Asianet Suvarna News Asianet Suvarna News

Rain In Karnataka ಕರ್ನಾಟಕದಲ್ಲಿ 2 ದಿನ ಮಳೆ, ಹೊಸ ವರ್ಷದ ಮೊದಲ ದಿನವೇ ವರ್ಷಧಾರೆ

* ಕರ್ನಾಟಕದಲ್ಲಿ 2 ದಿನ ಮಳೆ ಮುನ್ಸೂಚನೆ
* ಹೊಸ ವರ್ಷದ ಮೊದಲ ದಿನವೇ ವರ್ಷಧಾರೆ
* ಹವಾಮಾನ ಇಲಾಖೆ ಮುನ್ಸೂಚನೆ

imd predicts  rainfall In Karnataka On Jan 1 and 2nd rbj
Author
Bengaluru, First Published Dec 31, 2021, 8:37 PM IST

ಬೆಂಗಳೂರು, (ಡಿ.31): 2021 ಕೊನೆಯಾಗಲು ಕ್ಷಣಗಣನೆ ಆರಂಭವಾಗಿದ್ದು, 2022 ಹೊಸ ವರ್ಷ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ, ಹೊಸ ವರ್ಷದ(New Year) ಮೊದಲ ದಿನವೇ ವರ್ಷಧಾರೆ ಮುನ್ಸಚೂನೆ ಸಿಕ್ಕಿದೆ.

ಹೌದು...ರಾಜ್ಯದ ಹಲವೆಡೆ ಜ.1 ಮತ್ತು 2ರಂದು ಮಳೆಯಾಗಲಿದೆ(Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಕೊಡಗು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎರಡು ದಿನ ಸಾಧಾರಣ ಮಳೆಯಾಗಲಿದೆ.

Corona Update: ವರ್ಷದ ಕೊನೆ ದಿನ ಕರ್ನಾಟಕದಲ್ಲಿ ಕೊರೋನಾ ಶಾಕ್

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಇಲ್ಲ ಎಂದು ವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಇನ್ನು  ಶುಕ್ರವಾರ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. 

ಇನ್ನು ಈ ಬಗ್ಗೆ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಮೋಡ ಕವಿದ ವಾತಾವರಣ ಜತೆಗೆ ಮೇಲ್ಮೈ ಸುಳಿಗಾಳಿ ಹಾಗೂ ನೆರೆಯ ತಮಿಳುನಾಡಿನಲ್ಲಿ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಮಳೆಯಾಗಲಿದೆ. ತಮಿಳುನಾಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತುಸು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದರು.

ನವೆಂಬರ್‌ನಲ್ಲಿ ಅಬ್ಬರಿಸಿದ್ದ ಮಳೆರಾಯ
ರಾಜ್ಯದಲ್ಲಿ ನವೆಂಬರ್‌ನಲ್ಲಿ ಮಳೆರಾಯ ಅಬ್ಬರಿಸಿದ್ದ. ಇದರಿಂದ ರೈತರು ಬೆಳೆ ಬೆಳೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ರೈತರು ಇನ್ನು ಸಹ ಆ ಹಾನಿಯಿಂದ ಹೊರಬಂದಿಲ್ಲ. ಯಾಕಂದ್ರೆ ಕೈಗೆ ಬಂದಿದ್ದ ಬೆಳೆ ಬಾಯಿಗೆ ಬಂದಿದ್ದು ಮಾತ್ರ ಸ್ವಲ್ಪ. ಇನ್ನು ಸ್ವಲ್ಪ ಮಣ್ಣು ಪಾಲಾಗಿತ್ತು. 

2021ರ ಪ್ರಾರಂಭದಲ್ಲಿ ಮೊದಲ ಅಲೆಯಿಂದ ಚೇತರಿಸಿಕೊಂಡು ಮತ್ತೆ ಜೀವನೋತ್ಸಾಹದಲ್ಲಿ ಸಾಗಬೇಕು ಎನ್ನುವಷ್ಟರಲ್ಲಿಯೇ ವಕ್ಕರಿಸಿದ ಕೋವಿಡ್‌(Covid19) ಎರಡನೇ ಅಲೆ ಜನರ ಬದುಕು ಛಿದ್ರಗೊಳಿಸಿ ಅಪಾರ ಸಾವು ನೋವಿಗೆ ಕಾರಣವಾಗಿತ್ತು. ಇಂಥ ಕಷ್ಟಗಳ ಸರಮಾಲೆಯ ನಡುವೆ ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವಾಗಲೇ ವರ್ಷದ ಕೊನೆಯಲ್ಲಿ ವಕ್ಕರಿಸಿರುವ ಒಮಿಕ್ರೋನ್‌(Omicron) ಜಿಲ್ಲೆಗೆ ಕಾಲಿಟ್ಟಲ್ಲವಾದರೂ ಆತಂಕ ಸೃಷ್ಟಿಸಿದೆ. ಈ ಆತಂಕ ಆರಂಭದಲ್ಲಿಯೇ ದೂರವಾಗಲಿ, ಅದು ಎದುರಾಗದಿರಲಿ ಎಂಬ ಪ್ರಾರ್ಥನೆಯೊಂದಿಗೆ 2022 ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ.

ಕರ್ನಾಟಕದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ (Coroanvrius) ಸಂಖ್ಯೆ ಮತ್ತೆ ಏರಿಕೆಯಾಗಿದೆ. ಕಳೆದ ಒಂದುವಾರದಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರವೂ ಸಹ ಅಲರ್ಟ್ ಆಗಿದೆ.

ರಾಜ್ಯದಲ್ಲಿಇಂದು(ಶುಕ್ರವಾರ) ಒಂದೇ ದಿನ 832 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.  335 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೊವಿಡ್ ಪಾಸಿಟಿವಿಟಿ ಪ್ರಮಾಣ ಶೇ 0.70 ರಷ್ಟಿದ್ರೆ, ಸಾವಿನ  ಪ್ರಮಾಣ ಶೇ 0.96% ಇದೆ. 

Follow Us:
Download App:
  • android
  • ios