ಮುಂದಿನ ಐದು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಭಾರೀ ಮಳೆ ಮುನ್ಸೂಚನೆಯನ್ನು ಇಲಾಖೆ ನೀಡಿದೆ.

ಬೆಂಗಳೂರು (ಸೆ.7): ರಾಜ್ಯದಲ್ಲಿ ಇನ್ನೂ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ವರುಣ ಅಬ್ಬರಿಸಲಿದ್ದು, ಸಾಧಾರಣ ಹಾಗೂ ಹಗುರ ಮಳೆ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಕಳೆದ ನಾಲ್ಕು ದಿನಗಳಿಂದ ದಿನಗಳಿಂದ ರಾಜ್ಯದಲ್ಲು ಎಡೆ ಬಿಡದೇ ಸುರಿಯುತ್ತಿರೋ ಮಳೆ. ಈ‌ ಹಿನ್ನೆಲೆ ಇನ್ನೂ ಐದು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದ ಹವಾಮಾನ‌ ಇಲಾಖೆ. ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆ ಅಲರ್ಟ್ ನೀಡಿದೆ.

ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ ಸೇರಿ ರಾಯಚೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿಗೆ ಮಳೆ ಅಲರ್ಟ್ ನೀಡಲಾಗಿದೆ. ನಾಳೆ ಮತ್ತು ನಾಡಿದ್ದು ದಕ್ಷಿಣ ಒಳನಾಡಿನ ಹಾಸನ ಕೊಡಗು ಭಾಗಕ್ಕೆ ರೆಡ್ ಅಲರ್ಟ್, ಚಿಕ್ಕಮಗಳೂರು ಮೈಸೂರು ಆರೆಂಜ್ ಅಲರ್ಟ್, ಮಂಡ್ಯ ಶಿವಮೊಗ್ಗ ಚಿತ್ರದುರ್ಗ ತುಮಕೂರು ಬಳ್ಳಾರಿ, ದಾವಣಗೆರೆ, ಹಾಸನ ಜಿಲ್ಲೆಗಳಿಗೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. 

ಮೂರನೇ ದಿನ ಚಿಕ್ಕಮಗಳೂರು ಕೊಡಗು ಆರೆಂಜ್ ಬಳ್ಳಾರಿ ಚಿತ್ರದುರ್ಗ ಶಿವಮೊಗ್ಗ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಲ್ಕನೇ ದಿನ ಪಶ್ಚಿಮ ಘಟ್ಟದ ಜಿಲ್ಲೆಗಳು ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಹಾಸನಕ್ಕೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. 

ಈಶಾನ್ಯ ಹಾಗು ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಲ್ಲಿ 5.8 ಕಿಮೀ ಎತ್ತರದವರೆಗೂ ಮೇಲ್ಮೈ ಸುಳಿಗಾಳಿ ಹಿನ್ನಲೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಂದಾಜಿಸಿದೆ. 

ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದು, ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದ.ಕನ್ನಡ, ಬಾಗಲಕೋಟೆ, ಬೆಳಗಾವಿ,ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಹಾವೇರಿ , ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

ಸತತ 5ನೇ ದಿನವೂ ಬೆಂಗಳೂರಿನಲ್ಲಿ ಮಳೆ: ಬಿಟ್ಟುಬಿಡದೇ ಕಾಡುತ್ತಿರುವ ವರುಣನ ಹೊಡೆತಕ್ಕೆ ಬೆಂಗಳೂರು ಕ್ರಮೇಣ ಜಲನಗರಿಯಾಗತೊಡಗಿದೆ. 5ನೇ ದಿನವಾದ ಮಂಗಳವಾರ ಸಂಜೆ ಸುರಿದ ಮಳೆಯಿಂದ ಐಟಿ ಕಾರಿಡಾರ್‌ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದ್ದು, ಹಲವು ಬಡಾವಣೆಗಳು ಜಲಾವೃತಗೊಂಡು ನೂರಾರು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಕೆರೆಯಂತಾಗಿ ಬೈಕು, ಕಾರುಗಳು, ಆಟೋಗಳು ಮುಳುಗಡೆಯಾಗಿದ್ದವು. ಮಳೆ ಕಾರಣ ಅನೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿವೆ ಹಾಗೂ ಶಾಲೆ-ಕಾಲೇಜುಗಳು ರಜೆ ಘೋಷಿಸಿವೆ ಇಲ್ಲವೇ ಆನ್‌ಲೈನ್‌ ತರಗತಿ ಆರಂಭಿಸಿವೆ.

Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿಯ ಗ್ರೀನ್ವುಡ್‌ ರೀಜನ್ಸಿ ಅಪಾರ್ಚ್‌ಮೆಂಟ್‌ ಕಾಂಪೌಂಡ್‌ ಕುಸಿತಗೊಂಡಿದ್ದು 450 ಫ್ಲಾಟ್‌ಗಳು ಇರುವ ಅಪಾರ್ಚ್‌ಮೆಂಟ್‌ ಒಳಗೆ ನೀರು ನುಗ್ಗಿತ್ತು. ಈ ಪರಿಣಾಮ 50 ಕ್ಕೂ ಹೆಚ್ಚು ಕಾರುಗಳು ಮುಳುಗಡೆಯಾಗಿದ್ದವು. ಯಮಲೂರಿನ ಎಪ್ಸಿಲಾನ್‌ ವಿಲ್ಲಾ ಕೂಡ ಜಲಾವೃತಗೊಂಡಿದ್ದು ಇಲ್ಲಿನ ನಿವಾಸಿಗಳು ಬೋಟ್‌ಗಳಲ್ಲಿ ಹಾಗೂ ಟ್ರಾಕ್ಟರ್‌ಗಳಲ್ಲಿ ಓಡಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

Bengaluru Rain: ಮುಳುಗಿದ ಐಟಿ ಸಿಟಿ; ಹೋಟೆಲ್‌ ರೂಮಿಗೆ 40 ಸಾವಿರ ಬಾಡಿಗೆ..!

ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲಿ ಮಳೆಯಿಂದ ಸಾಕಷ್ಟುಅವಾಂತರ ಸೃಷ್ಟಿಯಾಗಿದೆ. ಸ್ಥಳೀಯ ನಿವಾಸಿಗಳನ್ನು 20 ಬೋಟ್‌ಗಳು, 55 ವಾಹನಗಳ ಮೂಲಕ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿತ್ತು. ಬಡಾವಣೆಯಲ್ಲಿ 500 ಮನೆಗಳ ಪೈಕಿ 150 ಮನೆ ಸಂಪೂರ್ಣ ಜಲಾವೃತಗೊಂಡಿವೆ. ಅಗ್ನಿಶಾಮಕ ದಳದ 600 ಸಿಬ್ಬಂದಿಗಳು, ಎನ್‌ಡಿಆರ್‌ಎಫ್‌ ತಂಡದ 300 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕೋಟ್ಯಂತರ ರು. ಮೌಲ್ಯದ ವಿಲ್ಲಾಗಳೂ ನೀರಿನಲ್ಲಿ ಮುಳುಗಿವೆ. ಮಳೆ ನೀರು ಕಡಿಮೆ ಆಗಲು ಇನ್ನೂ ಒಂದು ವಾರದಷ್ಟುಸಮಯ ಬೇಕಿದೆ.