Asianet Suvarna News Asianet Suvarna News

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡವನ ಜತೆ ವೇದಿಕೆ ಹಂಚಿಕೊಂಡ ಸಿದ್ದು

ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿ ಬಂದವರ ಜೊತೆಗೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ| ಅಂದು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದ ಖಾರದಪುಡಿ ಮಹೇಶ್ ನೊಂದಿಗೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ|  ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿಒಂದೇ ಹಾರದಲ್ಲಿ ಇಬ್ಬರು ಫುಲ್ ಮಿಂಚಿದ ಸಿದ್ದು|
 

Siddaramaiah Share Stage to Congress Activist in Hosapete
Author
Bengaluru, First Published Nov 29, 2019, 10:23 AM IST

"

ಬಳ್ಳಾರಿ[ನ.29]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿ ಬಂದವರ ಜೊತೆಗೆ ವೇದಿಕೆ ಹಂಚಿಕೊಂಡ ಪ್ರಸಂಗ ಗುರುವಾರ ಹೊಸಪೇಟೆಯಲ್ಲಿ ನಡೆದಿದೆ. ಅಂದು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದ ಖಾರದಪುಡಿ ಮಹೇಶ್ ನೊಂದಿಗೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ.  

ಗುರುವಾರ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಹೇಶ್ ಜೊತೆಗೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ ಒಂದೇ ಹಾರದಲ್ಲಿ ಇಬ್ಬರು ಫುಲ್ ಮಿಂಚಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ ಬಳ್ಳಾರಿಯಿಂದ ಕೂಡಲಸಂಗಮಕ್ಕೆ ಪಾದಯಾತ್ರೆ ಕೈಗೊಂಡ ವೇಳೆ ಭಾಷಣ ಮಾಡಿದ್ದ ಸಿದ್ದರಾಮಯ್ಯ ಆನಂದ ಸಿಂಗ್ , ಜನಾರ್ದನ ರೆಡ್ಡಿ ಮತ್ತವರ ತಂಡ ನನ್ನನ್ನು ಬೆದರಿಸಿತ್ತು ಎಂದು ಆರೋಪಿಸಿದ್ದರು. ಅಂದು ಆ ತಂಡದಲ್ಲಿ ಖಾರದಪುಡಿ ಮಹೇಶ್ ಕೂಡ ಗುರುತಿಸಿಕೊಂಡಿದ್ದರು. ಖಾರದಪುಡಿ ಮಹೇಶ್ ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ ಬಂಟನಾಗಿದ್ದನು. ನಾನು ಪ್ರತಿ ಬಾರಿ ಬಳ್ಳಾರಿಗೆ ಬಂದಾಗ ಖಾರದಪುಡಿ ಮಹೇಶ್ ಹೆದರಿಸುತ್ತಿದ್ದರು ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ಅವನ ಜೊತೆ ಒಂದೇ ಹಾರದಲ್ಲಿ ಮಿಂಚಿದ್ದಾರೆ.

ಆದರೆ, ಪಾದಯಾತ್ರೆಯ ವೇಳೆ ಮತ್ತು ಸಂಡೂರಿಗೆ ಬಂದಾಗ ನನ್ನನ್ನು ಬೆದರಿಸಿದ್ರು ಎನ್ನುವವರ ಜೊತೆಗೆ ಇದೀಗ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ತಮ್ಮ ಜೊತೆಗೆ ಬಂದ್ರೇ ಆನಂದ ಸಿಂಗ್ ಹಾಗೂ ಖಾರದ ಪುಡಿ ಮಹೇಶ್ ಸೇರಿದಂತೆ  ಎಲ್ಲರೂ ಅಕ್ರಮ ಗಣಿಗಾರಿಕೆ ಮಾಡಿದ್ರೂ ನಡೆಯುತ್ತಯೇ? ಬಿಜೆಪಿ ಪಕ್ಷದಲ್ಲಿದ್ರೇ ಮಾತ್ರ ಇವರು ಅಕ್ರಮ ದಂಗೆಕೋರರು ? ಕಾಂಗ್ರೆಸ್ ಗೆ ಬಂದ್ರೇ ಇವರೆಲ್ಲ ಪರಿಶುದ್ಧರಾಗ್ತರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 

ಅಂದು ಜನಾರ್ನದ ರೆಡ್ಡಿ ಬಂಡನಾಗಿದ್ದ ಖಾರದಪುಡಿ ಮಹೇಶ್ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ವೊಂದಕ್ಕೆ ಸ್ಪರ್ಧೆ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  ಅಂದು ಅಕ್ರಮ ಗಣಿಗಾರಿಕೆ ದಂಗೆಕೋರ ಇಂದು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. 
 

Follow Us:
Download App:
  • android
  • ios