'ಅವರು ಬಿಡುಗಡೆ ಮಾಡಲಿ ಅಂತ ನಾವು ಕಾಯುತ್ತಿದ್ದೇವೆ' ಹೆಚ್‌ಡಿಕೆ ಪೆನ್‌ಡ್ರೈವ್ ವಿಚಾರಕ್ಕೆ ಚಲುವರಾಯಸ್ವಾಮಿ ತಿರುಗೇಟು
ಜಿಲ್ಲೆಯ ಅಭಿವೃದ್ಧಿಗೆ ಅನುದಾನದಲ್ಲಿ ತಾರತಮ್ಯವಾಗಿದ್ದರೆ ಅವರ ನಾಯಕರನ್ನು ಸದನದಲ್ಲಿ ಪ್ರಶ್ನಿಸಲು ಹೇಳಿ ಅಲ್ಲಿಯೇ ಉತ್ತರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜೆಡಿಎಸ್ ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.
ಮಂಡ್ಯ (ಜು.10) : ಜಿಲ್ಲೆಯ ಅಭಿವೃದ್ಧಿಗೆ ಅನುದಾನದಲ್ಲಿ ತಾರತಮ್ಯವಾಗಿದ್ದರೆ ಅವರ ನಾಯಕರನ್ನು ಸದನದಲ್ಲಿ ಪ್ರಶ್ನಿಸಲು ಹೇಳಿ ಅಲ್ಲಿಯೇ ಉತ್ತರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜೆಡಿಎಸ್ ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.
ಇದು ಇಲ್ಲೆಲ್ಲಾ ಕುಳಿತು ಪ್ರಶ್ನೆ ಮಾಡುವ ವಿಷಯವಲ್ಲ, ಸದನದಲ್ಲಿ ಪ್ರಸ್ತಾಪ ಮಾಡುವ ವಿಚಾರ. ಹಾಗಾಗಿ ಸದನದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರೆ ಅಲ್ಲಿಯೇ ಉತ್ತರ ನೀಡುತ್ತೇನೆ. ಅನುದಾನ ತರುವುದು ಬಿಡುವುದು ಐದು ವರ್ಷದ ವಿಚಾರ ಎಂದರು
ಚಲುವರಾಯಸ್ವಾಮಿಯಿಂದ ದ್ವೇಷದ ರಾಜಕಾರಣ: ಶಾಸಕ ಸುರೇಶ್‌ಗೌಡ ಕಿಡಿ
ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಕ್ಕೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲು ಕೇಂದ್ರ ಸರ್ಕಾರ ಅಕ್ಕಿ ನೀಡದೆ ಅಡೆತಡೆ ಮಾಡಿತು, ಎಷ್ಟೇ ಸಂಕಷ್ಟಎದುರಾದರೂ ಐದು ಕೆಜಿ ಅಕ್ಕಿ ಮತ್ತು ಐದು ಕೆಜಿಗೆ ಹಣ ನೀಡುತ್ತಿದ್ದೇವೆ, ಎಷ್ಟೇ ಕಷ್ಟಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಈಗ ಸರ್ಕಾರಿ ಬಸ್ ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿಲ್ಲವೇ, ಅಕ್ಕಿ ಮತ್ತು ಹಣ ನೀಡುತ್ತಿಲ್ಲವೇ. ಟೀಕೆ ಮಾಡಲಿ ಅದಕ್ಕೆ ನನ್ನ ಅಭ್ಯಂತರ ಏನಿಲ್ಲ. ಸುಮ್ಮನೆ ಟೀಕೆ ಮಾಡಿದರೆ ಏನರ್ಥ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಪೆನ್‌ಡ್ರೈವ್ ಬಿಡುಗಡೆ ಮಾಡುವ ಬಗ್ಗೆ ಕೇಳಿದಾಗ, ಅವರು ಬಿಡುಗಡೆ ಮಾಡಲಿ ಅಂತ ನಾವು ಕಾಯುತ್ತಿದ್ದೇವೆ. ಈಗಾಗಲೇ ಸದನದಲ್ಲಿ ಎಲ್ಲಾ ವಿಚಾರದ ಬಗ್ಗೆ ಮಾತನಾಡಿದ್ದೇವೆ, ಮತ್ತೆ ಅದೇ ವಿಚಾರವನ್ನು ಮಾತನಾಡೋದು ಸರಿಯಲ್ಲ ಎಂದರು.
ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್
ಅಭಿವೃದ್ಧಿ ಬಗ್ಗೆ ದಾಖಲೆ ತೊರಿಸಲಿ
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇವರು ಏನು ಮಾಡಿದ್ದಾರೆ ಎಂಬುದು ದಾಖಲೆಗಳಿಂದ ತಿಳಿದಿಲ್ಲವೇ. ಅವರ ಅಭಿವೃದ್ಧಿ ಬಗ್ಗೆ ದಾಖಲೆ ತೋರಿಸಲಿ. ಕೈಲಾಗದವ ನೆಲ ಡೊಂಕು ಎಂಬಂತಿದೆ ಇವರ ವರ್ತನೆ ಎಂದು ಮೂದಲಿಸಿದರು. ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡಿದರೆ ಅವರ ಮಾನವನ್ನು ಅವರೇ ಕಳೆದುಕೊಳ್ಳಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ, ವರ್ಗಾವಣೆಯಲ್ಲಿ ಸರ್ಕಾರ ತೊಡಗಿರುವ ಬಗ್ಗೆ ಕೇಳಿದಾಗ, ವರ್ಗಾವಣೆ ಯಾವ ಸರ್ಕಾರದಲ್ಲಿ ಆಗಿಲ್ಲ. ಅದೆಲ್ಲಾ ಸಹಜ. ಸುಮ್ಮನೆ ಯಾವ್ಯಾವುದೋ ವಿಚಾರವನ್ನು ಎಲ್ಲೆಲ್ಲಿಗೂ ಎಳೆದುತರಬಾರದು ಎಂದರು.