Asianet Suvarna News Asianet Suvarna News

High Court of Karnataka: ತಂದೆಯ ಸಾಲಕ್ಕೆ ಮಗ ಚೆಕ್‌ ನೀಡಿದ್ದರೆ ಸಾಲ ತೀರಿಸುವ ಹೊಣೆ ಮಗನದ್ದೇ!

ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್‌ ನೀಡಿದ ಸಂದರ್ಭದಲ್ಲಿ ಸಾಲದ ಮರು ಪಾವತಿಗೆ ಆತ ಹೊಣೆಗಾರನಾಗುತ್ತಾನೆ ಎಂದು ಹೈಕೋರ್ಚ್‌ ಆದೇಶಿಸಿದೆ. ದಾವಣಗೆರೆಯ ಪ್ರಸಾದ್‌ ರಾಯ್ಕರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್‌ ಅವರ ಏಕಸದಸ್ಯಪೀಠ ಈ ಆದೇಶ ಮಾಡಿದೆ.

If the son gave a check for the father loan the son is responsible for paying the loan says highcourt rav
Author
First Published Jan 17, 2023, 9:26 AM IST

, ಬೆಂಗಳೂರು (ಜ.17) : ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್‌ ನೀಡಿದ ಸಂದರ್ಭದಲ್ಲಿ ಸಾಲದ ಮರು ಪಾವತಿಗೆ ಆತ ಹೊಣೆಗಾರನಾಗುತ್ತಾನೆ ಎಂದು ಹೈಕೋರ್ಚ್‌ ಆದೇಶಿಸಿದೆ. ದಾವಣಗೆರೆಯ ಪ್ರಸಾದ್‌ ರಾಯ್ಕರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್‌ ಅವರ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ಆರೋಪಿ ದಿನೇಶ್‌ ಮೃತ ಸಾಲಗಾರನ ಭರಮಪ್ಪ ಅವರ ಪುತ್ರ. ಮೃತ ತಂದೆ ಸಾಲ ಮರುಪಾವತಿಗೆ ಒಪ್ಪಿದ ದಿನೇಶ್‌ ಖಾತರಿಯಾಗಿ ಚೆಕ್‌ ನೀಡಿದ್ದಾರೆ. ನಿಯಮದಂತೆ ಸಾಲಕ್ಕೆ ಖಾತ್ರಿ ನೀಡಿರುವವರು (ಗ್ಯಾರಂಟರ್‌) ಹೇಗೆ ಬಾಧ್ಯಸ್ಥರಾಗುತ್ತಾರೋ ಅದೇ ರೀತಿಯೇ ತಂದೆ ಸಾಲಕ್ಕೆ ಖಾತರಿಯಾಗಿ ಚೆಕ್‌ ನೀಡಿದ ಪುತ್ರನೂ ಬಾಧ್ಯಸ್ಥನಾಗುತ್ತಾನೆ. ಆದ್ದರಿಂದ ಪ್ರಕರಣದಲ್ಲಿ ಪ್ರಸಾದ್‌ಯಿಂದ ಪಡೆದ ಸಾಲಕ್ಕೆ ಭರಮಪ್ಪ ಅವರ ಕಾನೂನುಬದ್ಧ ವಾರಸುದಾರರಾಗಿರುವ ಪುತ್ರ ದಿನೇಶ್‌ ಬಾಧ್ಯಸ್ಥನಾಗಿದ್ದು, ಸಾಲದ ಹಣ ಮರುಪಾವತಿಸಬೇಕು ಎಂದು ಆದೇಶಿಸಿದೆ.

Karnataka high court: ಅಪಘಾತಕ್ಕೀಡಾದ ವಾಹನವನ್ನು ವಿಮೆ ಇಲ್ದಿದ್ರೂ ಬಿಡಿ: ಹೈಕೋರ್ಟ್ ಆದೇಶ

ಪ್ರಕರಣವೇನು?

ಭರಮಪ್ಪ ಅವರು ವೈಯಕ್ತಿಕ ಖರ್ಚಿಗಾಗಿ ಮೇಲ್ಮನವಿದಾರ ಪ್ರಸಾದ್‌ ಅವರಿಂದ 2003ರ ಮಾ.7ರಂದು 2.6 ಲಕ್ಷ ರು. ಸಾಲ ಪಡೆದಿದ್ದರು. ಶೇ.2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಭರವಸೆ ನೀಡಿ ಪ್ರಾಮಿಸರಿ ನೋಟ್‌ ಬರೆದುಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪ ಸಾವನ್ನಪ್ಪಿದ್ದರು. ಆ ವೇಳೆಗೆ ಸಾಲದ ಮೊತ್ತ ಬಡ್ಡಿ ಸೇರಿ 4.5 ಲಕ್ಷ ರು. ಆಗಿತ್ತು. ಅದನ್ನು ಪಾವತಿಸುವಂತೆ ಭರಮ್ಮಪ್ಪ ಮಗ ದಿನೇಶ್‌ಗೆ ಕೇಳಿದ್ದರು. ಪ್ರಸಾದ್‌ಗೆ 10 ಸಾವಿರ ಮರುಪಾವತಿ ಮಾಡಿದ್ದ ದಿನೇಶ್‌, ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ ತಲಾ 2.25 ಲಕ್ಷ ರು. ಮೊತ್ತಕ್ಕೆ ಎರಡು ಚೆಕ್‌ ನೀಡಿದ್ದರು. ಆದರೆ, ಆ ಎರಡೂ ಚಕ್‌ ಗಳು ಬೌನ್ಸ್‌ ಆಗಿದ್ದರಿಂದ ಪ್ರಸಾದ್‌ ದೂರು ದಾಖಲಿಸಿದ್ದರು.

karnataka high court : ಆಸ್ಪತ್ರೆಯಿಂದ ಹೊರಬಂದ ಪತಿಗೆ ಬೆಂಗಳೂರು ಬಂಧನ!

ಅದರ ವಿಚಾರಣೆ ನಡೆಸಿದ್ದ ದಾವಣೆಗೆರೆ ಜೆಎಂಎಫ್‌ಸಿ ನ್ಯಾಯಾಲಯ, ದಿನೇಶ್‌ಗೆ ಸಾಲದ ಹಣ ಮರುಪಾವತಿ ಮಾಡುವಂತೆ ಆದೇಶ ನೀಡಿತ್ತು. ಆದರೆ, ಸೆಷನ್ಸ್‌ ನ್ಯಾಯಾಲಯ ಪ್ರಕರಣದಿಂದ ದಿನೇಶ್‌ ವರನ್ನು ಖುಲಾಸೆಗೊಳಿಸಿ ಸಾಲ ಮರು ಪಾವತಿಸಬೇಕಿಲ್ಲ ಎಂದು ಆದೇಶಿಸಿತ್ತು. ಇದರಿಂದ ಪ್ರಸಾದ್‌ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿರುವ ಹೈಕೋರ್ಚ್‌, ಈ ಮೇಲಿನಂತೆ ಆದೇಶಿಸಿದೆ.

Follow Us:
Download App:
  • android
  • ios