karnataka high court : ಆಸ್ಪತ್ರೆಯಿಂದ ಹೊರಬಂದ ಪತಿಗೆ ಬೆಂಗಳೂರು ಬಂಧನ!
ಮದ್ಯ ವ್ಯಸನಿ ಪತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರೆ ಆತನಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಸುಳ್ಯದಲ್ಲಿರುವ ಪತ್ನಿ ಹಾಗೂ ಕುಟುಂಬದ ಸದಸ್ಯರ ಆತಂಕವನ್ನು ಪರಿಗಣಿಸಿದ ಹೈಕೋರ್ಟ್, ಆಸ್ಪತ್ರೆಯಿಂದ ಬಿಡುಗಡೆಯಾದರೂ ಬೆಂಗಳೂರು ಬಿಟ್ಟು ತೆರಳುವಂತಿಲ್ಲ ಎಂದು ಪತಿಗೆ ಷರತ್ತು ವಿಧಿಸಿ ಆದೇಶ ಅಪರೂಪದ ಆದೇಶ ಹೊರಡಿಸಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು (ಜ.3) : ಮದ್ಯ ವ್ಯಸನಿ ಪತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರೆ ಆತನಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಸುಳ್ಯದಲ್ಲಿರುವ ಪತ್ನಿ ಹಾಗೂ ಕುಟುಂಬದ ಸದಸ್ಯರ ಆತಂಕವನ್ನು ಪರಿಗಣಿಸಿದ ಹೈಕೋರ್ಚ್, ಆಸ್ಪತ್ರೆಯಿಂದ ಬಿಡುಗಡೆಯಾದರೂ ಬೆಂಗಳೂರು ಬಿಟ್ಟು ತೆರಳುವಂತಿಲ್ಲ ಎಂದು ಪತಿಗೆ ಷರತ್ತು ವಿಧಿಸಿ ಆದೇಶ ಅಪರೂಪದ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ(Dakshina kannada) ಜಿಲ್ಲೆ ಸುಳ್ಯ ತಾಲೂಕಿನ ನಿವಾಸಿ ರವಿ (ಹೆಸರು ಬದಲಿಸಲಾಗಿದೆ) ಎಂಬುವರ ತಾಯಿ ಹೈಕೋರ್ಚ್‌ಗೆ ಹೇಬಿಯಸ್ ಕಾರ್ಪಸ್(Habeas Corpus) ಸಲ್ಲಿಸಿ, ಮಗನನ್ನು ಆಸ್ಪತ್ರೆಯಲ್ಲಿ ಅಕ್ರಮ ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿದ ಪ್ರಕರಣದಲ್ಲಿ ಹೈಕೋರ್ಚ್ ಈ ಆದೇಶ ಮಾಡಿದೆ.
Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ
ಪೊಲೀಸರು ರವಿ ಅವರ ಪತ್ನಿ ಮತ್ತವರ ಕುಟುಂಬ ಸದಸ್ಯರಿಗೆ ಅಗತ್ಯ ಪೊಲೀಸ್ ರಕ್ಷಣೆ ಕಲ್ಪಿಸಬೇಕು. ಮತ್ತೊಂದೆಡೆ ತಮಗೂ ಪೊಲೀಸ್ ರಕ್ಷಣೆಯ ಅಗತ್ಯವಿದೆ ಎಂದು ರವಿಯ ತಾಯಿ ತಿಳಿಸಿದರೆ, ಆ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ಹೈಕೋರ್ಟ್(High court) ನಿರ್ದೇಶಿಸಿ ವಿಚಾರಣೆಯನ್ನು ಜ.2ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ತನ್ನ ಮಗನನ್ನು ಆಸ್ಪತ್ರೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ ಎಂದು ದೂರಿ ರವಿಯ ತಾಯಿ ಅರ್ಜಿ ಸಲ್ಲಿಸಿದ್ದರು. ರವಿಯನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಹೈಕೋರ್ಚ್ ಪೊಲೀಸರಿಗೆ ನಿರ್ದೇಶಿಸಿತ್ತು. ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಪೊಲೀಸರ ಪರ ಸರ್ಕಾರಿ ಅಭಿಯೋಜಕರು ಹಾಜರಾಗಿ, ಆರೋಗ್ಯ ಸಮಸ್ಯೆಗಳಿಂದ ರವಿಯನ್ನು ದಾಖಸಿಕೊಳ್ಳಲಾಗಿದೆ ಎಂದು ಆಸ್ಪತ್ರೆ ನೀಡಿದ ಪ್ರಮಾಣ ಪತ್ರವನ್ನು ಕೋರ್ಚ್‌ಗೆ ಸಲ್ಲಿಸಿದರು.
ಅದನ್ನು ಪರಿಗಣಿಸಿದ ಹೈಕೋರ್ಚ್, ಅರ್ಜಿದಾರರು ಹಾಗೂ ಅವರ ವಕೀಲರು ಆಸ್ಪತ್ರೆಯಲ್ಲಿ ರವಿಯನ್ನು ಭೇಟಿ ಮಾಡಲು ಅನುಮತಿಸಿತು. ರವಿಯನ್ನು ಭೇಟಿ ಮಾಡಿದ ಬಳಿಕ ಅರ್ಜಿದಾರೆಯ ಪರ ವಕೀಲರು ಕೋರ್ಚ್‌ಗೆ ವರದಿ ಸಲ್ಲಿಸಿದರು.
ವರದಿಯಲ್ಲಿ ‘ನಾನು ನಿತ್ಯ ಮದ್ಯ ಸೇವಿಸುತ್ತೇನೆ. ಪತ್ನಿ ಮತ್ತು ಮಾವ ನನ್ನನ್ನು ಹುಟ್ಟೂರಿನಿಂದ ಬೆಂಗಳೂರಿಗೆ ಬಲವಂತವಾಗಿ ಆ್ಯಂಬುಲೆನ್ಸ್‌ನಲ್ಲಿ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರೆತರುವಾಗ ನನ್ನ ಕೈ, ಕಾಲು ಕಟ್ಟಿಹಾಕಲಾಗಿತ್ತು. ಮೂಡಬಿದರೆ ಬಳಿ ಪೊಲೀಸರು ಆ್ಯಂಬುಲೆನ್ಸ್ ತಡೆದು ವಿಚಾರಿಸಿದಾಗ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲವೆಂದು ತಿಳಿಸಿದೆ. ಆದರೂ ಪತ್ನಿ ಮತ್ತು ಮಾವ ಬಲವಂತವಾಗಿ ಕರೆತಂದು ಆಸ್ಪತ್ರೆಗೆ ದಾಖಲಿಸಿದರು. ಪತ್ನಿಗೆ ಪರ ಪುರುಷನೊಂದಿಗೆ ಅನೈತಿಕ ಸಂಬಂಧವಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹೀಗೆ ನಡೆಸಿಕೊಳ್ಳಲಾಗಿದೆ’ ಎಂದು ರವಿ ಹೇಳಿರುವುದಾಗಿ ಅರ್ಜಿದಾರೆಯ ಪರ ವಕೀಲರು ತಿಳಿಸಿದ್ದರು.
ಇದೇ ವೇಳೆ ರವಿಯ ಪತ್ನಿ ಮತ್ತವರ ವಕೀಲರು ತಮ್ಮನ್ನು ಭೇಟಿ ಮಾಡಿ, ರವಿ ಮದ್ಯಕ್ಕೆ ದಾಸರಾಗಿದ್ದು, ಮದ್ಯ ಸೇವಿಸಿದಾಗ ಮನೆಯಲ್ಲಿ ಸಾಕಷ್ಟುಗಲಾಟೆ ಮಾಡುತ್ತಾರೆ. ಆಗ ಅವರನ್ನು ತಡೆಯಲಾಗದು. ಆತ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ. ಆಸ್ಪತ್ರೆಯಿಂದ ರವಿ ಹೊರ ಬಂದರೆ ಪತ್ನಿ ಮತ್ತವರ ಕುಟುಂಬ ಸದಸ್ಯರ ಪ್ರಾಣಕ್ಕೆ ಅಪಾಯವಿದೆಯೆಂದು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.
Bengaluru Crime: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೀತಿ ವಿಚಾರಕ್ಕೆ ಎಲ್ಲರೆದುರೇ ವಿದ್ಯಾರ್ಥಿನಿ ಮರ್ಡರ್
ವಿಚಾರಣೆಗೆ ಹಾಜರಾದ ರವಿಯ ಪತ್ನಿ ಪರ ವಕೀಲರು ಸಹ ಇದೇ ಆತಂಕವನ್ನು ನ್ಯಾಯಲಯದ ಮುಂದೆ ವ್ಯಕ್ತಪಡಿಸಿದರು. ಈ ಎಲ್ಲ ಅಂಶ ಪರಿಗಣಿಸಿದ ಹೈಕೋರ್ಚ್, ಅರ್ಜಿ ಕುರಿತ ಮುಂದಿನ ವಿಚಾರಣೆ ಅಥವಾ ನ್ಯಾಯಾಲಯದ ಆದೇಶದವರೆಗೂ ಯಾವುದೇ ಸಂದರ್ಭದಲ್ಲೂ ರವಿ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದರೆ ಬೆಂಗಳೂರು ಬಿಟ್ಟು ಹೋಗುವುದಿಲ್ಲ ಎಂಬುದಾಗಿ ದೃಢೀಕರಿಸಿ, ರಿಜಿಸ್ಟ್ರಾರ್‌ಗೆ ರವಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.