ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆ ಕಾರಣ ಇದೀಗ ಕೆಲ ಜಿಲ್ಲೆಗೆ ಎಚ್ಚರಿಕೆ ನೀಡಲಾಗಿದೆ. ವೀಕೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಲರ್ಟ್ ಪಾಲಿಸಲು ಸೂಚಿಸಲಾಗಿದೆ
ಬೆಂಗಳೂರು (ಜು.18) ರಾಜ್ಯದಲ್ಲಿ ಕಳೆದ ಕೆಲ ದಿನಗಳಲ್ಲಿ ಬಾರಿ ಮಳೆಯಾಗುತ್ತಿದೆ. ಈ ಪೈಕಿ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಎಚ್ಚರಿಕೆ ಸಂದೇಶ ನೀಡಲಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ಐದು ದಿನ ಚಿಕ್ಕಮಗಳೂರಿನಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಐದು ದಿನಗಳ ಕಾಲ ಮಳೆ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಚಿಕ್ಕಮಗಳೂರಿಗೆ ವೀಕೆಂಡ್ ಟ್ರಿಪ್ ಬರುವ ಪ್ರವಾಸಿಗರು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಚಿಕ್ಕಮಗಳೂರು ಪ್ರವಾಸಿಗರಿಗೆ ಎಚ್ಚರಿಕೆ
ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಐದು ದಿನ ಆರೇಂಜ್ ಅಲರ್ಟ್ ಹಿನ್ನಲೆಯಲ್ಲಿ ಚಾರಣ ಮಾಡುವಾಗ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಪಶ್ಚಿಮ ಘಟ್ಟ ಸಾಲಿನಲ್ಲಿ ಚಾರಣ ಮಾಡುವಾಗ ಎಚ್ಚರಿಕೆ ಇರಬೇಕು. ಗುಡ್ಡ ಕುಸಿತ, ದಿಢೀರ್ ಪ್ರವಾಹದ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ನೀಡಿದೆ.
ಚಿಂಚೋಳಿ ತಾಲ್ಲೂಕಿನ ಹಲವೆಡೆ ವರುಣನ ಅಬ್ಬರ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.ಕುಂಚಾವರಂ, ಸಂಗಾಪುರ್, ಚಿಂಚೋಳಿ, ಸುಲೇಪೇಟ್, ಕೊರವಿ, ದೇಗಲಮಡಿ ಸೇರಿ ಹಲವೆಡೆ ವರುಣಾರ್ಭಟ ಮುಂದುವರಿದಿದೆ.ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಮಳೆಗಾಗಿ ಕಾದು ಕುಳಿತಿದ್ದ ರೈತರಲ್ಲಿ ಸಂತಸ ಮೂಡಿದೆ. ಮಳೆ ಇಲ್ಲದೆ ಹಲವು ಬೆಳೆಗಳು ಸೊರಗಿದ್ದರು. ಈ ಪೈಕಿ ಮಳೆ ಇಲ್ಲದೆ ಬಾಡುತ್ತಿದ್ದ ತೊಗರಿ, ಉದ್ದು, ಹೆಸರು, ಸೋಯಾ ಮುಂಗಾರು ಬೆಳೆಗೆ ಇದೀಗ ಮಳೆ ಸಿಂಚನ ನೀಡಿದೆ.
ಮಳೆಯಿಂದ ಹದಗೆಟ್ಟ ರಸ್ತೆ, ಶಾಲಾ ಮಕ್ಕಳ ಪರದಾಟ
ಮಳೆಗೆ ರಸ್ತೆ ಹದಗೆಟ್ಟು ಹೋಗಿ ನಿತ್ಯ ಶಾಲಾ ಮಕ್ಕಳು ಪರದಾಡುತ್ತಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನರಗಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಕೆಸರುಮಯವಾಗಿ ತಗ್ಗು ಗುಂಡಿಯಿಂದ ಕೂಡಿದ್ದು ಶಾಲಾ ಮಕ್ಕಳು ಓಡಾಡಲು ಪರದಾಡುವಂತಾಗಿದೆ. ಇನ್ನು ಬೈಕ್ ಸೇರಿದಂತೆ ವಾಹನ ಸವಾರರಂತು ಈ ರಸ್ತೆಗೆ ಬಂದ್ರೆ ಸಾಕು ತೀವ್ರ ತೊಂದರೆ ಅನುಭವಿಸವಂತಾಗಿದ್ದು, ಅದೆಷ್ಟೋ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ಸಂಭಂದ ಸಾಕಷ್ಟು ಬಾರಿ ಹೇಳಿದ್ರೂ ಜನಪ್ರತಿನಿಧಿಗಳು ಯಾರೂ ಕ್ಯಾರೆ ಅಂದಿಲ್ಲ, ಇದ್ರಿಂದ ಗ್ರಾಮಸ್ಥರು ರೋಷಿ ಹೋಗಿದ್ದು, ಪ್ರತಿಭಟನಾ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
