನ್ನು ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಮಂಡಳಿಯ ಮುಖ್ಯಸ್ಥ ಆಕಾರ್ ಪಟೇಲ್ ಹೇಳಿದ್ದಾರೆ.

Implementation of CAA (Citizenship Act) will be difficult if Muslims come to streets says akar patel Amnesty rav
Author
First Published Dec 9, 2023, 4:58 AM IST

ಬೆಂಗಳೂರು (ಡಿ.9):  ಮುಸ್ಲಿಮರು ಎಲ್ಲ ನಗರಗಳಲ್ಲಿ ಬೀದಿಗಿಳಿದರೆ ಪೌರತ್ವ ಕಾಯ್ದೆ 2019 (ಸಿಎಎ) ಅನ್ನು ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಮಂಡಳಿಯ ಮುಖ್ಯಸ್ಥ ಆಕಾರ್ ಪಟೇಲ್ ಹೇಳಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ, ಸಮಾಜ ಕಾರ್ಯ, ಇತಿಹಾಸ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಗಳು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮಕಾಲೀನ ಭಾರತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಬಗ್ಗೆ ಆಕಾರ್ ಪಟೇಲ್ ಉಪನ್ಯಾಸ ನೀಡಿದರು.

ಸಿಎಎ ದೇಶದ ಕಾನೂನು, ಇದರ ಜಾರಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್‌ ಶಾ

2019ರಲ್ಲೇ ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಪಾಸ್ ಆಗಿದೆ. ಆದರೆ, ಅದರ ವಿರುದ್ಧ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಕಾರಣ ನಾಲ್ಕು ವರ್ಷಗಳು ಕಳೆದರೂ ವರ್ತಮಾನದಲ್ಲಿ ಏನೂ ಮಾಡಲಾಗಿಲ್ಲ. ಮುಸ್ಲಿಮರು ಎಲ್ಲ ನಗರಗಳಲ್ಲಿ ಬೀದಿಗೆ ಇಳಿದರೆ ಸಿಎಎ ಅನುಷ್ಠಾನ ಅಸಾಧ್ಯ. ಅವರೆಲ್ಲ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನ ಬೀದಿಗೆ ಇಳಿದರೆ ದೊಡ್ಡ ಬದಲಾವಣೆ ಆಗುತ್ತದೆ. ಗಾಂಧಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಬೀದಿಯಲ್ಲಿ ಸೇರಿಸಿದಾಗ ಸ್ವಾತಂತ್ರ್ಯ ಸಿಕ್ಕಿತು. ಪಂಜಾಬ್ ಮತ್ತು ಹರಿಯಾಣದ ರೈತರು ಯಾವುದೇ ಅನುಮತಿ ಇಲ್ಲದೇ ದಿಲ್ಲಿಯ ಹೊರಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದಾಗ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರು ಎಂದು ಅವರು ಹೇಳಿದರು.

ಯುರೋಪ್, ಉತ್ತರ ಅಮೆರಿಕ ಸೇರಿದಂತೆ ಅನೇಕ ಪ್ರಜಾಪ್ರಭುತ್ವ ದೇಶಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಯಾರೇ ಆಗಲಿ ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಬಹುದು. ಆದರೆ, ಭಾರತದಲ್ಲಿ ಹಾಗೇ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಬೇಕೆಂದರೆ ಸ್ಥಳೀಯ ಠಾಣೆಗೆ ತೆರಳಿ ಲಿಖಿತ ರೂಪದಲ್ಲಿ ಪತ್ರ ಬರೆದು ಅನುಮತಿ ಪಡೆಯಬೇಕು. ಮಾಡಬೇಕೋ ಅಥವಾ ಇಲ್ಲವೋ ಎನ್ನುವುದನ್ನು ಪೊಲೀಸರು ನಿರ್ಧರಿಸುತ್ತಾರೆ. ಆ ಹಕ್ಕು ಅವರಿಗೆ ಇದೆ. ಬಹುತೇಕ ಸಂದರ್ಭದಲ್ಲಿ ಅನುಮತಿ ಕೊಡುವುದಿಲ್ಲ ಎಂದು ಪಟೇಲ್ ಹೇಳಿದರು.

ಬೀದರ್‌ನ ಶಾಹೀನ್‌ ಶಾಲೆ ವಿರು​ದ್ಧದ ದೇಶ​ದ್ರೋಹ ಕೇಸು ಹೈಕೋರ್ಟಲ್ಲಿ ರದ್ದು

ಉಗಾಂಡ ದೇಶದಲ್ಲಿ ಸರ್ವಾಧಿಕಾರಿ ಇದಿ ಅಮಿನ್ ಎಂಬಾತ ಇದ್ದ. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ, ಅಭಿವ್ಯಕ್ತಪಡಿಸಿದ ಬಳಿಕ ಸ್ವಾತಂತ್ರ್ಯವನ್ನು ಗ್ಯಾರಂಟಿ ನೀಡುವುದಿಲ್ಲ ಎನ್ನುತ್ತಿದ್ದ. ಅಲ್ಲಿಗಿಂತ ನಮ್ಮ ದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಮನಸ್ಸಿನ ಮಾತುಗಳನ್ನು ಆಡಲು ಜನ ಹೆದರುತ್ತಾರೆ. ನಾಳೆ ನಮ್ಮ ಮೇಲೆ, ನಮ್ಮ ಕುಟುಂಬಕ್ಕೆ ಏನಾಗುವುದೋ ಎಂಬ ಭಯ ಕಾಡುತ್ತದೆ. ದೇಶದ್ರೋಹ ಕೇಸ್, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಜಾರಿಯಲ್ಲಿ ಇಲ್ಲ. ಆದರೆ, ಬ್ರಿಟಿಷರು ಬರೆದ ಆ ಕಾನೂನುಗಳು ಇಂದಿಗೂ ನಮ್ಮ ದೇಶದಲ್ಲಿವೆ ಎಂದು ಆಕಾರ್ ಪಟೇಲ್ ನುಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಉಪಸ್ಥಿತರಿದ್ದರು.

Follow Us:
Download App:
  • android
  • ios