ಅಕ್ರಮ ಗಣಿಗಾರಿಕೆ ಪ್ರಕರಣ: ED ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ಗಣಿ ಉದ್ಯಮಿ ಖಾರವಾಗಿ ಪ್ರತಿಕ್ರಿಯೆ
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ₹103 ಕೋಟಿ ನಷ್ಟವನ್ನುಂಟುಮಾಡಿರುವ ಪ್ರಕರಣಕ್ಕೆ ಸಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಗಣಿ ಉದ್ಯಮಿ ಖಾರದಪುಡಿ ಮಹೇಶ ಸೇರಿದ 17,24 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ವಿಜಯನಗರ (ಜು.7) : ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ₹103 ಕೋಟಿ ನಷ್ಟವನ್ನುಂಟುಮಾಡಿರುವ ಪ್ರಕರಣಕ್ಕೆ ಸಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಗಣಿ ಉದ್ಯಮಿ ಖಾರದಪುಡಿ ಮಹೇಶ ಸೇರಿದ 17,24 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ಗುರುವಾರ ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಸಂಬಂಧ ಖಾರವಾಗಿ ಪ್ರತಿಕ್ರಿಯಿಸಿರುವ ಖಾರದಪುಡಿ ಮಹೇಶ, 'ಆಸ್ತಿ ಸೀಜ್ ಮಾಡಿರುವುದು ಹಳೇ ಪ್ರಕರಣ. ನಾನು ಕಾನೂನು ಬದ್ದವಾಗಿದ್ದೇವೆ. ಕಾನೂನಿಗೆ ತೆಲೆ ಬಾಗಿಸುತ್ತೇನೆ. ಈ ಬಗ್ಗೆ ನಿನ್ನೆ ನನಗೆ ಮಾಹಿತಿ ಸಿಕ್ಕಿದೆ. ನ್ಯಾಯಾಲಯ ನಿನ್ನೆ ಆದೇಶ ಮಾಡಿದೆ, ನಮ್ಮ ಅಣ್ಣನ ಮಗನ ಆಸ್ತಿ ಬಿಡುಗಡೆ ಮಾಡಿದೆ. ಆದರೆ ಇದೆಲ್ಲಾ ಹಳೇಯ ಕೇಸ್. ಈಗ ಮತ್ತೆ ಮತ್ತೆ ಪ್ರಕರಣ ದಾಖಲಿಸುತ್ತಿದ್ದಾರೆ. ನಮ್ಮ ಮೇಲೆ ಕೆಲವರಿಗೆ ಬಹಳ ಪ್ರೀತಿಯಿದೆ ಎಂದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡವನ ಜತೆ ವೇದಿಕೆ ಹಂಚಿಕೊಂಡ ಸಿದ್ದು
ನಾವು ಕೇವಲ ಟಾನ್ಸ್ ಪೋರ್ಟರ್ಸ್ ಗಳು. ಅಕ್ರಮದ ನಮಗೆ ಗೊತ್ತಿಲ್ಲ. ನಾವು ನಾವು ಅಕ್ರಮ ಮಾಡಿಲ್ಲ. ಶೀಘ್ರದಲ್ಲೇ ಈ ಪ್ರಕರಣದಿಂದ ದೋಷಮುಕ್ತರಾಗಿ ಹೊರಬರುತ್ತೇವೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಈ ಪ್ರಕರಣದಲ್ಲಿ ಅಷ್ಟು ಕೋಟಿ ಇಷ್ಟು ಕೋಟಿ ಅಂತಿದ್ದಾರೆ. ಆದರೆ ಆದ್ರೆ ನಮ್ಮ ಬಳಿ ಅಷ್ಟೊಂದು ಆಸ್ತಿಯೇ ಇಲ್ಲ ಎಂದರು.
ಜಾರಿ ನಿರ್ದೇಶನಾಲಯ ಆಸ್ತಿ ಜಪ್ತಿ ಬಳಿಕ ನನ್ನ ಸ್ನೇಹಿತರು ಪೋನ್ ಮಾಡಿ ಕೇಳುತ್ತಾರೆ. ಅವರಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ. ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಸುಖಾಸುಮ್ಮನೆ ದೂರು ಕೊಟ್ಟು ತೊಂದರೆ ಕೊಡುತ್ತಿದ್ದಾರೆ. ಆದರೆ ನನ್ನ ಆಸ್ತಿ ಎಲ್ಲಿದೆ ಎಂದು ತೋರಿಸಲಿ. ಅರ್ಧ ಆಸ್ತಿಯನ್ನ ಪ್ರೀ ಆಗಿ ಕೊಡುವೆ ಎಂದು ಸವಾಲು ಹಾಕಿದರು.